
11-10-2026, 9:00 PM
ಪುತ್ತೂರು, ಅ. 11: ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಆಯೋಜಿಸಲಾದ ‘ಕಿರು ಪ್ರವಾಸ–2026’ ಒಂದು ದಿನದ ಪ್ರವಾಸವು ಸದಸ್ಯರ ಸಂಭ್ರಮ, ಸಂತೋಷ ಹಾಗೂ ಸೌಹಾರ್ದತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು. ಪ್ರವಾಸದ ಆರಂಭದಲ್ಲಿ ಘಟಕದ ಅಧ್ಯಕ್ಷ ಸಮಿತ್ ಪಿ. ಅವರು ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಬೆಳಿಗ್ಗೆ 6 ಗಂಟೆಗೆ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ಸದಸ್ಯರು ಕೋಟೇಶ್ವರದ UVA Meridian Amusement Park ತಲುಪಿ ದಿನವಿಡೀ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಈ ಕಿರು ಪ್ರವಾಸದಲ್ಲಿ ಒಟ್ಟು […]
Read More

11-10-2026, 9:00 PM
ನೇರಳಕಟ್ಟೆ: ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಸಾಧನವೆಂದು ಅರಿತಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು, ವಿದ್ಯೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕಿದರು ಎಂದು ಶಿಕ್ಷಕ ಸಂತೋಷ್ ಎಸ್. ಸನಿಲ್ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ‘ಗುರುತತ್ವವಾಹಿನಿ’ ಮಾಲಿಕೆ 82ರಲ್ಲಿ ಅವರು ಗುರುಸಂದೇಶ ನೀಡಿದರು. ಸಮಾಜದಲ್ಲಿ ನೆಲೆಸಿದ್ದ ಅಜ್ಞಾನ, ಅಸಮಾನತೆ ಹಾಗೂ ಮೂಢನಂಬಿಕೆಗಳನ್ನು ದೂರಗೊಳಿಸಿ, ಜನರು ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ನಾರಾಯಣಗುರುಗಳು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟರು. ಶಿಕ್ಷಣವು […]
Read More

11-10-2026, 9:00 PM
ಕಡಬ, ಅ. 11: ಕಡಬದ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದ ವತಿಯಿಂದ ಭಾನುವಾರ ಬೆಳಿಗ್ಗೆ 10.30ರಿಂದ ಭಜನಾ ಸೇವೆ ನಡೆಯಿತು. ಭಜನಾ ತಂಡದ ಸದಸ್ಯರು ಭಕ್ತಿಭಾವದಿಂದ ಭಜನೆಗಳನ್ನು ಹಾಡುವ ಮೂಲಕ ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು. ನವರಾತ್ರಿ ಉತ್ಸವದ ಧಾರ್ಮಿಕ ಸಂಭ್ರಮಕ್ಕೆ ಭಜನಾ ಸೇವೆಯು ವಿಶೇಷ ಮೆರುಗು ನೀಡಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ […]
Read More

11-10-2026, 8:00 PM
ಶಕ್ತಿನಗರ, ಅ. 11: ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ಅಕ್ಟೋಬರ್ 11ರಂದು ಕುಂಟಲ್ಪಾಡಿಯ ಶ್ರೀ ಚಾಮುಂಡಿ ರಾಹು ಗುಳಿಗ ದೈವಸ್ಥಾನದಲ್ಲಿ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಶಕ್ತಿ ಸ್ವರೂಪಿಣಿಯಾದ ದೇವಿಯನ್ನು ಆರಾಧಿಸುವ ನವರಾತ್ರಿ ಹಬ್ಬದಲ್ಲಿ ಭಜನೆ ಮತ್ತು ಸಂಕೀರ್ತನೆಗಳಿಗೆ ವಿಶೇಷ ಮಹತ್ವವಿದೆ. ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಮೂಹಿಕ ಪ್ರಾರ್ಥನೆಯ ಮೂಲಕ ದೈವಿಕ ಅನುಭೂತಿಯನ್ನು ಪಡೆಯುವ ಉದ್ದೇಶದಿಂದ ಘಟಕದ ಸದಸ್ಯರೆಲ್ಲರೂ ಒಗ್ಗೂಡಿ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ […]
Read More

