
10-11-2026, 9:34 AM
ಬಜಪೆ ನ 01 : ಕ್ರೀಡಾಸ್ಫೂರ್ತಿ, ಸಂಘಟನಾ ಶಕ್ತಿ ಹಾಗೂ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಯುವವಾಹಿನಿ (ರಿ.) ಬಜಪೆ ಘಟಕದ ಮಹಿಳಾ ಸದಸ್ಯರು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ಘಟಕಕ್ಕೆ ಹೆಮ್ಮೆ ತಂದಿದ್ದಾರೆ. ನವೆಂಬರ್ 1, 2026ರಂದು ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಕಿನ್ನಿಪದವು, ಬಜಪೆ ಇಲ್ಲಿ ಗುರುಕುಲ ಬಾಲ ಸಂಸ್ಕಾರ ಕೇಂದ್ರ ಕಿನ್ನಿಪದವು ಇದರ ಚತುರ್ಥ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಲಾಗಿದೆ. ಶ್ರೀ ಶನಿಮಹಾತ್ಮೆ ತಾಳಮದ್ದಳೆ ಹಾಗೂ […]
Read More

09-11-2026, 8:00 PM
ಮಂಗಳೂರು ನ 09 : ಹಬ್ಬಗಳ ಸಂಭ್ರಮವು ಕೇವಲ ನಮ್ಮ ಮನೆಗಳಿಗೆ ಸೀಮಿತವಾಗದೆ, ಸಮಾಜದ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕು ಮೂಡಿಸಬೇಕು ಎಂಬ ಆಶಯದೊಂದಿಗೆ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕವು ಬಿಜೈ ಕಾಪಿಕಾಡ್‌ನ ಚಿಣ್ಣರ ತಂಗುಧಾಮದಲ್ಲಿ ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ನವೆಂಬರ್ 9ರಂದು ಸಂಜೆ ನಡೆದ ಕಾರ್ಯಕ್ರಮವು ದೀಪ ಪ್ರಜ್ವಲನೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಮುಖ್ಯ ಅತಿಥಿಯಾಗಿ ಸಂತೋಷ್ ಕುಲಾಲ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ದೀಪಿಕಾ ಮನೋಜ್, ಕಾರ್ಯದರ್ಶಿ ಪ್ರಿಯಾ ಸುರೇಶ್ […]
Read More

08-11-2026, 8:00 PM
ಸುಳ್ಯ ನ 08 : ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ಮಹಾತ್ಮರನ್ನು ಗುಡಿ ಕಟ್ಟಿ ಆರಾಧನೆಗೆ ಮಾತ್ರ ಸೀಮಿತಗೊಳಿಸದೆ, ಅವರ ಚಿಂತನೆ ಮತ್ತು ಆದರ್ಶಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು. ಅವರು ನವೆಂಬರ್ 8ರಂದು ಸುಳ್ಯ ತಾಲೂಕು ಯುವವಾಹಿನಿ ಘಟಕದ ವತಿಯಿಂದ ಸುಳ್ಯದ ಕಾನತ್ತಿಲದಲ್ಲಿರುವ ಸುಂದರ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾದ ‘ಗುರುಸ್ಫೂರ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾರಾಯಣ ಗುರುಗಳ ತತ್ವಚಿಂತನೆ, ಸಾಮಾಜಿಕ ಪರಿವರ್ತನೆಯ ಸಂದೇಶ ಹಾಗೂ ಯುವವಾಹಿನಿ ಸಂಸ್ಥೆಯ […]
Read More

08-11-2026, 7:00 PM
ಕಡಬ ನ. 08 : ದೀಪಾವಳಿ ಎಂದರೆ ಕೇವಲ ಹಣತೆ ಬೆಳಗಿಸಿ ಪಟಾಕಿ ಸಿಡಿಸುವ ಹಬ್ಬವಲ್ಲ; ಮತ್ತೊಬ್ಬರ ಬದುಕಿನಲ್ಲಿ ಪ್ರೀತಿ, ವಿಶ್ವಾಸ ಹಾಗೂ ಸಂತೋಷದ ಬೆಳಕು ಮೂಡಿಸುವ ಮಾನವೀಯತೆಯ ಹಬ್ಬ ಎಂಬುದನ್ನು ಯುವವಾಹಿನಿ (ರಿ.) ಕಡಬ ಘಟಕವು ವಿಶಿಷ್ಟವಾಗಿ ಸಾರಿತು. ದೀಪಾವಳಿ ಪ್ರಯುಕ್ತ ಕಡಬದ ಉಮ್ಮಕ್ಕ ಯಾನೆ ದೋಳದ ಅಪ್ಪೆ ಅವರ ಮನೆಯಲ್ಲಿ ನವೆಂಬರ್ 8ರಂದು ‘ಕರುಣೆಯ ಬೆಳಕು’ ಎಂಬ ಶೀರ್ಷಿಕೆಯಡಿ ಅರ್ಥಪೂರ್ಣ ದೀಪಾವಳಿ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು. ದೋಳದ ಅಪ್ಪೆ ಅವರು ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ […]
Read More

07-11-2026, 9:00 PM
ಮೂಡುಬಿದಿರೆ ನ 07: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 7ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಐದನೇ ವರ್ಷದ *‘ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ’*ಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಮಂದಿರ ಸಭಾ (ರಿ.) ಅಧ್ಯಕ್ಷರೂ, ಮಾಜಿ ಸಚಿವರೂ ಆಗಿರುವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಸಮಾಜ […]
Read More

07-11-2026, 8:00 PM
ಬಜಪೆ ನ 07 : ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬಿಂಬ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನವೆಂಬರ್ 8, 2026ರಂದು ಬಜಪೆಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರು ಹಾಗೂ ಗುರುಮಂದಿರದ ಸದಸ್ಯರು ಸೇವಾಭಾವದಿಂದ ಸ್ವಯಂಸೇವೆಯಲ್ಲಿ ತೊಡಗಿಸಿಕೊಂಡರು. ವರ್ಧಂತ್ಯುತ್ಸವದ ಅಂಗವಾಗಿ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬಜಪೆ ವ್ಯಾಪ್ತಿಯ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನಡೆಯಿತು. ಮಧ್ಯಾಹ್ನದ ಅನ್ನಪ್ರಸಾದ ಸೇವೆಯಲ್ಲಿ ಹಾಗೂ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡ […]
Read More

07-11-2026, 8:00 PM
ಬೆಳ್ತಂಗಡಿ ನ 07 : ಯುವವಾಹಿನಿ.(ರಿ.)ಬೆಳ್ತಂಗಡಿ ಘಟಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ (ರಿ.)ಪಣಕಜೆ, ಶ್ರೀ ಕೃಷ್ಣಾ ಮಹಿಳಾ ಮಂಡಳಿ, ಧ್ವನಿ ನ್ಯೂಸ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ನವೆಂಬರ್ 7 ರಂದು ಶ್ರೀ ಕೃಷ್ಣಾ ಭಜನಾ ಮಂದಿರ ಪಣಕಜೆಯಲ್ಲಿ ತುಳುನಾಡ ತುಡರ್ ಪರ್ಬ-2026 ಎಂಟನೇ ವರ್ಷದ ಸಾರ್ವಜನಿಕ ದೀಪಾವಳಿ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು. ಜೊತೆಯಲ್ಲಿ ” ತುಳುನಾಡ ತುಡರ್ ಪರ್ಬ *ಕವಿ ಗೋಷ್ಠಿ ಸಾರ್ವಜನಿಕ ಗೂಡು ದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು.ಸಾವಿರದ ಒಂದು […]
Read More

07-11-2026, 1:00 PM
ಮಂಗಳೂರು, ನ. 07: ಸಮಾಜಮುಖಿ ಸೇವೆ, ಶಿಕ್ಷಣ, ಉದ್ಯೋಗ ಹಾಗೂ ಯುವಜನತೆಯ ಸಬಲೀಕರಣದ ಮೂಲಕ ಯುವವಾಹಿನಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದರು. ಯುವವಾಹಿನಿ ಕೇವಲ ಒಂದು ಸಂಘಟನೆಯಾಗಿ ಕಾರ್ಯನಿರ್ವಹಿಸದೆ, ಸಂಘಟನಾತ್ಮಕ ಶಿಸ್ತು, ಸಮಾಜಮುಖಿ ಕಾಳಜಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಸೇವಾ ಮನೋಭಾವದ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದೆ. […]
Read More

06-11-2026, 9:00 PM
ಕೂಳೂರು ನ 06: ಬೆಳಕಿನ ಹಬ್ಬ ದೀಪಾವಳಿಯನ್ನು ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೊಂದಿಗೂ ಸಂತೋಷದಿಂದ ಆಚರಿಸುವ ಸದುದ್ದೇಶದಿಂದ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಬಡ ಹಾಗೂ ಅಶಕ್ತ ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳ ರೇಷನ್ ಕಿಟ್ ವಿತರಿಸುವ ಮಾನವೀಯ ಸೇವಾ ಕಾರ್ಯಕ್ರಮವು ನವೆಂಬರ್ 6, 2026ರಂದು ನಡೆಯಿತು. ಘಟಕದ ಫಲ್ಗುಣಿ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ […]
Read More

05-11-2026, 8:00 PM
ಮಂಗಳೂರು ನ 05 : ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಮನುಷ್ಯನಲ್ಲಿರುವ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಮಾನವೀಯತೆಯಲ್ಲಿಯೇ ದೈವತ್ವವನ್ನು ಕಾಣುವ ವಿಶಿಷ್ಟ ತತ್ವವನ್ನು ಜಗತ್ತಿಗೆ ಸಾರಿದವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಮೋಹನ್ ಮಾಡೂರು ಹೇಳಿದರು. ನಾರಾಯಣಗುರುಗಳ ಚಿಂತನೆ ಕೇವಲ ಧಾರ್ಮಿಕ ಸುಧಾರಣೆಗೆ ಸೀಮಿತವಾಗಿರದೆ, ಮನುಷ್ಯನ ಅಂತರಂಗದ ಪರಿವರ್ತನೆ ಹಾಗೂ ಸಮಾಜದ ಸಮಗ್ರ ಉನ್ನತಿಯನ್ನು ಗುರಿಯಾಗಿಸಿಕೊಂಡಿತ್ತುಜಾತಿ, ಮತ, ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ […]
Read More