15-09-2025, 4:10 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜನುಮ ಮಹೋತ್ಸವದ ಪ್ರಯುಕ್ತ ಈ ಸಾಲಿನ ಮೊದಲ ಗೃಹಭಜನೆ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ ಅವರ ಮನೆಯಲ್ಲಿ ನೆರವೇರಿತು. ಘಟಕದ ಸದಸ್ಯರಾದ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಘಟಕದ ಸದಸ್ಯರಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಮೂಡಿ ಬಂತು. ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶ್ರೀಮತಿ ಅನಿತಾ ಕಮಲಾಕ್ಷ […]
Read More
14-09-2025, 4:40 PM
ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು. ಬೆಳಿಗ್ಗೆ 9.30ಕ್ಕೆ ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು. ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ […]
Read More
06-10-2024, 4:59 PM
ಬೆಂಗಳೂರು : ಘಟಕದ ಒಂದು ದಿನದ ಪ್ರವಾಸ ಕಾರ್ಯ ಯೋಜನೆಯು ದಿನಾಂಕ ಅಕ್ಟೋಬರ್ 6 ಆದಿತ್ಯವಾರದಂದು ಯಶಸ್ವಿಯಾಗಿ ನಡೆಯಿತು. ಈ ಪ್ರವಾಸದಲ್ಲಿ ಘಟಕದ ಸದಸ್ಯರು ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಮಠಾಧೀಶರಾದ ರಾಮನಗರ ಜಿಲ್ಲೆಯ ಸೋಲೂರು ಮಠ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ಮತ್ತು ಎಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿಕೊಟ್ಟು ಶ್ರೀದೇವರ ದರ್ಶನವನ್ನು ಮಾಡಿದರು. ಬೆಳಿಗ್ಗೆ 9:00ಗೆ ಬೆಂಗಳೂರಿನ ಜೆಪಿ ನಗರದಿಂದ ಬಸ್ ಮೂಲಕ ಬಾಂಧವ್ಯದ ಪಯಣ ಆರಂಭಗೊಂಡಿತು. ಸದಸ್ಯರು, ಪದಾಧಿಕಾರಿಗಳು ಸೇರಿ ಒಟ್ಟು […]
Read More
20-08-2024, 6:12 AM
ಬೆಂಗಳೂರು : ದಿನಾಂಕ 20/8/2024 ರಂದು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170 ನೇ ಜನ್ಮದಿನೋತ್ಸವದ ಅಂಗವಾಗಿ ಗುರುಸ್ಮರಣ ಭಜನೆ ಕಾರ್ಯಕ್ರಮವು ಘಟಕದ ಎರಡನೇ ಉಪಾಧ್ಯಕ್ಷರಾದ ಪ್ರಸಾದ್ ಕುಮಾರ್ ಇವರ ವಿಜಯನಗರದ ಸ್ವಗೃಹದಲ್ಲಿ ರಾತ್ರಿ ಜರುಗಿತು. ಈ ಪುಣ್ಯ ಸುಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಗಳು, ಗೌರವ ಸಲಹೆಗಾರರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಗುರುಸ್ಮರಣೆ ನಡೆಯಿತು. ಬಡವರ, ಶೋಷಿತ ಜನರ ಏಳಿಗೆಗಾಗಿ ಸಂಗ್ರಾಮದ ಹೋರಾಟಗಳನ್ನು ಮಾಡದೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಮಾಜದ […]
Read More
11-08-2024, 4:26 AM
ಬೆಂಗಳೂರು: ಯುವವಾಹಿನಿ(ರಿ.) ಬೆಂಗಳೂರು ಘಟಕ ಆಯೋಜಿಸಿದಂತಹ ಆಟಿದ ಐತಾರ ಮತ್ತು ನನ್ನಲ್ಲಿರುವ ನಾಯಕ ಕಾರ್ಯಕ್ರಮವು 11-08-2024 ಆದಿತ್ಯವಾರ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಇನ್ಸ್ಟಿಟ್ಯೂಟ್, ರಾಜಾಜಿನಗರ ಕೈಗಾರಿಕಾ ಪ್ರದೇಶ ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರು ಸೇರಿಕೊಂಡು ನಾಲ್ಕು ತಂಡಗಳಾದ ಆಟಿದ ಬೊಳ್ಳಿಲು, ಆಟಿದ ಬರ್ಸ, ಆಟಿದ ಪಂಚಮಿ, ಆಟಿ ಕಳೆಂಜ ಹಾಗೂ ತಂಡಗಳನ್ನು ತಾಂಬೂಲ ಹಾಗೂ ಶಾಲು ಹಾಕಿ, ಗುಲಾಬಿ ಹೂವನ್ನು ನೀಡುವ ಮೂಲಕ ಸಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ […]
