
02-08-2017, 1:34 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಕು| ಕಾವ್ಯಾಳ ಸಂಶಯಾಸ್ಪದ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಅಗ್ರಹ. ದ.ಕ. ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ 15 ವರ್ಷ ಪ್ರಾಯದ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪ್ರತಿಭಾನ್ವಿತೆ ಕು| ಕಾವ್ಯ ಎಂಬಾಕೆಯು ದಿನಾಂಕ 20.7.2017 ರಂದು ಸಾವಿಗೀಡಾಗಿರುವುದು ಹಲವಾರು ರೀತಿಯ ಸಂಶಯವನ್ನು ಹುಟ್ಟು ಹಾಕಿದೆ. ಆದ್ದರಿಂದ ಈ ಬಗ್ಗೆ ಸೂಕ್ತವಾದ ರೀತಿಯಲ್ಲಿ ತನಿಖೆಯಾಗಬೇಕು ಹಾಗೂ ವಿದ್ಯಾರ್ಥಿಯ ಹೆತ್ತವರಿಗೆ ನ್ಯಾಯ ಒದಗಬೇಕು. ಒಂದು ವೇಳೆ ಸೂಕ್ತವಾದ ತನಿಖೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ […]
Read More

31-07-2017, 9:23 AM
ದ.ಕ. ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ 15 ವರ್ಷ ಪ್ರಾಯದ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪ್ರತಿಭಾನ್ವಿತೆ ಕು| ಕಾವ್ಯ ಎಂಬಾಕೆಯು ದಿನಾಂಕ 20.7.2017 ರಂದು ಸಾವಿಗೀಡಾಗಿರುವುದು ಹಲವಾರು ರೀತಿಯ ಸಂಶಯವನ್ನು ಹುಟ್ಟು ಹಾಕಿದೆ.ಆದ್ದರಿಂದ ಈ ಬಗ್ಗೆ ಸೂಕ್ತವಾದ ರೀತಿಯಲ್ಲಿ ತನಿಖೆಯಾಗಬೇಕು ಹಾಗೂ ವಿದ್ಯಾರ್ಥಿಯ ಹೆತ್ತವರಿಗೆ ನ್ಯಾಯ ಒದಗಬೇಕು. ಒಂದು ವೇಳೆ ಸೂಕ್ತವಾದ ತನಿಖೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾಗುತ್ತದೆ ಎಂಬ ಮನವಿ ಪತ್ರವನ್ನು ಬಂಟ್ವಾಳ ತಾಲೂಕಿನ ತಹಶೀಲ್ದಾರರ […]
Read More

30-07-2017, 11:23 AM
ನಾಳಿನ ಸದೃಢ ಸಮಾಜಕ್ಕೆ ಇಂದು ಸನ್ನದ್ಧರಾದಲ್ಲಿ ಮಾತ್ರ ಯುವ ಸಮುದಾಯವನ್ನು ಸಂಸ್ಕøತಿ ಸಂಸ್ಕಾರಗಳ ಮೂಲಕ ಅದರ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದರು. ಹಳೆಯಂಗಡಿಯ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಆಟಿ ಆನಿ-ಇನಿ-ಎಲ್ಲೆ ಕಾರ್ಯಕ್ರಮವನ್ನು ಬತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆಯನ್ನು […]
Read More

30-07-2017, 11:08 AM
ಯುವವಾಹಿನಿ ಸಂಸ್ಥೆಯು ಶಿಸ್ತುಬದ್ಧ ಹಾಗೂ ಕ್ರಮಬದ್ಧ ಸಂಸ್ಥೆ ಎನಿಸಿದ್ದು ಅದು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ, ಸಹಕರಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮವಾರು ಯುವವಾಹಿನಿ ಸಂಘವನ್ನು ರಚಿಸಿ ಯುವಜನತೆಯಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರಲ್ಲಿ ನಾಯಕತ್ವ ಮೂಡಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವತ್ತ ಶ್ರಮಿಸಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ನಿಯೋಜಿತ ಅಧ್ಯಕ್ಷ ಯಶವಂತ ಪೂಜಾರಿರವರು ಹೇಳಿದರು. ಅವರು ದಿನಾಂಕ: 30.07.2017 ರಂದು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ 2017-18ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ […]
Read More

