
27-07-2026, 10:00 PM
ಮಂಗಳೂರು, ಜುಲೈ 27: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುತ್ತಿರುವ “ಒಂದೇ ನಾಮ, ಒಂದೇ ಭಾವ” ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಜುಲೈ 27ರಂದು ಸಂಜೆ ಭಜನಾ ಸೇವೆಯು ಭಕ್ತಿಭಾವದಿಂದ ನೆರವೇರಿತು. ಈ ಸಂದರ್ಭದಲ್ಲಿ ಮಂಜುಳ ಪ್ರಭಾಕರ್ ಮತ್ತು ಬಳಗ, ಅಶೋಕನಗರ, ಮಂಗಳೂರು ಅವರ ಸಹಯೋಗದಲ್ಲಿ ಭಜನಾ ಸಂಕೀರ್ತನ ನಡೆಯಿತು. ಭಜನಾ ತಂಡದ ಸದಸ್ಯರು ಹರಿನಾಮ ಸ್ಮರಣೆಯೊಂದಿಗೆ ಭಕ್ತಿರಸಪೂರ್ಣ ಭಜನೆಗಳನ್ನು ಗಾಯನ ಮಾಡಿ, ಶ್ರೀ ಗೋಕರ್ಣನಾಥ […]
Read More

08-03-2026, 10:00 AM
ಬಜ್ಪೆ : ಯುವವಾಹಿನಿ(ರಿ) ಬಜ್ಪೆ ಘಟಕದ 2026 -27ನೇ ಸಾಲಿನ ಅಧ್ಯಕ್ಷರಾಗಿ ರೋಹಿತ್ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಪೂಜಾ ಕಿರಣ್ ಅತ್ತೋಳಿಗೆ ದ್ವಿತೀಯ ಉಪಾಧ್ಯಕ್ಷರು : ಶರ್ಮಿಳಾ ಚಂದ್ರಶೇಖರ್ ಕಾರ್ಯದರ್ಶಿ : ಸುಚಿತಾ ದೇವರಾಜ್ ಜೊತೆ ಕಾರ್ಯದರ್ಶಿ : ದಿವ್ಯಾ ಸುನಿಲ್ ಕೋಶಾಧಿಕಾರಿ : ಸಂದೀಪ್ ಪೂಜಾರಿ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಸಂಧ್ಯಾ ಸುನಿಲ್ ವ್ಯಕ್ತಿತ್ವ ವಿಕಸನ ನಿರ್ದೇಶಕರು : ದಯಾನಂದ್ ಅಮೀನ್ ಮಹಿಳಾ ಸಂಘಟನಾ ನಿರ್ದೇಶಕರು : […]
Read More

18-01-2026, 1:11 PM
ಕೂಳೂರು : ಯುವವಾಹಿನಿ ಸಂಸ್ಥೆಯು ಯಾವ ಉದ್ದೇಶದಿಂದ ಪ್ರಾರಂಭವಾಯಿತು ಎಂಬುದನ್ನು ಅರಿತು ಆ ದಿಕ್ಕಿನಲ್ಲಿ ಮುನ್ನಡೆಯುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರ, ವಿದ್ಯಾನಗರದ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಸುವರ್ಣ ಹೇಳಿದರು. ಅವರು ದಿನಾಂಕ 18-01-2026ರಂದು ಕೂಳೂರು ಫಲ್ಗುಣಿ ಸಭಾಂಗಣದಲ್ಲಿ ನಡೆದ ಯುವವಾಹಿನಿ (ರಿ) ಕೂಳೂರು ಘಟಕದ ಪದಗ್ರಹಣ–2026 ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯುವವಾಹಿನಿ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶವನ್ನು ಅರಿತು ಯುವ ಪೀಳಿಗೆಯು ಮುಂದಿನ […]
Read More

22-10-2025, 3:27 PM
ದಿನಾಂಕ 27/07/2025 ರಂದು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ) ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲಿಗೆ ಘಟಕದ ಸದಸ್ಯರು ಹಾಗೂ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಂತ ಅಲೋಶಿಯಸ್ ಸ್ನಾತಕೋತರ ವಿಭಾಗದಲ್ಲಿ ಮುಖ್ಯಸ್ಥರಾದ ಪ್ರೊ|ಡಾ| ರಾಕೇಶ್ ಕುಮಾರ್ ಹಾಗೂ ಸಾಹಿತಿಕಾರರು ಮತ್ತು ಸಂತ ಅಲೋಶಿಯಸ್ ಪಿಯು […]
Read More

