06-03-2024, 4:27 AM
ಉಡುಪಿ: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈಬರ್ ಕ್ರೈಂ ಮತ್ತು ಕಾನೂನು ಮಾಹಿತಿ ಕಾರ್ಯಾಗಾರ ದಿನಾಂಕ 6/03/2024 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜುನಾಥ್ ಆಗಮಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಉಪಯೋಗ ಮತ್ತು ದುರುಪಯೋಗ ಹಾಗೂ ಕೆಲವೊಂದು ಸಂದರ್ಭದಲ್ಲಿ ನಮಗಾಗುವ ವಂಚನೆಯ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುರೇಶ್ ರೈಯವರು ವಹಿಸಿದ್ದರು. ಘಟಕದ ಅಧ್ಯಕ್ಷೆ ಅಮಿತಾಂಜಲಿ, […]
Read More
05-03-2024, 12:23 PM
ಕಾಪು: ಯುವವಾಹಿನಿ(ರಿ.) ಕಾಪು ಘಟಕದ ವತಿಯಿಂದ ದಿನಾಂಕ 05-03-2024 ಮಂಗಳವಾರ ಸಾಯಂಕಾಲ 6.00ರಿಂದ 9.00ರವರೆಗೆ ಮಜೂರು ಗ್ರೀನ್ ವುಡ್ ರೆಸಾರ್ಟ್‌ನಲ್ಲಿ ಕುಟುಂಬ ಸಮ್ಮಿಲನ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಯುವವಾಹಿನಿ ಕಾಪು ಘಟಕದ ಅಧ್ಯಕ್ಷರು ಸೂರ್ಯನಾರಾಯಣ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೌಮ್ಯ ರಾಕೇಶ್, ಕಾಪು ಶ್ರೀ ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಅಧ್ಯಕ್ಷೆ ಸರಿತಾ ಸಾಲ್ಯಾನ್ ಮತ್ತು ಕಾಪು ಜೇಸಿಐ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಅವರನ್ನು ಸನ್ಮಾನಿಸಿ, […]
Read More
04-03-2024, 3:46 PM
ಉಡುಪಿ: ಮಾರ್ಚ್ 4 ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ರವಿವಾರ ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಅವರಿಗೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಹಿರಿಯ ಬೈದೇರುಗಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ ಅವರಿಗೆ ಪ್ರದಾನಿಸಲಾಯಿತು. ಸಮಾಜಸೇವಕ ಈಶ್ವರ ಮಲ್ಪೆ ಅವರ ಪರವಾಗಿ ಅವರ ಪತ್ನಿ ಗೀತಾ […]
Read More
03-03-2024, 5:52 PM
ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 03-03-2024 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಿಲ್ಲವ ಭವನದಲ್ಲಿ ನಡೆಯಿತು. ಪದಗ್ರಹಣ ಯುವವಾಹಿನಿ ಸಮಾರಂಭದಲ್ಲಿ ಹಳೆಯಂಗಡಿ ಘಟಕದ ಅಧ್ಯಕ್ಷರು ಕಿರಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಬಿಲ್ಲವ ಸಮಾಜ ಸೇವಾ ಸಂಘ(ರಿ.) ಹಳೆಯಂಗಡಿ ಅಧ್ಯಕ್ಷರು ಚಂದ್ರಶೇಖರ್ ನಾನಿಲ್ ದೀಪವನ್ನು ಬೆಳಗಿಸುವುದರ ಮೂಲಕ ನೆರವೇರಿಸಿದರು. 2024- 25 ನೇ ಸಾಲಿನ ಅಧ್ಯಕ್ಷರಾಗಿ ಹಿತಾಕ್ಷಿ ನಾರಾಯಣ್, ಕಾರ್ಯದರ್ಶಿ ಪೂರ್ಣಿಮಾ ಹಾಗೂ […]
Read More
03-03-2024, 5:45 AM
