ಮಂಗಳೂರು, ಅ. 11: ಮಂಗಳೂರು ದಸರಾ ಮಹೋತ್ಸವ 2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ನಡೆಸಲಾಯಿತು.

ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹20,000 ಮೊತ್ತದ ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರಿಗೆ ಹಸ್ತಾಂತರಿಸಲಾಯಿತು.
ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವವಾಹಿನಿ ಕಂಕನಾಡಿ ಘಟಕದ ಈ ಸೇವಾ ಕಾರ್ಯದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಸಹಕರಿಸಿದರು.







