- ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 30.07.2017 ರಂದು ಸುರತ್ಕಲ್ ಮಹಿಳಾ ಕೇಂದ್ರದ ಸಭಾಂಗಣದಲ್ಲಿ ಉಚಿತ ಹೃದಯ ರೋಗ ,ಮಧುಮೇಹ ತಪಾಸಣೆ, ಹಾಗೂ ಮಾಹಿತಿ ಶಿಬಿರ ಜರಗಿತು.
ಒಮೇಗಾ ಆಸ್ಪತ್ರೆ ಮಂಗಳೂರು, ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಮಂಗಳೂರು, ಅಪದ್ಬಾಂದವ ಸಮಾಜ ಸೇವಾ ಸಂಘ ಸುರತ್ಕಲ್, ಮಹಿಳಾ ಕೇಂದ್ರ ಸುರತ್ಕಲ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಶಿಬಿರದಲ್ಲಿ ಇಸಿಜಿ, ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಹೃದಯದ ಸ್ಕ್ಯಾನಿಂಗ್, ಹೃದಯ ತಜ್ಞರಿಂದ ಪರೀಕ್ಷೆ ಹಾಗೂ ಸಲಹೆ, ಡಯಾಬಿಟಿಸ್ ಆಹಾರ ಪದ್ದತಿಗಳ ಸಲಹೆಗಳನ್ನು ನೀಡಲಾಯಿತು, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದರು.ಪ್ರದೀಪ್ ಕುಮಾರ್ ಶಿಬಿರ ಉದ್ಘಾಟಿಸಿದರು, ಡಾ.ಕೆ.ಮುಕುಂದ್, ಡಾ.ಭಾರದ್ವಾಜ್, ಸದಾನಂದ ಸನಿಲ್ ಕೃಷ್ಣಾಪುರ, ಪೋಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ್, ಆಪದ್ಭಾಂದವ ಸಮಾಜ ಸೇವಾ ಸಂಘದ ಉಮೇಶ್ ದೇವಾಡಿಗ, ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ರವೀಂದ್ರ ಕೋಟ್ಯಾನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸುರತ್ಕಲ್ ಮಹಿಳಾ ಕೇಂದ್ರದ ಸುಲೋಚನಾ ರಾವ್ ಪ್ರಸ್ತಾವನೆ ಮಾಡಿದರು, ಯುವವಾಹಿನಿ ಮಾಜಿ ಅಧ್ಯಕ್ಷರಾದ ಸತೀಶ್ ಕೋಟ್ಯಾನ್ ಸ್ವಾಗತಿಸಿದರು, ಯುವವಾಹಿನಿ ಕಾರ್ಯದರ್ಶಿ ರಿತೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು, ಯುವವಾಹಿನಿ ಮಾಜಿ ಅಧ್ಯಕ್ಷರಾದ ವಿಜಯ ಎಸ್ ಕುಕ್ಯಾನ್ ಧನ್ಯವಾದ ನೀಡಿದರು
Goodprograme