Yuvavahini

ಉಡುಪಿ

ಸದೃಡ ಸಮಾಜದ ನಿರ್ಮಾಣ ಯುವ ಸಮುದಾಯದ ಧ್ಯೇಯವಾಗಿರಬೇಕು : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಸದೃಡ ಸಮಾಜದ ನಿರ್ಮಾಣ ಯುವ ಸಮುದಾಯದ ಮುಖ್ಯ ಧ್ಯೇಯವಾಗಿರಬೇಕು, ಈ ನಿಟ್ಟಿನಲ್ಲಿ ಯುವವಾಹಿನಿ ಉಡುಪಿ ಘಟಕದ ಕಾರ್ಯ ಶ್ಲಾಘನೀಯ ಎಂದು ವಿದಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ದಿನಾಂಕ‌ 15.07.2018 ರಂದು ಉಡುಪಿ ಬಲಾಯಿಪಾದೆ ಯುವವಾಹಿನಿ ಸಭಾಂಗಣದಲ್ಲಿ ನಡೆದ ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾನಿಧಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು. ಉಡುಪಿಯ ಎಡಿಷನಲ್ ಎಸ್ಪಿ ಕುಮಾರ ಚಂದ್ರ ಮಾತನಾಡಿ ಐಎಎಸ್, ಐಪಿಎಸ್ […]

Read More

ವಿಶ್ವ ಯೋಗ ದಿನಾಚರಣೆ

ಉಡುಪಿ : ಯುವವಾಹಿನಿ ಉಡುಪಿ ಘಟಕವು ವಿಶ್ವ ಯೋಗ ದಿನಾಚರಣೆಯನ್ನು ಬಲಾಯಿ ಪಾದೆಯ ನೂತನ ಸಭಾಂಗಣದಲ್ಲಿ ಆಚರಿಸಿತು. ಯೋಗ ಶಿಕ್ಷಕಿ ಶ್ರೀಮತಿ ಜ್ಯೋತಿಯವರು ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿ ಕಾರ್ಯಕ್ರಮವನ್ನು ಆರಂಭಿಸಿದರು.ಅಧ್ಯಕ್ಷರಾದ ಶ್ರೀ ಅಶೋಕ್ ಕೋಟ್ಯಾನ್, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಮಹಿಳಾ ಸಂಘಟನಾ ನಿರ್ದೇಶಕಿ ವನಿತಾ ರಮೇಶ್, ಉಪಾಧ್ಯಕ್ಷರಾದ ಬಿ ಎಸ್ ನಾರಾಯಣ್, ನಿಕಟ ಪೂರ್ವ ಅಧ್ಯಕ್ಷರಾದ ರಮೇಶ್ ಕುಮಾರ್,ಮಾಜಿ ಅಧ್ಯಕ್ಷರಾದ ಶಂಕರ್ ಪೂಜಾರಿ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಉಪಸ್ಥಿತರಿದ್ದರು. […]

Read More

ಯುವವಾಹಿನಿ ಉಡುಪಿ : ಹಸಿರು ಉಸಿರು ಚಾಲನೆ

. ಉಡುಪಿ‌ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಹಸಿರು ಉಸಿರು ಕಾರ್ಯಕ್ರಮಕ್ಕೆ ಉಡುಪಿಯ ಬಲಾಯಿಪಾದೆ ಜಂಕ್ಷನ್ ಬಳಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವವಾಹಿನಿ ಉಡುಪಿ ಘಟಕದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಉದ್ಯಾವರ ಮಾತನಾಡಿ ನಮ್ಮ ಪಕೃತಿಯ ಉಳಿವಿಗಾಗಿ ಶ್ರಮಿಸುವುದು ನಮ್ಮ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರವೇ ನಮ್ಮ ಉಸಿರು, ನಮ್ಮ ಪರಿಸರ ಹಸಿರಾಗಿದ್ದಲ್ಲಿ ಉಸಿರು ಸ್ವಚ್ಚ ವಾಗಿರುತ್ತದೆ. ನಮ್ಮ ಪರಿಸರ ಸಮೃದ್ಧ ಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ನಾವೂ ಉತ್ತಮ ಕೊಡುಗೆ ನೀಡೋಣ ಎಂದು ಕರೆ […]

Read More

ಯುವವಾಹಿನಿ ಎಂಬುದು ದೇಗುಲ : ಜಯಾನಂದ

ಉಡುಪಿ : ಸಾಮೂಹಿಕ ಪ್ರಯತ್ನದಿಂದ ಮಾತ್ರ ಮಾದರಿ ಸಂಘಟನೆ ನಿರ್ಮಾಣ ಸಾಧ್ಯ, ಹಾಗೂ ಯುವವಾಹಿನಿ ಎಂಬ ದೇವಾಲಯದಲ್ಲಿ ಅಧ್ಯಕ್ಷರು ಅರ್ಚಕರಾಗಿ ಸದಸ್ಯರು ಭಕ್ತಾದಿಗಳೆಂಬ ಪರಿಕಲ್ಪನೆಯಲ್ಲಿ ಯುವವಾಹಿನಿ ಸಾಗುತ್ತಿರುವುದು ಶ್ಲಾಘನೀಯ ಎಂದು ಮೆಸ್ಕಾಮ್ ಕಾರ್ಯಪಾಲಕ‌ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 10.06.2018 ರಂದು ಉದ್ಯಾವರ ಬಲಾಯಿಪಾದೆ ಯುವವಾಹಿನಿ ಸಭಾಭವನದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ 2018-19 ನೇ ಸಾಲಿನ‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರ್ […]