30-07-2017, 7:18 AM
ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 30.07.2017 ರಂದು ಸುರತ್ಕಲ್ ಮಹಿಳಾ ಕೇಂದ್ರದ ಸಭಾಂಗಣದಲ್ಲಿ ಉಚಿತ ಹೃದಯ ರೋಗ ,ಮಧುಮೇಹ ತಪಾಸಣೆ, ಹಾಗೂ ಮಾಹಿತಿ ಶಿಬಿರ ಜರಗಿತು. ಒಮೇಗಾ ಆಸ್ಪತ್ರೆ ಮಂಗಳೂರು, ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಮಂಗಳೂರು, ಅಪದ್ಬಾಂದವ ಸಮಾಜ ಸೇವಾ ಸಂಘ ಸುರತ್ಕಲ್, ಮಹಿಳಾ ಕೇಂದ್ರ ಸುರತ್ಕಲ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಶಿಬಿರ ಯಶಸ್ವಿಯಾಗಿ ಜರುಗಿತು. ಈ ಶಿಬಿರದಲ್ಲಿ ಇಸಿಜಿ, ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಹೃದಯದ ಸ್ಕ್ಯಾನಿಂಗ್, ಹೃದಯ ತಜ್ಞರಿಂದ ಪರೀಕ್ಷೆ ಹಾಗೂ ಸಲಹೆ, ಡಯಾಬಿಟಿಸ್ […]
Read More

23-07-2017, 12:29 PM
ತುಳುನಾಡಿನ ಜನರ ಎಲ್ಲ ಆಚರಣೆ ಮತ್ತು ಆಹಾರ ಪದ್ಧತಿಗಳು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿರುವ ವಿಷಯವಲ್ಲ. ಅದು ಸರ್ವಕಾಲಿಕ ಸತ್ಯವನ್ನು ಒಳಗೊಂಡ ಒಂದು ಪವಿತ್ರ ಸಂಸ್ಕøತಿ ಎಂದು ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಹೇಳಿದರು. ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಬಿಲ್ಲವ ಸಮಾಜ ಸೇವಾಸಂಘದಲ್ಲಿ ಜರಗಿದ 15ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಟಿ ಕೆಟ್ಟ ದಿನಗಳ ಒಂದು ಮಾಸ ಎಂದು ಪ್ರತಿಬಿಂಬಿಸಲಾಗುತ್ತಿದೆ. ಆಟಿ ತಿಂಗಳು ಅತ್ಯಂತ ಶ್ರೇಷ್ಠ ತಿಂಗಳು […]
Read More

23-07-2017, 9:09 AM
ಮಹಾ ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಜನಾಂಗಕ್ಕೆ ಹೊಸ ದಾರಿ ತೋರಿದವರು. ಸಮಾಜದ ಒಳಿತಿಗಾಗಿ ದುಡಿದವರು. ಅವರ ಸಂದೇಶದ ಅನುಷ್ಟಾನ ಮಾಡುತ್ತಿರುವ ಯುವವಾಹಿನಿಯಂತಹ ಯುವಶಕ್ತಿ ಸಮಾಜದ ಆದರ್ಶ ಸಂಘಟನೆಯಾಗಿದೆ ಎಂದು ಪುರೋಹಿತರಾದ ಕೇಶವ ಶಾಂತಿ ನಾಟಿ ತಿಳಿಸಿದರು. ಅವರು ದಿನಾಂಕ 23.7.2017 ರಂದು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲದ ಅಕ್ಕಮ್ಮ ಎಂಬ ತೀರಾ ಬಡ ಕುಟುಂಬಕ್ಕೆ 650 ಚ.ಅ.ಗಳ ಸುಮಾರು ರೂ. […]
Read More

