ಘಟಕಗಳು

ಯುವವಾಹಿನಿ (ರಿ) ಮುಲ್ಕಿ ಘಟಕದ ವತಿಯಿಂದ ಸದಸ್ಯರೊಳಗಿನ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪಾರಂಭಿಸಿದ ಕಾರ್ಯಕ್ರಮ ಮನೆಮನೆ ಭಜನೆ.

ಮುಲ್ಕಿ : ದಿನಾಂಕ 14 -09-2024 ರಂದು ಶನಿವಾರ ಸಂಜೆ 5:30ಕ್ಕೆ ಮುಲ್ಕಿಯ ಬ್ರಹ್ಮಶ್ರೀ ನಾರಾಯಣ ಗುರು ವರ್ಯರ ಸಾನಿಧ್ಯದಲ್ಲಿ ಮಂದಿರದ ಅರ್ಚಕರಾದ ಕೃಷ್ಣನ್ ಶಾಂತಿಯವರ ನೇತೃತ್ವದಲ್ಲಿ ಶ್ರೀಗುರುವರ್ಯರಿಗೆ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿ, ಘಟಕದ ಅಧ್ಯಕ್ಷರಾದ ರಿತೇಶ್ ಅಂಚನ್ ಇವರ ಮನೆಯಲ್ಲಿ ಭಜನಾ ಸಂಕೀರ್ತನೆ ಜರಗಿತು. ಘಟಕದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಪಾಲ್ಗೊಂಡರು. ಈ ಕಾರ್ಯಕ್ರಮದ ನೆನಪಿಗಾಗಿ ಬ್ರಹ್ಮಶ್ರೀ ಗುರುವರ್ಯರ ಚರಿತ್ರೆಯ ಪುಸ್ತಕವನ್ನು ಘಟಕದ ವತಿಯಿಂದ ನೀಡಲಾಯಿತು.

Read More

ಗುರುಗಳು ಶೋಷಿತ ವರ್ಗದ ಆಶಾಕಿರಣ : ಪ್ರಶಾಂತ್ ಏರಮಲೆ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಗಳು 1908 ರಲ್ಲಿ ತಲಶ್ಶೇರಿಯಲ್ಲಿ ನಿರ್ಮಾಣವಾದ ಶ್ರೀ ಜಗನ್ನಾಥ ದೇವಾಲಯದ ವಿಚಾರದಲ್ಲಿ ನಡೆಸಿದ ಹೋರಾಟದಂತೆ, ಅಂದು ನಡೆಸಿದ ಮೌನ ಕ್ರಾಂತಿಯ ಹೋರಾಟವು ಮನುಕುಲದ ಬದುಕಿನಲ್ಲಿ ಮೂಡಿದ ಆಶಾಕಿರಣವು ಪ್ರಸ್ತುತ ಕಾಲಘಟ್ಟದಲ್ಲಿಯೂ ಸಕಾಲಿಕವಾಗಿದೆ ಎಂದು ಪ್ರಶಾಂತ್ ತಿಳಿಸಿದರು. ಅವರು ದಿನಾಂಕ 12-09-2024 ನೇ ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಶಿವಾನಂದ ಎಂ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 11 ನೇ ಮಾಲಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ […]

Read More

ಗುರುವಂದನ ಕಾರ್ಯಕ್ರಮ

ಕಂಕನಾಡಿ: ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ದಿನಾಂಕ 12-09-2024 ರಂದು ಘಟಕದ ಕಛೇರಿಯಲ್ಲಿ ಸಂಜೆ ಗಂಟೆ 6:30ಕ್ಕೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನ ಕಾರ್ಯಕ್ರಮ ಆಚರಿಸಲಾಯಿತು. ಅಧ್ಯಕ್ಷರಾದ ರಾಹುಲ್ ಸನಿಲ್ ಇವರು ಸಭೆಗೆ ಬಂದ ಎಲ್ಲಾ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿದರು. ಘಟಕದ ಮತ್ತು ಪರಿಸರದ 3 ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗುರುವಂದನೆಯನ್ನು ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶ್ರೀಮತಿ ಶೀಲಾ ಟೀಚರ್ ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಪಡಿಸಿದರು. ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ […]

Read More

ಮದ್ಯಮುಕ್ತ ಮೆಹೆಂದಿ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಯುವವಾಹಿನಿ ತಂಡ

