06-02-2022, 1:44 PM
ಯುವವಾಹಿನಿ (ರಿ.) ಕೂಳೂರು ಘಟಕದ 2022-23 ನೇ ಸಾಲಿನ 7 ನೇ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ 06-02-2022 ರ ಭಾನುವಾರದಂದು ಕೂಳೂರು ಮಿನಿ ಚರ್ಚ್ ಹಾಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ಶ್ರೀ ಗೋಕರ್ಣಾಥ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಎಚ್.ಎಸ್ ಸಾಯಿರಾಮ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಮಾಜಮುಖಿ ಕಾರ್ಯಗಳೊಂದಿಗೆ ಯುವಕರ ಯುವವಾಹಿನಿ ತಂಡವು ಇನ್ನಷ್ಟು ಬಲಿಷ್ಠ ಗೊಳ್ಳಲಿ ಎಂದು ಶುಭ […]
Read More
20-11-2019, 3:21 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ಸ್ನೇಹ ಸಮ್ಮಿಲನ 2019 ಕಾರ್ಯಕ್ರಮವು ದಿನಾಂಕ 17.11.19 ರಂದು ಬಡ್ಡ ಕುದುರು ಮರಕಡ ಇಲ್ಲಿ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸದಸ್ಯರ ತಂಡ ಮರವೂರು ತಲುಪಿ, ಅಲ್ಲಿಂದ ದೋಣಿಯ ಮೂಲಕ ಕುದುರು ತಲುಪಿದೆವು. 10 ಗಂಟೆಗೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಲ್ಲಿನ ಸ್ಥಳೀಯರಾದ ಸದಾಶಿವ ಪೂಜಾರಿ ಹಾಗೂ ಭುಜಂಗ ರವರು ಇದ್ದರು. ಕಾರ್ಯಕ್ರಮದಲ್ಲಿ […]
Read More
14-11-2019, 3:45 PM
ದಿನಾಂಕ 14.11.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಸಂವೇದನಾ ಮಕ್ಕಳ ಆಶ್ರಮ ನಂತೂರು, ತಾರೆತೋಟ ಇಲ್ಲಿ ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ನಮ್ಮ ಘಟಕದ ವತಿಯಿಂದ ಎಲ್ಲಾ ಮಕ್ಕಳಿಗೂ 10,600 ರೂ ಪಾದರಕ್ಷೆಗಳನ್ನು ವಿತರಿಸಲಾಯಿತು. […]
Read More
30-10-2019, 4:16 PM
ನಮ್ಮ ಮನೆ ಹಬ್ಬ ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕಾರ್ಯಕ್ರಮವು ಘಟಕದ ಕೋಶಾಧಿಕಾರಿ ಇಂದಿರ ರವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಭಾಷ್ ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ಯುವವಾಹಿನಿ ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ. ಯು ಅಮೀನ್, ಮಾರ್ಗದರ್ಶಕರಾದ ಗಿರಿಧರ ಸನಿಲ್, ಕಾರ್ಯಕ್ರಮದ ಸಂಚಾಲಕರಾದ ಇಂದಿರ […]
Read More
28-10-2019, 2:22 AM
ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ ವಾಸ ಮಾಡಲು ಮಮನೆಯೂ ಅಷ್ಟೇ ಮುಖ್ಯ. ಇದನ್ನರಿತ ಯುವವಾಹಿನಿ (ರಿ) ಕೂಳೂರು ಘಟಕವು ಅನಾರೋಗ್ಯರೂ, ಕಡುಬಡವರೂ ಆದ ಗುರುವಪ್ಪ ಪೂಜಾರಿ ಯವರ ಮನೆಯ ದುರಸ್ಥಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿತು. ಆ ಯೋಜನೆಯು ಪೂರ್ಣಗೊಂಡು, ದೀಪಾವಳಿಯ ಶುಭ ದಿನ ದಿನಾಂಕ 28.10.19 ರಂದು ಸಂಜೆ 6 ಗಂಟೆಗೆ ಸರಿಯಾಗಿ ದೀಪ ಬೆಳಗುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಭಾವನಾತ್ಮಕ […]
Read More
24-10-2019, 2:19 AM