23-07-2017, 8:25 AM
ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕದ 2017-18ನೇ ಸಾಲಿನ ಅಧ್ಯಕ್ಷರಾಗಿ ಬಂಟ್ವಾಳ ಪುರಸಭೆಯ ನಾಮನಿರ್ದೇಶಕ ಸದಸ್ಯರಾದ ಲೋಕೇಶ್ ಸುವರ್ಣ ಅಲೆತ್ತೂರು ಇವರು ಆಯ್ಕೆಯಾಗಿದ್ದಾರೆ. ಉಳಿದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು : ಗಣೇಶ್ ಪೂಂಜೆರೆಕೋಡಿ ಕಾರ್ಯದರ್ಶಿ : ದಿನೇಶ್ ಕೆ. ಸುವರ್ಣ, ಕೋಶಾಧಿಕಾರಿ : ಲೋಕೇಶ್ ಪೂಜಾರಿ. ಜತೆ ಕಾರ್ಯದರ್ಶಿ : ಕಿರಣ್ ರಾಜ್ ನಿರ್ದೇಶಕರು:- ಸಾಂಸ್ಕøತಿಕ : ಹರೀಶ್ ಕೋಟ್ಯಾನ್ ಕುದನೆ ನಾರಾಯಣಗುರು ತತ್ವ […]
Read More

23-07-2017, 5:08 AM
ತುಳು ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಈ ತಿಂಗಳಿನಲ್ಲಿ ನಡೆಯುವ ಯಾವೆಲ್ಲ ಆಚರಣೆಗಳಿವೆಯೋ ಅವೆಲ್ಲದರ ಹಿಂದೆ ಪೂರ್ವಜರು ವೈಜ್ಞಾನಿಕತೆಯನ್ನು ಪರಿಚಯಿಸಿದ್ದನ್ನು ಈಗಲೂ ಕಾಣಬಹುದಾಗಿದೆ. ಬದಲಾವಣೆಯ ಗಾಳಿ ಬಲವಾಗಿ ಬೀಸಿದೆ. ಕೃಷಿ ಸಂಸ್ಕೃತಿಯಿಂದ ಹಿಮ್ಮುಖವಾದ ಕಾರಣ ನಾವೆಲ್ಲ ಆರೋಗ್ಯಪೂರ್ಣ ವಾತಾವರಣದಿಂದ ದೂರ ಸರಿಯುತ್ತಿದ್ದೇವೆ” ಎಂದು ಹಿರಿಯ ಸಾಹಿತಿ ಶ್ರೀಮತಿ ಕೆ.ಎ.ರೋಹಿಣಿ ತಿಳಿಸಿದರು. ಅವರು ದಿನಾಂಕ 23.07.2017ನೇ ಆದಿತ್ಯವಾರದಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಂಘದ ಸಹಯೋಗದೊಂದಿಗೆ […]
Read More

23-07-2017, 12:00 AM
ಸಂಘಟನೆಗಳು ಒಕ್ಕೂಟ ವ್ಯವಸ್ಥೆ ಗೆ ಬಲವನ್ನು ತುಂಬುವ ಕೆಲಸವನ್ನು ನಿರ್ವಹಿಸುತ್ತದೆ. ಎಲ್ಲರಿಗೂ ನಾಯಕರಾಗುವ ಅವಕಾಶ ತನ್ನಿಂದ ತಾನೇ ಲಭ್ಯವಾಗುವುದಿಲ್ಲ. ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಅವಕಾಶಗಳು ಒಲಿದು ಬರುತ್ತದೆ. ತಮಗೆ ಸಿಗುವ ಅವಕಾಶವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸಿದಾಗ ಮಾತ್ರ ಸಂಘಟನೆಗೂ ಸಮಾಜಕ್ಕೂ ಕೀರ್ತಿ ಲಭ್ಯವಾಗುತ್ತದೆ. ನಾಯಕತ್ವ ವಹಿಸುವುದು ಜವಾಬ್ದಾರಿ ಯ ಕೆಲಸ. ನಾಯಕನಾದವನು ತನ್ನ ಬಳಗವನ್ನು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯುವ ಮನಸ್ಸುಗಳಿಗೆ ಜೀವ ತುಂಬುವ ಕೆಲಸ ನಡೆಯಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಶ್ರೀ ಯಶವಂತ […]
Read More