ಯುವವಾಹಿನಿ(ರಿ) ಉಡುಪಿ ಘಟಕದ ಆಶ್ರಯದಲ್ಲಿ

ಗುರುಭ್ಯೋ ನಮಃ

 

ಉಡುಪಿ : ಯುವವಾಹಿನಿ(ರಿ) ಉಡುಪಿ ಘಟಕದ ಆಶ್ರಯದಲ್ಲಿ ದಿನಾಂಕ 9.9.18 ರಂದು ಗುರುಭ್ಯೋ ನಮಃ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಘಟಕದ ಸದಸ್ಯ ಶಿಕ್ಷಕರಿಗೆ ಅಭಿನಂದನೆ ಹಾಗೂ ಭಗವದ್ಗೀತೆಯ ಪ್ರತಿ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೖತ್ತ ಶಿಕ್ಷಕರಾದ ಶ್ರೀ ಕೃಷ್ಣ ಪೂಜಾರಿಯವರು ಮಾತನಾಡುತ್ತಾ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯ ಎಂದರು. ಸಭಾಧ್ಯಕ್ಷರಾದ ಯುವವಾಹಿನಿ(ರಿ) ಉಡುಪಿ ಘಟಕದ ಅಧ್ಯಕ್ಷ ಅಶೋಕ್ ಕೋಟ್ಯಾನ್ “ಇದು ನಮ್ಮ ಕರ್ತವ್ಯ ಆದುದರಿಂದ ನಮ್ಮವರೇ ಆದ ಈ ಶಿಕ್ಷಕರಿಗೆ ಗುರುಭ್ಯೋ ನಮಃ ಏರ್ಪಡಿಸಿದೆವು” ಎಂದರು
ತದನಂತರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರು ಆಟೋಟಗಳಲ್ಲಿ ಪಾಲ್ಗೊಂಡು ನಕ್ಕು ನಲಿದರು. ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರಮೇಶ್ ಮತ್ತು ಈ ಮಾಸದಲ್ಲಿ ಹುಟ್ಟು ಹಬ್ಬವನ್ನು ಹಂಚಿಕೊಂಡ ಕಿರಣ್ ಕುಮಾರ್, ಪ್ರವೀಣ್ ಪೂಜಾರಿ, ಸಂತೋಷ್ ಕುಮಾರ್ ಇವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

One thought on “ಗುರುಭ್ಯೋ ನಮಃ

Leave a Reply

Your email address will not be published. Required fields are marked *

error: Content is protected !!