ಕೂಳೂರು :- ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೂಳೂರು ಘಟಕ ಹಾಗೂ ಲಯನ್ಸ್ ಮತ್ತು ಲಿಯೋಕ್ಲಬ್ ಪಲ್ಗುಣಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭವು ದಿನಾಂಕ 15 ಆಗಸ್ಟ್ 2022ರ ಸೋಮವಾರ ದಂದು ಫಲ್ಗುಣಿ ಸಭಾಂಗಣ ಕೂಳೂರಿನಲ್ಲಿ ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಯ ಬಂಗೇರ ಇವರು ಧ್ವಜಾರೋಹಣವನ್ನು ಮಾಡಿದರು. ಎಲ್ಲರೂ ರಾಷ್ಟ್ರ ಗೀತೆಯನ್ನು ಹಾಡಿದರು. ಲಿಯೋ ಕ್ಲಬ್ ನ ಉಪಾಧ್ಯಕ್ಷೆ ಅಂಕಿತ ದೇವಾಡಿಗ ಅವರು ಧ್ವಜ ನಮನವನ್ನು ಓದಿದರು. ಧ್ವಜಾರೋಹಣವನ್ನು ಮಾಡಿದ ಜಯ ಬಂಗೇರ ಅವರು ಸ್ವಾತಂತ್ರ್ಯ ಮಹೋತ್ಸವದ ಬಗ್ಗೆ ಮಾತನಾಡಿ, ಸ್ವಚ್ಛತಾ ಅಭಿಯಾನದ ಬಗ್ಗೆ ಒಲವು ತೋರಿಸಬೇಕೆಂದು ಯುವ ಜನತೆಗೆ ಹೇಳಿದರು.
ಲಯನ್ಸ್ ಕ್ಲಬ್ ಫಲ್ಗುಣಿ ಇದರ ಅಧ್ಯಕ್ಷರಾದ ಲೋಕೇಶ್ ಕೋಟ್ಯನ್ ಅವರು ದೇಶ ಸೇವೆಯೊಂದಿಗೆ ಸಮಾಜ ಸೇವೆಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಫಲ್ಗುಣಿ ಇದರ ಕೋಶಾಧಿಕಾರಿ ಶ್ರವಣ್ ಕುಮಾರ್, ಲಿಯೋ ಜಿಲ್ಲಾ ವಲಯ ಅಧ್ಯಕ್ಷರಾದ ದೀಕ್ಷಿತ ಕೋಟ್ಯಾನ್, ಲಿಯೋ ಕ್ಲಬ್ ಫಲ್ಗುಣಿ ಇದರ ಅಧ್ಯಕ್ಷರಾದ ಶ್ರವಣ್, ಯುವವಾಹಿನಿ (ರಿ.) ಕೂಳೂರು ಘಟಕದ ಜೊತೆ ಕಾರ್ಯದರ್ಶಿ ತುಳಸಿ ಸುಜೀರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ನಯನ ರಮೇಶ್, ಎರಡನೇ ಉಪಾಧ್ಯಕ್ಷರಾದ ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು , ಸದಸ್ಯರು, ಲಯನ್ಸ್ ಮತ್ತು ಲಿಯೋ ಕ್ಲಬ್ ಫಲ್ಗುಣಿ ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು. ದೇಶ ಭಕ್ತಿ ಗೀತೆಯನ್ನು ನಯನ ರಮೇಶ್, ತುಳಸಿ ಸುಜೀರ್, ಮಮತಾರಾಜ್ ಹಾಡಿದರು. ಕೊನೆಗೆ ಜೊತೆ ಕೋಶಾಧಿಕಾರಿ ಧನ್ಯವಾದ ಸಲ್ಲಿಸಿದರು.. ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.