05-11-2018, 3:29 PM
ಕೂಳೂರು : ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು .ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು,ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀ ಗುರುವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇರುವುದನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲ ಸಾಮಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]
Read More
04-11-2018, 5:25 PM
ಪೆರ್ಮುದೆ ಎಕ್ಕಾರು : ಯುವವಾಹಿನಿ (ರಿ) ಎಕ್ಕಾರು ಪೆರ್ಮುದೆ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಸಂದೇಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ಸಂದೇಶ್ ಪೂಜಾರಿ ಪೆರ್ಮುದೆ ಉಪಾಧ್ಯಕ್ಷರು : ಚಂದ್ರಹಾಸ್ ಪೂಜಾರಿ ಎಕ್ಕಾರು ಕಾರ್ಯದರ್ಶಿ : ಸಂದೇಶ್ ಕೋಟ್ಯಾನ್ ಪೆರ್ಮುದೆ ಜತೆ ಕಾರ್ಯದರ್ಶಿ : ರೋಹಿತ್ ಎಕ್ಕಾರು ಕೋಶಾಧಿಕಾರಿ : ಜಯಲಕ್ಷ್ಮಿ ಕೆ.ಪೂಜಾರಿ ಪೆರ್ಮುದೆ ಸಂಘಟನಾ ಕಾರ್ಯದರ್ಶಿ : ಶಿವರಾಮ್ ಕೋಟ್ಯಾನ್ ಪೆರ್ಮುದೆ ನಿರ್ದೇಶಕರು : ವ್ಯಕ್ತಿತ್ವ ವಿಕಸನ : ದೀಪಕ್ ಪೂಜಾರಿ ಪೆರ್ಮುದೆ ಉದ್ಯೋಗ ಮತ್ತು […]
Read More
04-11-2018, 4:43 PM
ಎಕ್ಕಾರು ಪೆರ್ಮುದೆ : ಯುವವಾಹಿನಿಯ 33 ನೇ ನೂತನ ಘಟಕ ಎಕ್ಕಾರು ಪೆರ್ಮುದೆ ಘಟಕವು ದಿನಾಂಕ 04.11.2018 ರಂದು ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಎಕ್ಕಾರು ಇಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯಗಳೊಂದಿನ ಯುವಜನರ ದ್ವನಿಯಾಗಿ ರೂಪುಗೊಂಡಿದೆ, ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಯುವವಾಹಿನಿ (ರಿ) […]
Read More
04-11-2018, 4:27 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ದಿನಾಂಕ 04/11/2018 ರಂದು ದೀಪಾವಳಿ ಪ್ರಯುಕ್ತ ” ದೀಪಾವಳಿ ಒರ್ಲ ಪೊರ್ಲು ” ಕಾರ್ಯಕ್ರಮ ಆಚರಿಸಲಾಯಿತು. ನಳಿನಿ ಟೀಚರ್ ರವರು ಕಾರ್ಯಕ್ರಮ ಉದ್ಘಾಟಿಸಿ ದೀಪಾವಳಿ ಆಚರಣೆ ಬಗ್ಗೆ ಮಾತನಾಡಿದರು. ನರಕಚತುರ್ದಶಿ, ಎಣ್ಣೆ ಸ್ನಾನ, ತುಳಸೀ ಪೂಜೆ, ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಗೋಪೂಜೆ , ಗೂಡುದೀಪ, ಮುಂತಾದ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದರು. ಘಟಕದ ಸಲಹೆಗಾರರಾದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ದೀಪಾವಳಿಯ […]
Read More
04-11-2018, 3:19 PM
ಬಂಟ್ವಾಳ : ದಿನನಿತ್ಯದ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ಪ್ರೇರೇಪಿಸುವ ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಹಜ, ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು , ಉದ್ದೇಶವನ್ನು ಸಾಧಿಸುವಂತೆ ಇರಬೇಕು. ಆದರೆ ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರುವುದಿಲ್ಲ ಉದಾಹರಣೆಗೆ ಜೀವನದಲ್ಲಿ ಯಾವ ಕೊರತೆ ಇಲ್ಲದಿದ್ದರೂ ಚೈತನ್ಯ ರಹಿತವಾದ ನಿರಾಶವಾದಿಗಳನ್ನು ನೋಡುತ್ತಿರುತ್ತೇವೆ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯವನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ ಕಿರಿಕಿರಿ […]
