ಅಧ್ಯಕ್ಷರಾಗಿ ಗುಣವತಿ ರಮೇಶ್ ಹಾಗೂ ಕಾರ್ಯದರ್ಶಿಯಾಗಿ ದಿಪೇಶ್ ರಾಜ್ ಜಿ ಆಯ್ಕೆ
27-01-2019, 4:41 PM
27-01-2019, 3:15 PM
ಸುರತ್ಕಲ್ : ಯುವವಾಹಿನಿ(ರಿ) ಸುರತ್ಕಲ್ ಘಟಕವು ಅತ್ಯಂತ ಹಿರಿಯ ಘಟಕಗಳಲ್ಲಿ ಒಂದಾಗಿದ್ದು ಬಹಳಷ್ಟು ಸಮಾಜ ಮುಖಿಯಾಗಿ ಮಾಡುತ್ತಿರುವ ಸೇವೆಯನ್ನು ಖ್ಯಾತ ಉದ್ಯಮಿ ಮ್ಯಾನೇಜಿಂಗ್ ಡ್ಯೆರೆಕ್ಟರ್ ಫಾಟ್ಗೆ ಗ್ರೂಫ್ ಆಪ್ ಕಂಪೆನಿಯ ಅಧ್ಯಕ್ಷ ಶೇಖರ್ ಕೆ.ಕರ್ಕೇರ ತಿಳಿಸಿದರು. ಇವರು ದಿನಾಂಕ 27/01/2019 ಅದಿತ್ಯವಾರದಂದು ಸುರತ್ಕಲ್ ಲಲಿತ್ ಹೊಟೇಲ್ ಇಂಟರ್ ನ್ಯಾಶನಲ್ ನಲ್ಲಿ ಜರಗಿದ ಯುವವಾಹಿನಿ(ರಿ) ಸುರತ್ಕಲ್ ಘಟಕದ 2019-2020ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ – ಸಾರಥ್ಯ 2019 ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ(ರಿ) ಸುರತ್ಕಲ್ ಘಟಕದ ಅಧ್ಯಕ್ಷ […]
19-10-2018, 3:12 PM
ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ ಮಂಗಳೂರು : ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 10.10.2018 ರಿಂದ 19.10.2018 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡಬಿದ್ರೆ, ಕೆಂಜಾರು-ಕರಂಬಾರು, ಶಕ್ತಿನಗರ, […]
16-09-2018, 3:22 AM
ಸುರತ್ಕಲ್ : ಬ್ರಹ್ಮ ಶ್ರೀ ನಾರಾಯಣಗುರುಗಳ ಜನನವಾದ ನಂತರ ನಮ್ಮ ಸಮಾಜ ತಲೆಯೆತ್ತಿ ನಡೆಯುವಂತಾಗಿದೆ ಹಾಗು ಭಜನೆ ಬೇಡ ಭೋಜನ ಬೇಕೆಂಬ ಈ ಸಮಾಜದಲ್ಲಿ ಭಜನಾ ಸ್ಪರ್ಧೆ ಯನ್ನು ಏರ್ಪಡಿಸಿ ಮಕ್ಕಳಿಗೆ ಧಾರ್ಮಿಕತೆ ತಿಳಿಯಪಡಿಸಿ ಸುರತ್ಕಲ್ ಘಟಕ ಉತ್ತಮ ಕಾರ್ಯವನ್ನು ಮಾಡಿರುತ್ತದೆ. ಹಿರಿದಾದುದನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸುವುದೇ ಭಕ್ತಿ. ಎಲ್ಲವನ್ನೂ ನಡೆಸುತ್ತಿರುವ ಶಕ್ತಿಯೇ ಬೇರೆ ಇದೆ. ತಾನು ಆ ಶಕ್ತಿಗಿಂತ ಬೇರೆ ಹಾಗೂ ಕಿರಿಯ ಎಂದು ಮಾನವ ಅಂದುಕೊಂಡಾಗ ಆ ಅದ್ಭುತ, ಅಗಮ್ಯ ಚೈತನ್ಯಕ್ಕೆ ನಮ್ಮನ್ನು ತಾವು […]
05-08-2018, 7:50 AM
ಮಂಗಳೂರು: ಕರಾವಳಿ ಕರ್ನಾಟಕದ ಅವಳಿ ಜಿಲ್ಲೆಗಳಲ್ಲಿ ಮೂವತ್ತು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಪನ್ನಗೊಂಡಿತು. ಸರಕಾರ ಮಾಡುವ ಕಾರ್ಯ ಯುವವಾಹಿನಿ ಮಾಡಿದೆ ಡಾ. ಜಯಮಾಲಾ ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿಯ ಕಾರ್ಯಸಾಧನೆ ಇತರರಿಗೆ […]
29-07-2018, 4:31 PM
ಕುಳಾಯಿ : ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಹೊಣೆಗಾರಿಕೆ ಪ್ರಾಮುಖ್ಯವಾಗಿದೆ. ಯುವವಾಹಿನಿ ಸಂಘಟನೆ ಯುವಕರಲ್ಲಿ ಶಿಕ್ಷಣ, ಸಂಘಟನೆ ಬಗ್ಗೆ ಜಾಗ್ರತಿ ಮೂಡಿಸಿ ಸುಸಂಸ್ಕ್ರತ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಟಿದ ಪೊನ್ನುಪೊಂಜೊವುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ತಿಳಿಸಿದರು. ಅವರು ದಿನಾಂಕ 29-07-2018ನೇ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ, ಯುವವಾಹಿನಿ(ರಿ) ಪಣಂಬೂರು ಘಟಕ ಮತ್ತು ಯುವವಾಹಿನಿ(ರಿ) ಸುರತ್ಕಲ್ […]