ಮೂಡುಬಿದಿರೆ : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ ಉದ್ದೇಶವನ್ನು ಇಟ್ಟುಕೊಂಡ ಯುವವಾಹಿನಿ (ರಿ.) ಮೂಡುಬಿದರೆ ಘಟಕವು ಪ್ರಾರಂಭಿಸಿದ ಮದ್ಯ ಮುಕ್ತ ಮೆಹಂದಿ ಕಾರ್ಯಕ್ರಮದ ಅಡಿಯಲ್ಲಿ ಯುವವಾಹಿನಿಯ 34 ನೇ ಘಟಕ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಇವರ ಧರ್ಮಪತ್ನಿಯ ತಮ್ಮನಾದ ಪಾಲಡ್ಕದ ಪೂಜಾರಿಬೆಟ್ಟು ನಿವಾಸಿ ಗ್ರಾಮಚಾವಡಿ ಘಟಕದ ಸದಸ್ಯ ಸುಕೇಶ್ ಪೂಜಾರಿ ಇವರು ತನ್ನ ಮದುವೆಯ ಮೆಹಂದಿ ಕಾರ್ಯಕ್ರಮವನ್ನು ತನ್ನ ಹುಟ್ಟೂರಾದ ಪಾಲಡ್ಕದ (ಮೂಡುಬಿದಿರೆ) ಮನೆಯಲ್ಲಿ ಬಹಳ ಸಾಂಪ್ರದಾಯಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾಜಿ […]

Read More

ಯುವವಾಹಿನಿ (ರಿ) ಪಡುಬಿದ್ರಿ ಘಟಕದ ಪದಗ್ರಹಣ : ವಿದ್ಯಾರ್ಥಿವೇತನ ವಿತರಣೆ : ಸಾಧನಾ ಸನ್ಮಾನ

ಪಡುಬಿದ್ರಿ : ಅವಿಭಜಿತ ಜಿಲ್ಲೆಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕದ ತತ್ವದಲ್ಲಿ ಆದರ್ಶತೆ ಮೆರೆದ ಸಂಸ್ಥೆ ಯುವವಾಹಿನಿ. ಈ ಸಂಘಟನೆ ತೆರೆಮರೆಯಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ಯುವಕರು ಸಮಾಜದಲ್ಲಿ ತಪ್ಪು ದಾರಿಗೆ ಹೋಗದೆ ಸರಿ ದಾರಿಯಲ್ಲಿ ಸಾಗುವ ಪಥ ತೋರಿಸುವ ಸಂಸ್ಥೆಯಾಗಿದೆ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ವೈ. ಸುಧೀರ್ ಕುಮಾರ್ ನುಡಿದರು. ಯುವವಾಹಿನಿ (ರಿ) ಪಡುಬಿದ್ರಿ ಘಟಕದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು 08-09-2024 ರಂದು ಪಡುಬಿದ್ರಿ ಬಿಲ್ಲವ […]

Read More

ಸಂಘಟನೆಯಿಂದ ಸಾಮಾಜಿಕ ಬಲವರ್ಧನೆ ಸಾಧ್ಯವಿದ್ದು, ಸಂಘಟನೆಯೊಂದು ಸಮಾಜಮುಖಿಯಾದ ತನ್ನ ಚಿಂತನೆಗಳಲ್ಲಿ ರಚನಾತ್ಮಕತೆಯನ್ನು ಅಳವಡಿಸಿಕೊಂಡಾಗ ಅದು ಸರ್ವಮಾನ್ಯತೆಯನ್ನು ಪಡೆದುಕೊಳ್ಳುತ್ತದೆ : ಉದ್ಯಮಿ ಲೋಕೇಶ್ ಪೂಜಾರಿ

ಮಂಗಳೂರು : ಯುವವಾಹಿನಿ (ರಿ) ಕಂಕನಾಡಿ ಘಟಕದ ಸಹಯೋಗದಲ್ಲಿ ದಿನಾಂಕ 08-09-2024 ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಲೋಕೇಶ್ ಪೂಜಾರಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದು ನುಡಿದರು. ಯುವವಾಹಿನಿ (ರಿ) ಕಂಕನಾಡಿ ಘಟಕ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ, […]

