11-08-2024, 4:26 AM
ಬೆಂಗಳೂರು: ಯುವವಾಹಿನಿ(ರಿ.) ಬೆಂಗಳೂರು ಘಟಕ ಆಯೋಜಿಸಿದಂತಹ ಆಟಿದ ಐತಾರ ಮತ್ತು ನನ್ನಲ್ಲಿರುವ ನಾಯಕ ಕಾರ್ಯಕ್ರಮವು 11-08-2024 ಆದಿತ್ಯವಾರ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಇನ್ಸ್ಟಿಟ್ಯೂಟ್, ರಾಜಾಜಿನಗರ ಕೈಗಾರಿಕಾ ಪ್ರದೇಶ ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರು ಸೇರಿಕೊಂಡು ನಾಲ್ಕು ತಂಡಗಳಾದ ಆಟಿದ ಬೊಳ್ಳಿಲು, ಆಟಿದ ಬರ್ಸ, ಆಟಿದ ಪಂಚಮಿ, ಆಟಿ ಕಳೆಂಜ ಹಾಗೂ ತಂಡಗಳನ್ನು ತಾಂಬೂಲ ಹಾಗೂ ಶಾಲು ಹಾಕಿ, ಗುಲಾಬಿ ಹೂವನ್ನು ನೀಡುವ ಮೂಲಕ ಸಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ […]
Read More
10-08-2024, 10:20 AM
ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ಆಟಿದ ಕಮ್ಮೆನ – 2024 ದಿನಾಂಕ 10-08-2024 ನೇ ಶನಿವಾರ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮೇಲಂತಸ್ತಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸದಾಶಿವ ಊರು ವಹಿಸಿದ್ದರು. ವಾಸ್ತವಿಕವಾಗಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷರು ಎಂ.ಕೆ ಪ್ರಸಾದ್ ಆಟಿಯ ವಿಶೇಷತೆ ಬಗ್ಗೆ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಿದೆ […]
Read More
09-08-2024, 3:50 AM
ಮುಲ್ಕಿ : ಕಳೆದ 22 ವರ್ಷದ ಹಿಂದೆ ಆರಂಭಗೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ವಿಶ್ವವ್ಯಾಪಿಯಾಗಿದ್ದು ವಿಶೇಷವಾಗಿದೆ ಎಂದು ಭಾರತ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ 22ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರು ರಿತೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ […]
Read More
09-08-2024, 3:39 AM
ಬಂಟ್ವಾಳ: ಯುವವಾಹಿನಿ (ರಿ) ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ-5 ಕಾರ್ಯಕ್ರಮವು ಸದಸ್ಯರು ಯೋಗೀಶ್ ಪೂಜಾರಿ ಕಲ್ಲಡ್ಕ ಇವರ ಗೃಹದಲ್ಲಿ ಜರಗಿತು. ಗುರುತತ್ವವಾಹಿನಿ ಮಾಲಿಕೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಪ್ರೇಮನಾಥ ಕೆ ಹಾಗೂ ಪ್ರಥಮ ಉಪಾಧ್ಯಕ್ಷರು ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಉದ್ಯೋಗ ಮತ್ತು ಭವಿಷ್ಯ ನಿರ್ದೆಶಕರು ಕಿರಣ್ ಪೂಂಜರೆಕೋಡಿ, ಸದಸ್ಯರು ಪ್ರಶಾಂತ್ ಏರಮಲೆ, ವಿಘ್ನೇಶ್ ಬೊಳ್ಳಾಯಿ, ಸೂರಜ್ ತುಂಬೆ, ಯತೀಶ್ ಬೊಳ್ಳಾಯಿ,ಸತೀಶ್ ಬಾಯಿಲ, […]
Read More
05-08-2024, 1:00 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 05-08-2024ರ ಸೋಮವಾರದಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿಜಯ್ .ಎಸ್. ಕುಕ್ಯಾನ್ ರವರ ಸಂಚಾಲಕತ್ವದಲ್ಲಿ ಯುವವಾಹಿನಿ ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ) ಸುರತ್ಕಲ್ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಹಾರ್ಮೋನಿಯಂ ಶ್ರೀ ಯುವರಾಜ್ ಬೊಳ್ಳಾಜೆ ನುಡಿಸಿದರು. ಮಂಗಳೂರು ಘಟಕದ ಅಧ್ಯಕ್ಷರಾದ ನಾಗೇಶ್ ರವರು ಸಾಪ್ತಾಹಿಕ ಸಂಕೀರ್ತನೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ದೇವರ ಆಶೀರ್ವಾದ […]
Read More
04-08-2024, 1:12 PM