21-10-2025, 3:40 PM
ಹಿರಿಯ ಭಜಕರಾದ ಶ್ರೀ ಮಾಧವ ಅಂಚನ್ ರವರ ಸಹಕಾರದಲ್ಲಿ ನಾಲ್ಕನೇ ವರುಷದ ” “ಮಾಧವ ಕೀರ್ತನೋತ್ಸವ” ಕಾರ್ಯಕ್ರಮವು ತಾ:14-09-2025 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಳಾಯಿ ಇದರ ಸಭಾಂಗಣದಲ್ಲಿ ನಡೆಯಿತು. ಮದ್ಯಾಹ್ನ ಘಟಕದ ಅಧ್ಯಕ್ಷರಾದ ಧನಿಶ್ ಕುಳಾಯಿ, ಹಿರಿಯರಾದ ಮಾಧವ ಅಂಚನ್, ಸಂಚಾಲಕರದ ಹರೀಶ್ ಪೂಜಾರಿ ಮತ್ತು ಮಾಜಿ ಅಧ್ಯಕ್ಷರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನೆ ಸಂಕೀರ್ತನೆ ಕಾರ್ಯಕ್ರಮದಲ್ಲಿ ಮೊದಲಿಗೆ ಪಣಂಬೂರು ಕುಳಾಯಿ ತಂಡದಿಂದ ಪ್ರಾರಂಭವಾಗಿ ನಂತರ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ […]
Read More

15-09-2025, 4:10 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜನುಮ ಮಹೋತ್ಸವದ ಪ್ರಯುಕ್ತ ಈ ಸಾಲಿನ ಮೊದಲ ಗೃಹಭಜನೆ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ ಅವರ ಮನೆಯಲ್ಲಿ ನೆರವೇರಿತು. ಘಟಕದ ಸದಸ್ಯರಾದ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಘಟಕದ ಸದಸ್ಯರಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಮೂಡಿ ಬಂತು. ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶ್ರೀಮತಿ ಅನಿತಾ ಕಮಲಾಕ್ಷ […]
Read More

14-09-2025, 4:52 PM
ಸಂಪ್ರದಾಯದ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು. ಆಟಿ ತಿಂಗಳು ಶುದ್ಧತೆಯ, ಶಾಂತಿಯ ಹಾಗೂ ತಾಳ್ಮೆಯ ಸಮಯವಾಗಿದೆ. ಇದರ ಆಚರಣೆಗಳು ಶರೀರ ಶುದ್ಧಿಕರಣ, ಮನಸ್ಸು ಸ್ಥಿರಗೊಳಿಸುವಿಕೆ, ಹಾಗೂ ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತವೆ. ಪ್ರಾಚೀನ ಸಂಪ್ರದಾಯಗಳ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು ಈ ಮೂಲಕ ತೋರುತ್ತದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.. ಅವರು ಘಟಕದ ವತಿಯಿಂದ ಭಾನುವಾರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು […]
Read More

14-09-2025, 4:05 PM
ನಾರಾಯಣಗುರುಗಳ ಸಂದೇಶ ಪ್ರಸ್ತುತ ಕಾಲಘಟ್ಟದಲ್ಲಿ ದೀಪಸ್ತಂಭದಂತೆ ಸಮಾಜವನ್ನು ಬೆಳಗಿಸುತ್ತಿದೆ : ಲಕ್ಷ್ಮಣ್ ಕುಲಾಲ್ ಅಗ್ರಬೈಲು ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ಭೇದಭಾವ, ಜಾತಿ ವೈಷಮ್ಯ, ಆರ್ಥಿಕ ಅಸಮಾನತೆ, ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚುತ್ತಿದೆ. ಇಂತಹ ಸಂದರ್ಭಗಳಲ್ಲಿ ನಾರಾಯಣಗುರುಗಳ ಸಮಾನತೆಯ ಸಂದೇಶ ಒಂದು ದೀಪಸ್ತಂಭವಾಗಿ ಕಾರ್ಯನಿರ್ವಹಿಸಿ ಸಮಾಜವನ್ನು ಬೆಳಗಿಸುತ್ತಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ತಿಳಿಸಿದರು ಅವರು ಯುವವಾಹಿನಿ ಬಂಟ್ಟಾಳ ತಾಲೂಕು ಘಟಕದ ಸದಸ್ಯ ಶ್ರವಣ್ ಕೊಟ್ಯಾನ್ ಬಿ.ಸಿರೋಡ್ ರವರ ಮನೆಯಲ್ಲಿ ನಡೆದ […]
Read More

13-08-2025, 2:11 PM
ಯುವವಾಹಿನಿ (ರಿ.) ವಿಟ್ಲ ಘಟಕ ದಿನಾಂಕ :17/03/2025 ನೇ ಸೋಮವಾರ ಸೇವಾಶ್ರಮ ಬೆಲ್ಮ ದೇರಳಕಟ್ಟೆಗೆ ಭೇಟಿ ನೀಡಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಮತ್ತು ಒಂದು ದಿನಕ್ಕೆ ಬೇಕಾಗುವ ಊಟದ ಖರ್ಚಿನ ಹಣವನ್ನು ನೀಡಲಾಯಿತು ಈ ಸಂದರ್ಭದಲ್ಲಿ ಘಟಕದ ಸದಸ್ಯರು ಉಪಸ್ಥಿತರಿದ್ದರು
Read More