ಬಜಪೆ: ನಾರಾಯಣ ಗುರು ಸ್ವಾಮಿಯವರ ತತ್ವಾದರ್ಶದಂತೆ ಯುವವಾಹಿನಿಯು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ದೈಯ್ಯಗಳೊಂದಿಗೆ ಬಡವರ ಪಾಲಿಗೆ ಆಶಾಕಿರಣವಾಗಿ, ಯುವ ಜನತೆಗೆ ಬೇಕಾಗುವಂತಹ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈ ಸಮಾಜಕ್ಕೆ ಮಾದರಿಯಾದ ಸಂಘಟನೆಯಾಗಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿಯಾದ ಪದ್ಮರಾಜ್ ಆರ್. ತಿಳಿಸಿದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಶುಭನುಡಿಗೈದರು. ಅವರು ದಿನಾಂಕ 03/03/2024ರಂದು ಬಜಪೆ ಸಮುದಾಯ ಭವನದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ […]
Read More
02-03-2024, 4:24 AM
ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ನಾವು ಹಮ್ಮಿಕೊಂಡ ಮನೆ ಮನೆ ಭಜನೆ ಕಾರ್ಯಕ್ರಮ ದಿನಾಂಕ 02-03-2024 ಶನಿವಾರ ಘಟಕದ ಮಾಜಿ ಅಧ್ಯಕ್ಷರು ಯೋಗೀಶ್ ರಕ್ಷಿತಾ ಕೋಟ್ಯಾನ್ ರವರ ಮನೆಯಲ್ಲಿ ಭಜನಾ ಸಂಕೀರ್ತನೆ ನೆರವೇರಿತು. ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು ,ಮಾಜಿ ಅಧ್ಯಕ್ಷರು ಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Read More
25-02-2024, 5:18 PM
ಮೂಡುಬಿದಿರೆ: ಮುಂಡ್ಕೂರು ಕಜೆ-ಕುಕ್ಕುದಡಿ ಮಹಾಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ದಿನಾಂಕ 25-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 20 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
Read More
25-02-2024, 4:45 PM
ಕೂಳೂರು: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 27ನೇ ಸ್ವಚ್ಛತಾ ಅಭಿಯಾನವು ಸಂಘಟನಾ ಕಾರ್ಯದರ್ಶಿ ಮುಕೇಶ್ ರವರ ಸಂಚಾಲಕತ್ವದಲ್ಲಿ ಕೂಳೂರು ಪರಿಸರದಲ್ಲಿ ದಿನಾಂಕ 25/02/2024 ಭಾನುವಾರದಂದು ಹಮ್ಮಿಕೊಂಡಿದ್ದರು. ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ , ಭಾಸ್ಕರ್ ಕೋಟ್ಯಾನ್, ನಯನ ರಮೇಶ್ , ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಂಘಟನಾ ಕಾರ್ಯದರ್ಶಿ ಮುಕೇಶ್, ಕಾರ್ಯದರ್ಶಿ ನೈನಾ ಕೋಟ್ಯಾನ್ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
24-02-2024, 11:17 AM
ಕಂಕನಾಡಿ: ಯುವವಾಹಿನಿ (ರಿ.) ಕಂಕನಾಡಿ ಘಟಕ ಹಾಗೂ ಭಾರತ ಸರ್ಕಾರ ದತ್ತೋಪಂಥ, ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಗಾರವು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಸಭಾಂಗಣದಲ್ಲಿ ದಿನಾಂಕ 24-02-2024 ಶನಿವಾರದಂದು ನಡೆಯಿತು. ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೇಖಾ ಗೋಪಾಲ್ […]
Read More
23-02-2024, 5:52 PM
ಬಜಪೆ: ಯುವವಾಹಿನಿ ಬಜಪೆ ಘಟಕದ ಫೆಬ್ರವರಿ ತಿಂಗಳ ಮನೆ ಮನೆ ಭಜನಾ ಸಂಕೀರ್ತಣೆಯು ದಿನಾಂಕ 23/02/24 ರಂದು ಘಟಕದ ಪ್ರಧಾನ ಕಾರ್ಯದರ್ಶಿಯಾದ ದೀಕ್ಷಿತ್ ಅಮೀನ್ ಇವರ ಮನೆಯಲ್ಲಿ ಸಾಯಂಕಾಲ 6:00 ಗಂಟೆಯಿಂದ 7:00 ಗಂಟೆಯವರೆಗೆ ಅರ್ಥಪೂರ್ಣವಾಗಿ ನೆರವೇರಿತು.
Read More