ಮಂಗಳೂರು : 04/08/2024 ರಂದು ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಜನ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದು ನಂತರ ಘಟಕದ ಮಹಿಳಾ ಸದಸ್ಯರಿಂದ ಹಾಗೂ ಸಣ್ಣ ಮಕ್ಕಳಿಂದ ಜಾನಪದ ನೃತ್ಯ , ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಘಟಕದ ಸದಸ್ಯರ ಮಕ್ಕಳಿಂದ ಪ್ರಾರ್ಥನೆ ನಡೆಸಿ ಘಟಕದ ಅಧ್ಯಕ್ಷರಾದ ಗಣೇಶ್ ಕೆ […]
Read More
04-08-2024, 12:52 PM
ಮಂಗಳೂರು : ಕಂಕನಾಡಿ ಘಟಕದ ಸದಸ್ಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 04-08-2024ನೇ ಆದಿತ್ಯವಾರ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಘಟಕದ ಕಚೇರಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮಾನ್ಯ ಸುಂದರ್ ಸುವರ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 14 ಜನ ಸದಸ್ಯರು ಏಳು ತಂಡವಾಗಿ ಭಾಗವಹಿಸಿದ್ದರು ಹಾಗೂ ತೀರ್ಪುಗಾರರಾಗಿ ಕೊಡಿಯಲ್ ಬೈಲ್ ಶಾರದ ವಿದ್ಯಾಲಯದ ಶಿಕ್ಷಕಿ ಉಜ್ವಲ್ ಹಾಗೂ ಅಂಚನ್ ಕ್ಯಾಟರಿಂಗ್ […]
Read More
04-08-2024, 6:31 AM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ಘಟಕದ ಸಭಾಂಗಣದಲ್ಲಿ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಘಟಕದ ಸದಸ್ಯರೂ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂತ ಸಿಸಿಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾದ ವಾಸಂತಿ ಅಂಬಲಪಾಡಿಯವರು ಗುರುಪೂರ್ಣಿಮೆಯ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ 41 ವರ್ಷಗಳ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಘಟಕದ ಹಿರಿಯ ಸದಸ್ಯೆ ಶಿಕ್ಷಕಿ ಹೇಮಲತಾ ಕೃಷ್ಣ ಇವರ ಬಗ್ಗೆ ಮಾಜಿ ಅಧ್ಯಕ್ಷರಾದ ಪ್ರವೀಣ್ ಬೈಲೂರು ಇವರು ಮಾತನಾಡಿದ […]
Read More
31-07-2024, 12:26 PM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 31-07-2024 ರಂದು ಜರುಗಿದ ಕಾರ್ಗಿಲ್ ವಿಜಯ್ ದಿವಸ್ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು . ತಮ್ಮ ಸೈನ್ಯ ಜೀವನದ ಅನುಭವಗಳನ್ನು ಹಾಗೇ ಕೆಲವೊಂದು ಕಷ್ಟದ ಸಮಯದ ಸನ್ನಿವೇಶಗಳನ್ನು ಭಾವುಕರಾಗಿ ಹಂಚಿಕೊಂಡರು. ಯುವಕರು ಸೇನೆಗೆ ಸೇರಲು ಇಚ್ಛಿಸಿದರೆ ದಯವಿಟ್ಟು ಕೈಗಳಿಗೆ ಹಚ್ಚೆ ಹಾಕಬೇಡಿ , ಹಲ್ಲು ಕೀಳಬೇಡಿ, ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಅಗತ್ಯವಾಗಿರುತ್ತದೆ ಎಂದು ಕಿವಿ ಮಾತು […]
Read More
30-07-2024, 6:59 AM
ಕೊಲ್ಯ: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದ ಮುತಾಲಿಕೆಡ್…. ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಕೊಲ್ಯ ಸೋಮೇಶ್ವರ ಬೊಕ್ಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುಗಾರ್ತೆದ ಯುವವಾಹಿನಿ (ರಿ.) ಕೊಲ್ಯ ಘಟಕದ ನಿರೆಲ್ಡ್ …. ಆಟಿ ತಿಂಗೊಲ್ದ ಇಸೇಸ ಕೂಟ…. ಆಟಿ…..ಆಟಿ…..ಆಟಿ…. ಚೇವು , ಚೇಟ್ಲ, ಕನಿಲೆ ಗುಂಡ, ಚಿಲಿಂಬಿ, ಕೊಟ್ಟಿಗೆದ ಅರ್ತಿ ಪಿರ್ತಿದ ಭೇಟಿ…. ಉಡಲ್ ಸಂಪು ಮಲ್ತಿನ ತುಳುವನಾಡ್ ದ ಕಮ್ಮೆನ ಆಟಿ ಸೊಪ್ಪುದ ಚೀಯನ. ಬಾನ ಭಾಸ್ಕರೆ ಬಚ್ಚೆಲರಪುನ ಪೊರ್ತು, ಪಿರಣಿ, ಪಕ್ಕಿಲು […]
Read More