ದಿನಾಂಕ 24.10.19 ರಂದು ಸಂಜೆ 5.30 ಕ್ಕೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ 5 ಕಡು ಬಡವ ಕುಟುಂಬಕ್ಕೆ ದೀಪಾವಳಿ ಆಚರಿಸಲು ಹಾಗೂ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಮೊದಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ 20 ಜನ ಸದಸ್ಯರೊಂದಿಗೆ ಪದ್ಮನಾಭ ಕುಲಾಲ್, ದಿ. ಗೋಪಾಲ ಪೂಜಾರಿ, ಅಪ್ಪು ಆಚಾರಿ, ಗುರುವಪ್ಪ ಪೂಜಾರಿ ಒಟ್ಟು 5 ಮನೆಗಳಿಗೆ ವಿತರಿಸಲಾಯಿತು. […]
Read More
22-10-2019, 4:28 AM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 18 ರಿಂದ 21 ರವರೆಗೆ ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ ಹಮ್ಮಿಕೊಂಡಿತು. ಘಟಕದ ಉಪಾಧ್ಯಕ್ಷರಾದ ಪವಿತ್ರ ಅಮೀನ್ ರವರ ಸಂಚಾಲಕತ್ವದಲ್ಲಿ 40 ಜನರ ತಂಡ ದಿನಾಂಕ 18.10.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರಟು ಕಮಲಶಿಲೆ ದೇವರ ದರ್ಶನ ಪಡೆದು, ಪ್ರಯಾಣ ಮುಂದುವರೆಸಿ 19.10.19 ರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಹೊಸಪೇಟೆ ತಲುಪಿ ಅಲ್ಲಿ ಉಪಹಾರದ ನಂತರ ಹಂಪಿ ತಲುಪಿದೆವು. […]
Read More
02-10-2019, 8:38 AM
ದಿನಾಂಕ 2.10.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ 150 ನೇ ಗಾಂಧಿ ಜಯಂತಿ ಪ್ರಯುಕ್ತ ಭಾರತಿ ಪದವಿಪೂರ್ವ ಕಾಲೇಜು, ನಂತೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತಿ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯದರ್ಶಿ ಕೃಷ್ಣ ನೀರಮೂಲೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಉಪಾಧ್ಯಕ್ಷರಾದ ಪವಿತ್ರ. ಯು. ಅಮೀನ್ ರವರು ದೀಪ ಬೆಳಗಿಸುವುದರ ಮೂಲಕ ಮಾಡಿದರು. ನಂತರ ಮಾತನಾಡಿದ ಇವರು ಸ್ವಚ್ಛತೆ ಎಂಬುದು ನಮ್ಮ ಮನೆಯಲ್ಲಿ ಪ್ರಾರಂಭವಾಗಿ […]
Read More
23-09-2019, 9:33 AM
ಯುವವಾಹಿನಿ ಕೂಳೂರು ಘಟಕವು ಕ್ರಿಯಾಶೀಲತೆಗೆ ಹೆಸರುವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವವಾಹಿನಿಯ ಇತಿಹಾಸದಲ್ಲೇ ವಿಭಿನ್ನತೆ ತಂದುಕೊಟ್ಟಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಹೇಳಿದರು. ಅವರು ದಿನಾಂಕ 22.09.19 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ನಡೆದ ಯುವಜನತೆಯ ಪ್ರೇರೇಪಣೆಗಾಗಿ ಯೂತ್ ಫೆಸ್ಟ್ 2019 ನಮ್ಮ ಚಿತ್ತ ಪ್ರತಿಭೆಗಳ ಅನಾವರಣದತ್ತ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಮಂಗಳೂರು ನಗರ ಪೂರ್ವ ಪೋಲಿಸ್ ಠಾಣೆಯ ನಿರೀಕ್ಷಕರಾದ ಶಾಂತರಾಮ್ ಕುಂದಾರ್ ಕಾರ್ಯಕ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ […]
Read More
13-09-2019, 8:54 AM
ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಕೂಳೂರು ಘಟಕದ ವತಿಯಿಂದ *ಚಿರಂತನ ವೃದ್ಧಾಶ್ರಮ* ಸುರತ್ಕಲ್ ಇಲ್ಲಿಗೆ ಭೇಟಿ ನೀಡಿ, ಅಲ್ಲಿನ ಹಿರಿಯ ಚೇತನರಿಗೆ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಿದೆವು. ನಂತರ ಹಿರಿಯ ಚೇತನರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಸದಸ್ಯರೆಲ್ಲರೂ ಸುಮಾರು 2 ಗಂಟೆಗಳ ಕಾಲ ಅವರೊಂದಿಗೆ ಬೆರೆತು, ಕುಣಿದಾಡಿ ಸಂತಸಪಟ್ಟೆವು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್,ಕಾರ್ಯದರ್ಶಿ ಮಧುಶ್ರೀ […]
Read More