Read More

ಶಿಕ್ಷಣ – ಶಿಕ್ಷಕರ ವೃತ್ತಿಯ ಬಗ್ಗೆಯೂ ಒಲವು ಹೆಚ್ಚಾಗಲಿ: ಗಂಗಾಧರ ಪೂಜಾರಿ

ಕೊಣಾಜೆ : ಪ್ರಸ್ತುತ ಕಾಲದಲ್ಲಿ ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಆಗಬೇಕೆಂದು ಬಯಸುವವರೇ ಹೆಚ್ಚು. ಆದರೆ ಶಿಕ್ಷಕರಾಗಬೇಕೆನ್ನುವವರು ಬಹಳ ಕಡಿಮೆ. ಎಲ್ಲಾ ವೃತ್ತಿಯ ಮೂಲ ಬೇರು ಆಗಿರುವ ಶಿಕ್ಷಕ ವೃತ್ತಿಯೇ ಅತ್ಯಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವೃತ್ತಿಯ ಬಗ್ಗೆಯೂ ಹೆಚ್ಚು ಒಲವು ಅಗತ್ಯ ಎಂದು ನಿವೃತ್ತ ಶಿಕ್ಷಕರಾದ ಗಂಗಾಧರ ಪೂಜಾರಿ ಅವರು ಹೇಳಿದರು.‌ ಅವರು ಕೊಣಾಜೆ ಗ್ರಾಮ ಚಾವಡಿಯ ಯುವವಾಹಿನಿ (ರಿ) ಘಟಕದ ವತಿಯಿಂದ ಗುರುವಾರ 05-09-2024 ರಂದು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ […]

Read More

ಶಿಕ್ಷಕರ ದಿನಾಚರಣೆ

ಉಪ್ಪಿನಂಗಡಿ : ಯುವವಾಹಿನಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವ ಗುರು ವಂದನಾ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ ಸೋಮಸುಂದರ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ 05-09-2024ರಂದು ಅಪರಾಹ್ನ ನಡೆಸಲಾಯಿತು. ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಪೀಲ್ಯ ಮನೆ ಅಣ್ಣು ಪೂಜಾರಿಯವರನ್ನು ಅವರ ಪೀಲ್ಯ ಮನೆಯಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಅವಿಭಜಿತ ಪುತ್ತೂರು ತಾಲೂಕಿನ ಆಲಂತಾಯ ಗ್ರಾಮದ ಬಟ್ಲಡ್ಕ ಮನೆಯಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ಸಂಜೀವ […]

Read More

ಪುರಸಭೆಯ ಅಧ್ಯಕ್ಷ ವಾಸು ಪೂಜಾರಿಗೆ ಅಭಿನಂದನೆ

ಬಂಟ್ವಾಳ : ಯುವವಾಹಿನಿ (ರಿ) ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ವಾಸು ಪೂಜಾರಿ ಇವರನ್ನು ಅಭಿನಂದಿಸಲಾಯಿತು. ಯುವವಾಹಿನಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಪ್ರೇರಣೆ ಎಂದು ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಾಸು ಪೂಜಾರಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಕಾರ್ಯದರ್ಶಿ ಚೇತನ್ ಮುಂಡಾಜೆ, ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ, ನಾಗೇಶ್ ಪೂಜಾರಿ ನೈಬೇಲು, ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಮಾಜಿ ಅಧ್ಯಕ್ಷರಾದ ಟಿ.ರಾಮಚಂದ್ರ […]

Read More

ಗುರುಗಳ ತತ್ವಸಂದೇಶವನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೆ ನಿಜಾರ್ಥದ ಗುರುಪೂಜೆ : ಪ್ರೇಮನಾಥ್ ಬಂಟ್ವಾಳ.

ಬಂಟ್ವಾಳ : ಗುರುಗಳ ಸಂದೇಶದ ತತ್ವಾದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಆದರ್ಶ ಬದುಕಿನಲ್ಲಿ ಹೆಜ್ಜೆಹಾಕಿದಾಗ ಅದಕ್ಕಿಂತ ದೊಡ್ಡದಾದ ಗುರುಪೂಜೆ ಮತ್ತೊಂದಿಲ್ಲ . ಆರಾಧನೆಯ ಜೊತೆಗೆ ಗುರುಗಳ ಆದರ್ಶಗಳನ್ನು ಅಪ್ಪಿಕೊಳ್ಳುವ ಮನಸ್ಸು ನಮ್ಮದಾಗಬೇಕು ಎಂದು ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ ಕೆ ಅಭಿಪ್ರಾಯಪಟ್ಟರು. ಅವರು 170ನೇ ನಾರಾಯಣ ಗುರುಜಯಂತಿ ಆಚರಣೆಯ ಸಲುವಾಗಿ ಬಿ.ಸಿ.ರೋಡ್ ಯುವವಾಹಿನಿ ಕಛೇರಿಯಲ್ಲಿ ದಿನಾಂಕ 31-08-2024 ರಂದು ನಡೆದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು. ಮಾಜಿ ಅಧ್ಯಕ್ಷರು ರಾಮಚಂದ್ರ ಸುವರ್ಣ ದೀಪ ಬೆಳಗಿ ಉದ್ಘಾಟಿಸಿದರು. […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!