ನಾಳಿನ ಸದೃಢ ಸಮಾಜಕ್ಕೆ ಇಂದು ಸನ್ನದ್ಧರಾದಲ್ಲಿ ಮಾತ್ರ ಯುವ ಸಮುದಾಯವನ್ನು ಸಂಸ್ಕøತಿ ಸಂಸ್ಕಾರಗಳ ಮೂಲಕ ಅದರ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದರು.
ಹಳೆಯಂಗಡಿಯ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಆಟಿ ಆನಿ-ಇನಿ-ಎಲ್ಲೆ ಕಾರ್ಯಕ್ರಮವನ್ನು ಬತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಆಟಿ ಆಚರಣೆಗಳ ಬಗ್ಗೆ ವಿಶೇಷವಾಗಿ ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ಹಿರಿಯರಿಂದ ಬಂದಂತಹ ಆಚರಣೆಗಳಲ್ಲಿ ವೈಜ್ಞಾನಿಕವಾಗಿಯೂ ಚಿಂತಿಸಬೇಕಾಗಿದೆ. ಪಶ್ಚಿಮ ಘಟ್ಟಗಳು ಹಾಗೂ ಹಿಮಾಲಯ ಪರ್ವತ ಶ್ರೇಣಿಗಳು ಜೀವ ಸಂಕುಲದ ರಕ್ಷಣೆಯ ಹೆಬ್ಬಾಗಿಲು. ಸಿಹಿ ನೀರು ನೀಡುವ ನದಿಗಳು ಹುಟ್ಟುವಿದೇ ಇಲ್ಲಿಂದ. ಗಿಡ ಮೂಲಿಕೆಗಳು ಹಾಗೂ ಅಹಾರ ವಸ್ತುಗಳು ಪ್ರಕೃತಿಯ ಔಷಧೀಯ ಗುಣಗಳನ್ನು ಹೊಂದಿದೆ ಎಂದರು. ಹಿರಿಯ ಪ್ರಗತಿ ಪರ ಕೃಷಿಕ ಕರಿಯಪ್ಪ ಕುಕ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗಾನ ತರಬೇತುದಾರ ರಾಮಚಂದ್ರರನ್ನು ಸಂಘದ ವತಿಯಿಂದ ಜಿ.ಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಗೌರವಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಹಳೆಯಂಗಡಿ ಸಂಘದ ಗೌ.ಅಧ್ಯಕ್ಷ ಗಣೇಶ ಜಿ. ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ಶರತ್ ಪಿ. ಉಪಸ್ಥಿತರಿದ್ದರು. ಭಾಸ್ಕರ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾಸನೆಗೈದರು, ಹಿಮಕರ ಕೋಟ್ಯಾನ್ ಮತ್ತು ಬ್ರಿಜೇಶ್ ಕುಮಾರ್ ನಿರೂಪಿಸಿದರು.
ಆಟಿ ವಿಶೇಷ:
* ಗುತ್ತಿನ ಮನೆಯ ದೈವದ ಆಲಯದ ವೇದಿಕೆ.
* ಒನಕೆಯಲ್ಲಿ ಬತ್ತ ಕುಟ್ಟುವ ಉದ್ಘಾಟನೆ.
* ತೆಲಿಕೆದ ಗೊಂಚಿಲ್, ನೃತ್ಯ ವೈಭವ.
* ತುಳುನಾಡಿನ ತಿನಸುಗಳು.
ಚಿತ್ರ _ ವರದಿ : ನರೇಂದ್ರ ಕೆರೆಕಾಡು.