Read More
04-11-2018, 8:32 AM
ಬಂಟ್ವಾಳ : ಕಥೆ, ಕಾದಂಬರಿಕಾರರಾಗಿ, ನಟ ನಿರ್ದೇಶಕರಾಗಿ, ಪತ್ರಕರ್ತರಾಗಿ ರಾಜಕಾರಣಿಯಾಗಿ ತಮ್ಮ ಐದು ದಶಕಗಳ ಬದುಕಿನಲ್ಲಿ ಬಹುಮುಖ ಪ್ರತಿಭೆಯಿಂದ ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಕಲಾಸೇವೆ ಮಾಡಿ ಸಂದುಹೋದ ಸಾಹಿತಿ ವಿಶುಕುಮಾರ್ ರವರ ಬದುಕು ನಮಗೆ ಸದಾ ಅನುಕರಣೀಯ . ಅವರ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಟಿ.ಶಂಕರ ಸುವರ್ಣ ತಿಳಿಸಿದರು. ಅವರು ದಿನಾಂಕ 04.11.2018 ರಂದು ಬಿ.ಸಿ.ರೋಡ್ ಯುವವಾಹಿನಿ ಭವನದಲ್ಲಿ ಜರುಗಿದ ಯುವವಾಹಿನಿ […]
Read More
28-10-2018, 3:06 PM
ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು. ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು […]
Read More
24-10-2018, 2:50 AM
ವೇಣೂರು : ಜೀವನದಲ್ಲಿ ಏನಾದರೊಂದು ಸಾಧಿಸಬೇಕು, ಅದಕ್ಕೆ ವೈದ್ಯರು, ಇಂಜಿನಿಯರುಗಳೇ ಆಗಬೇಕೆಂದಿಲ್ಲ, ಕೃಷಿಕನಾಗಿಯೂ ಉತ್ತಮ ಸಾಧನೆ ಮಾಡಬಹುದು. ಪರಿಶ್ರಮ ಇದ್ದರೆ ಜೀವನದಲ್ಲಿ ಉತ್ತುಂಗಕ್ಕೇರಲು ಸಾಧ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ತಿಳಿಸಿದರು. ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ದಿನಾಂಕ ರಂದು ಜರುಗಿದ ಯುವವಾಹಿನಿ (ರಿ) ವೇಣೂರು ಘಟಕದ ಯುವವಾಹಿನಿ ಸೇವಾ ಯೋಜನೆ ಆಸರೆ ಇದರ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಸಮಾರಂಭದ ಉದ್ಘಾಟನೆಯನ್ನು ಯುವವಾಹಿನಿ […]
Read More
21-10-2018, 5:00 PM
ಕಂಕನಾಡಿ : 2018ರ ಅಕ್ಟೋಬರ್ 21ರಿಂದ24 ರವರೆಗೆ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ನಾರಾಯಣ ಗುರುಗಳ ತತ್ವಾದರ್ಶದಂತೆ ಜಾತಿ, ಮತ ಭೇದವಿಲ್ಲದೆ ಕಂಕನಾಡಿ ಘಟಕದ ಸದಸ್ಯರು ಹಾಗೂ ಇತರರು ಸೇರಿ ಒಟ್ಟು 53 ಸದಸ್ಯರು ಈ ಒಂದು ಯಾತ್ರೆಯಲ್ಲಿ ಭಾಗವಹಿಸಿದ್ದರು. ಶಿವಗಿರಿ ಮಠದ ಪೂಜ್ಯ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳ ಮಹಾ ಸಮಾಧಿ, ಕೆಲವು ಐತಿಹಾಸಿಕ ಸ್ಥಳಗಳು, ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಮಣ್ಯ ದೇವಸ್ಥಾನ , ಅರವಿಪುರಂ ದೇವಸ್ಥಾನ […]
Read More
21-10-2018, 3:37 PM
ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಒಂದಿಷ್ಟು ಮನರಂಜನೆಗೆ, ಒಂದಿಷ್ಟು ಸಂಘಟನೆಗೆ ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ಯುವವಾಹಿನಿ (ರಿ) ಯಡ್ತಾಡಿ ಘಟಕ ಆರಂಭಿಸಿದ ನಮ್ಮ ನಡೆಯ ಎರಡನೇ ಕಾರ್ಯಕ್ರಮ ನಮ್ಮ ನಡೆ, ಕಂಬಳಕಟ್ಟು ಕಡೆ, ಅಧ್ಯಕ್ಷರಾದ ಸತೀಶ ಪೂಜಾರಿಯವರ ಮನೆಯಲ್ಲಿ ದಿನಾಂಕ 21-10-2018 ರಂದು ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ಸದಸ್ಯರು ಭಾಗವಹಿಸದೇ ಇದ್ದರೆ ಯಾವುದೇ ಸಂಘಟನೆಯನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಅದೂ ಅಲ್ಲದೆ ಅದು ವ್ಯರ್ಥ ಕೂಡ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಯುವವಾಹಿನಿ ಪ್ರಾರಂಭಿಸಿದ ಕಾರ್ಯಕ್ರಮ […]
Read More