27-05-2018, 5:15 PM
ಮಂಗಳೂರು : ತಾಯಿ ಮನುಕುಲದ ಶಾಲೆಗೆ ಗುರುವಾಗಿದ್ದಾಳೆ, ಮನೆ ಎಂಬ ಪಾಠಶಾಲೆ ಹಾಗೂ ಪಾಕಶಾಲೆಗೆ ಶೋಧನೆ, ಸಂಶೋಧನೆಯ ಜ್ಞಾನಿ ವಿಜ್ಞಾನಿಯಾಗಿರುತ್ತಾಳೆ, ಪ್ರೀತಿಯ ಮುತ್ತಿಟ್ಟು, ಅನ್ನದ ತುತ್ತಿಟ್ಟು ಉಣಿಸಿ ತಣಿಸುವ ಅನ್ನಪೂರ್ಣೆ, ನಿದ್ದೆಗೆ ಲಾಲಿ ಜೋಗುಳ ಹಾಡಿ ಮಲಗಿಸುವ ಸಂಗೀತಗಾರ್ತಿ ಅಮ್ಮ, ಹೀಗೆ ಸಮಗ್ರ ಶಕ್ತಿಗೆ ಚೇತನದ ಅಮೃತದ ಸೆಲೆಯಾಗಿ ಸರ್ವರ ಹೃದಯದ ಆರಾಧನಾ ಮೂರ್ತಿಯಾಗಿರುತ್ತಾಳೆ ಎಂದು ಮುಲ್ಕಿ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಎಚ್ ತಿಳಿಸಿದರು. ಅವರು ದಿನಾಂಕ 27.05.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ […]
30-04-2018, 4:04 PM
ಯುವವಾಹಿನಿ (ರಿ) ಸುರತ್ಕಲ್ ಹಾಗೂ ಪಣಂಬೂರು ಘಟಕದ ಆಶ್ರಯದಲ್ಲಿ ದಿನಾಂಕ 30.04.2018 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಜಿ.ಎಸ್.ಟಿ.ತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸೋಪ್ಟ್ ಲಿಂಕ್ ಸಂಸ್ಥೆಯ ಮೆನೇಜರ್ ಬಾಲಕೃಷ್ಣ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್, ಯುವವಾಹಿನಿ ಪಣಂಬೂರು ಘಟಕದ ಅಧ್ಯಕ್ಷರಾದ ಉದಯ ಕುಮಾರ್ ಯುವವಾಹಿನಿ ಸುರತ್ಕಲ್ ಘಟಕದ ಸಲಹೆಗಾರರಾದ ಸಾಧು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸುರತ್ಕಲ್ […]
18-02-2018, 3:46 PM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 18.02.2018 ರಂದು ಸುರತ್ಕಲ್ ಯುವವಾಹಿನಿ ಸದಸ್ಯರ ಬೆಳದಿಂಗಳಲ್ಲಿ ಒಂದು ದಿನ ಕಾರ್ಯಕ್ರಮ ಜರುಗಿತು. ಘಟಕದ ಮಾಜಿ ಅಧ್ಯಕ್ಷರಾದ ರಿತೇಶ್ ಕುಮಾರ್ ಮನರಂಜನಾ ಆಟಗಳನ್ನು ಏರ್ಪಡಿಸುವ ಮೂಲಕ ಮಕ್ಕಳು, ಯುವಕರು, ಯುವತಿಯರು, ದಂಪತಿಯರು ಹಾಗೂ ಎಲ್ಲಾ ಸದಸ್ಯರಲ್ಲಿ ಪರಸ್ಪರ ಸಂತಸ ಮೂಡಿಸಿದರು. ಮಂಗಳೂರು ಮಾಹಾನಗರ ಪಾಲಿಕೆಯ ಸದಸ್ಯರಾದ ಪ್ರತಿಭಾ ಕುಳಾಯಿ , ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಸಲಹೆಗಾರರಾದ ಸಾಧು ಪೂಜಾರಿ , ಕೇಂದ್ರ […]
26-01-2018, 3:52 PM
ಯುವವಾಹಿನಿ ಸಂಸ್ಥೆಯು ಯುವಕರ ಆಶಾಕಿರಣ, ಶಿಸ್ತು, ಕ್ರೀಯಾಶೀಲತೆ, ಮೂಲಕ ನಿರಂತರ ಸಮಾಜಮುಖಿ ಕಾರ್ಯಗಳನ್ನು ನೀಡುವ ಮೂಲಕ ಯುವವಾಹಿನಿಯು ಸರ್ವರ ಪ್ರೀತಿಗೆ ಪಾತ್ರವಾಗಿದೆ, ಈ ನಿಟ್ಟಿನಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ಪಾತ್ರ ಶ್ಲಾಘನೀಯ, ಮುಂದಿನ ದಿನಗಳಲ್ಲಿ ಸುರತ್ಕಲ್ ಘಟಕ ಸಾಧನೆಯ ಶಿಖರವನ್ನೇರುವಂತಾಗಲಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 26.01.2018 ನೇ ಶುಕ್ರವಾರ ಸಸಿಹಿತ್ಲು, ಅಗ್ಗದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ 2018-19 […]