ಉಡುಪಿ : ಯುವವಾಹಿನಿ ಉಡುಪಿ ಘಟಕವು ವಿಶ್ವ ಯೋಗ ದಿನಾಚರಣೆಯನ್ನು ಬಲಾಯಿ ಪಾದೆಯ ನೂತನ ಸಭಾಂಗಣದಲ್ಲಿ ಆಚರಿಸಿತು. ಯೋಗ ಶಿಕ್ಷಕಿ ಶ್ರೀಮತಿ ಜ್ಯೋತಿಯವರು ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿ ಕಾರ್ಯಕ್ರಮವನ್ನು ಆರಂಭಿಸಿದರು.ಅಧ್ಯಕ್ಷರಾದ ಶ್ರೀ ಅಶೋಕ್ ಕೋಟ್ಯಾನ್, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಮಹಿಳಾ ಸಂಘಟನಾ ನಿರ್ದೇಶಕಿ ವನಿತಾ ರಮೇಶ್, ಉಪಾಧ್ಯಕ್ಷರಾದ ಬಿ ಎಸ್ ನಾರಾಯಣ್, ನಿಕಟ ಪೂರ್ವ ಅಧ್ಯಕ್ಷರಾದ ರಮೇಶ್ ಕುಮಾರ್,ಮಾಜಿ ಅಧ್ಯಕ್ಷರಾದ ಶಂಕರ್ ಪೂಜಾರಿ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆಯ ಕಾಲ ಸಹ ಶಿಕ್ಷಕ ಶ್ರೀ ಗಿರೀಶ್ ಅವರೊಂದಿಗೆ ಯೋಗ ಹಾಗೂ ಪ್ರಾಣಾಯಾಮದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಯುವವಾಹಿನಿಯ ಸದಸ್ಯರು ಈ ಯೋಗ ಪ್ರಾತ್ಯಕ್ಷಿಕೆಯ ಉಪಯೋಗವನ್ನು ಪಡೆದುಕೊಂಡರು.
Good initiative, keep it up
Congratulations