11-10-2026, 8:00 PM
ಸುಳ್ಯ, ಅ. 11: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಎಂಟನೇ ಗುರುಸ್ಫೂರ್ತಿ ಕಾರ್ಯಕ್ರಮವು ಅಕ್ಟೋಬರ್ 11ರ ಭಾನುವಾರ ಪೂರ್ವಾಹ್ನ 9.30ಕ್ಕೆ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಲೋಹಿತ್ ರೆಂಜಾಳ ಅವರ ಮನೆಯಲ್ಲಿ ನಡೆಯಿತು. ಶ್ರೀ ನಾರಾಯಣ ಗುರುಗಳ ಜೀವನ ಸಂದೇಶ ಹಾಗೂ ತತ್ವಾದರ್ಶಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಯುವವಾಹಿನಿ ಸದಸ್ಯರು ಭಜನಾ ಸಂಕೀರ್ತನೆ ನಡೆಸಿಕೊಟ್ಟರು. ಯುವವಾಹಿನಿ (ರಿ.) ಮಾಣಿ ಘಟಕದ ರಾಜೇಶ್ ಬಲ್ಯ ಅವರು ಸಂಪನ್ಮೂಲ […]
Read More

11-10-2026, 8:00 PM
ಬಜಪೆ, ಅ. 11: ನವರಾತ್ರಿ ಉತ್ಸವದ ಮೊದಲ ದಿನದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಮುರನಗರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಂದು ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನಡೆಯಿತು. ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಶ್ರೀ ದೇವಿಯ ಭಕ್ತಿಗೀತೆಗಳನ್ನು ಶ್ರದ್ಧಾಭಕ್ತಿಯಿಂದ ಹಾಡಿ, ಕ್ಷೇತ್ರದಲ್ಲಿ ಭಕ್ತಿಮಯ ವಾತಾವರಣ ನಿರ್ಮಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿ ಬಾಬು ಬೆಲ್ಚಡ ಅವರು ಮಾತನಾಡಿ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಧಾರ್ಮಿಕ ಸೇವೆಗಳ ಮೂಲಕ ಭಕ್ತಿ […]
Read More

11-10-2026, 7:00 PM
ಬಜಪೆ ಅ 11 : ಯುವವಾಹಿನಿ (ರಿ.) ಬಜಪೆ ಘಟಕದ ಪುರುಷ ಹಾಗೂ ಮಹಿಳಾ ಸದಸ್ಯರು ಮೂಡಬಿದ್ರೆಯಲ್ಲಿ ನಡೆದ ಅಂತರ್ಘಟಕ ಕ್ರಿಡೋತ್ಸವದಲ್ಲಿ ನಡೆದ ಅಥ್ಲೆಟಿಕ್ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ಆಟಗಾರರಿಗೆ ಗೌರವರ್ಪಣೆ ಸಲ್ಲಿಸಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) ಮೂಡಬಿದ್ರೆ ಘಟಕದ ಆತಿಥ್ಯದಲ್ಲಿ ಆಳ್ವಾಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅಂತರ್ಘಟಕ ಕ್ರೀಡಾಕೂಟದಲ್ಲಿ ನಡೆದ ಅಥ್ಲೆಟಿಕ್ ಪಂದ್ಯಾಟದಲ್ಲಿ ಹಲವು ಬಹುಮಾನಗಳನ್ನು ಪಡೆದು ಘಟಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ.ಅಕ್ಟೋಬರ್ 11 ರಂದು ಸಂಜೆ 05.00 […]
Read More

11-10-2026, 7:00 PM
ಮಂಗಳೂರು, ಅ. 11: ಮಂಗಳೂರು ದಸರಾ ಮಹೋತ್ಸವ 2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ನಡೆಸಲಾಯಿತು. ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹20,000 ಮೊತ್ತದ ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರಿಗೆ ಹಸ್ತಾಂತರಿಸಲಾಯಿತು. ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವವಾಹಿನಿ ಕಂಕನಾಡಿ ಘಟಕದ ಈ ಸೇವಾ […]
Read More

11-10-2026, 6:30 PM
ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ ಗುಂಪು ಸ್ಪರ್ಧೆಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಗುಂಪು ಸ್ಪರ್ಧೆಗಳ ವಿಜೇತರ ವಿವರ ಈ ಕೆಳಗಿನಂತಿದೆ ವಾಲಿಬಾಲ್ಪ್ರಥಮ : ಉಡುಪಿ ಘಟಕದ್ವಿತೀಯ : ಪಣಂಬೂರು ಕುಳಾಯಿ ಘಟಕ ತ್ರೋಬಾಲ್ಪ್ರಥಮ : ಪಣಂಬೂರು […]
Read More

11-10-2026, 2:00 PM
ಬಂಟ್ವಾಳ ಅ 11 : ವ್ಯಕ್ತಿತ್ವ ವಿಕಸನ ಶಿಬಿರಗಳು ಯುವಜನರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಶಿಬಿರಗಳ ಮೂಲಕ ಯುವಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾಗುವ ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಯುವವಾಹಿನಿ ರಜತ ವರ್ಷದ ಅಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ […]
Read More