Read More

ಅಧ್ಯಕ್ಷರಾಗಿ ಅಶೋಕ್ ಕೋಟ್ಯಾನ್ ಆಯ್ಕೆ

ಯುವವಾಹಿನಿ (ರಿ) ಉಡುಪಿ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಅಶೋಕ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ, ಪದಾಧಿಕಾರಿಗಳು : ಅಧ್ಯಕ್ಷರು : ಅಶೋಕ್ ಕೋಟ್ಯಾನ್ ಉಪಾಧ್ಯಕ್ಷರು : ನಾರಾಯಣ್ .ಬಿ.ಎಸ್ ಕಾರ್ಯದರ್ಶಿ : ಪ್ರವೀಣ್ ಪೂಜಾರಿ ಜತೆ ಕಾರ್ಯದರ್ಶಿ : ಮಹಾಬಲ ಅಮೀನ್ ಕೋಶಾಧಿಕಾರಿ : ಯೋಗೀಶ್ ಕೋಟ್ಯಾನ್ ಸಂಘಟನಾ ಕಾರ್ಯದರ್ಶಿ : ಭಾರತಿ ಭಾಸ್ಕರ್ ಸುವರ್ಣ ನಿರ್ದೇಶಕರು : ವ್ಯಕ್ತಿತ್ವ ವಿಕಸನ : ಮಾಲತಿ ಅಮೀನ್ ಕ್ರೀಡೆ ಮತ್ತು ಆರೋಗ್ಯ : ಸುಜಿತ್ ಕುಮಾರ್ ಸಮಾಜ ಸೇವೆ […]

Read More

ಯುವವಾಹಿನಿ ಉಡುಪಿ ಘಟಕದ ಸಭಾಂಗಣ, ಕಛೇರಿ ಉದ್ಘಾಟನೆ

ಉಡುಪಿ : ಯುವವಾಹಿನಿ ಸಂಘಟನೆಯ ಪ್ರತಿಷ್ಠಿತ ಘಟಕ ‌ಯುವವಾಹಿನಿ(ರಿ) ಉಡುಪಿ ಘಟಕದ ಯುವವಾಹಿನಿ ಸಭಾಂಗಣ ಮತ್ತು ಕಛೇರಿಯ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಉದ್ಯಾವರ ಬಲಾಯಿಪಾದೆಯ ನಾಗಪ್ಪ ಕಾಂಪ್ಲೆಕ್ಸ್ ನಲ್ಲಿ ಮಾಲಕ ಅಶೋಕ್ ಎನ್.ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಯುವವಾಹಿನಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಯುವವಾಹಿನಿ ಬೆಳವಣಿಗೆಗೆ ಉಡುಪಿ ಘಟಕದ ಸಭಾಂಗಣ ಸಹಕಾರಿಯಾಗಿದೆ. ಇದುವರೆಗೆ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಕಾರ್ಯ ನಡೆಸುತ್ತಾ […]

Read More

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ. ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು. ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ […]

Read More

ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ : ಸುಮತಿ

 ಉಡುಪಿ :  ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಹಾಗೂ ತನ್ನ ಸಾಧನೆಯ ಹಿಂದೆ ಕಷ್ಟದ ದಿನಗಳಿದ್ದವು ಅವೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವೀಯಾಗಿದ್ದೇನೆ ಎಂದು ಶಾಲಾ ಮಕ್ಕಳ ಮಹಿಳಾ ವಾಹನ ಚಾಲಕಿ ಸುಮತಿ ತಿಳಿಸಿದರು. ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಜರುಗಿದ ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ […]

Read More

ಜೀವನ ಮೌಲ್ಯ ಅಳವಡಿಸಿ : ಯಶವಂತ ಪೂಜಾರಿ

 ಉಡುಪಿ: ಪ್ರಸ್ತುತ ಇರುವ ಸ್ಥಿತಿಯಿಂದ ಉತ್ತಮ ಸ್ಥಿತಿಯತ್ತ ಕೊಂಡೋಯ್ಯುವುದೇ ಸಂಸ್ಕಾರ, ಮಾನವ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾಧವನಾಗುತ್ತಾನೆ, ಇದಕ್ಕೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಇಂತಹ ಕಾರ್ಯಾಗಾರವನ್ನು ನಿರಂತರ ನಡೆಸುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಉಡುಪಿ ಬಲೈಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಬಹು […]

Read More

ಸೂಪರ್ ಸ್ಪಷ್ಯಾಲಿಟಿ ಆರೋಗ್ಯ ಶಿಬಿರ

ಯುವವಾಹಿನಿ (ರಿ) ಉಡುಪಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೆಮ್ತೂರು,ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ, ದಿನಾಂಕ 12.11.2017 ರಂದು ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಕೆಮ್ತೂರು, ಉಡುಪಿ ಇಲ್ಲಿ ಜರುಗಿತು . ಯುವವಾಹಿನಿ(ರಿ) ಉಡುಪಿ ಘಟಕವು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಿಬಿರವನ್ನು ದೀಪ ಬೆಳಗುವುದರ ಮೂಲಕ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!