Read More
02-06-2024, 2:55 PM
ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಸ್ವಾಮಿ ವಿವೇಕಾನಂದರ ಚಿಂತನಾಧಾರೆ ಮತ್ತು ಅಂಬೇಡ್ಕರ್ ಅವರ ಪ್ರಾಯೋಗಿಕ ಬದುಕಿನಿಂದ ಯುವವಾಹಿನಿ ಸಂಘಟನೆಯು ಪ್ರೇರಣೆ ಪಡೆದು, ಮುನ್ನಡೆದರೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಸಾಧ್ಯ ಎಂದು ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ನಾಗಪುರ ವಾರ್ಡ್ ಡಾ.ರಾಜ್‌ಕುಮಾರ್ ಸಭಾಭವನದಲ್ಲಿ ಜೂ.2 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಬೆಂಗಳೂರು ಘಟಕದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ […]
Read More
04-12-2022, 3:24 PM
ಬೆಂಗಳೂರು :- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇದರ ಸಹಯೋಗದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ನೇತೃತ್ವದಲ್ಲಿ “ಯುವ ವೈಭವ-2022” ಎಂಬ ಸಾಂಸ್ಕೃತಿಕ ಹಬ್ಬವು ದಿನಾಂಕ 04 ಡಿಸೆಂಬರ್ 2022ರಂದು ಡಾ| ರಾಜಕುಮಾರ್ ಒಳಾಂಗಣ ಕ್ರೀಡಾಂಗಣ, ಮಹಾಲಕ್ಷ್ಮಿ ಲೇಔಟ್ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಬೆಂಗಳೂರು ಘಟಕದ ಅಧ್ಯಕ್ಷರಾದ ಶ್ರೀಧರ ಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕಿಶನ್ […]
Read More
13-02-2022, 11:53 AM
ಬೆಂಗಳೂರು : ಯುವವಾಹಿನಿ ಬೆಂಗಳೂರು ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಧರ್ .ಡಿ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿ : ವಿಜೇತ್ 1ನೇ ಉಪಾಧ್ಯಕ್ಷ : ಮಿತೇಶ್ 2ನೇ ಉಪಾಧ್ಯಕ್ಷ : ಪ್ರಸಾದ್ ಕೋಶಾಧಿಕಾರಿ : ಅಕ್ಷತಾ ಸುಧೀರ್ ಜತೆ ಕಾರ್ಯದರ್ಶಿ : ವಿಜಯ ಪ್ರಮೋದ್ ನಿರ್ದೇಶಕರು ವ್ಯಕ್ತಿತ್ವ ವಿಕಸನ : ಸಕೇಶ್ ಬುನ್ನನ್ ಹಾಗೂ ಪವಿತ್ರ ಕ್ರೀಡೆ ಮತ್ತು ಆರೋಗ್ಯ : ರೇಶ್ಮಾ ಮತ್ತು ಹರೀಶ್ ಕರ್ಕೆರ ಸಮಾಜಸೇವೆ :- ಹರ್ಷಿತ್ ಮತ್ತು ಮಹೇಶ್ ವಿ […]
Read More
13-02-2022, 8:29 AM
ಬೆಂಗಳೂರು : ಫೆಬ್ರವರಿ 13, 2022ರ ಭಾನುವಾರ ಬೆಂಗಳೂರಿನ ಜಯನಗರದ ಯುವಕ ಸಂಘದ ವಿವೇಕ ಸಭಾಂಗಣದಲ್ಲಿ ಸಂಭ್ರಮವೋ ಸಂಭ್ರಮ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಗಳಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು ಸೇರಿರುವ ಬಿಲ್ಲವ ಸಮಾಜದ ಯುವಕ-ಯುವತಿಯರು ಯುವವಾಹಿನಿ (ರಿ) ಬೆಂಗಳೂರು ಘಟಕದ ನಾಲ್ಕನೆಯ ವಾರ್ಷಿಕ ಸಮಾವೇಶವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಬೆಳಿಗ್ಗೆ ಗಂಟೆ ಹತ್ತರಿಂದ ಆರಂಭವಾದ ಕಾರ್ಯಕ್ರಮವನ್ನು ಸಕೇಶ್ ಬುನ್ನನ್ ನಡೆಸಿಕೊಟ್ಟರು. ವಿವಿಧ ನೃತ್ಯ-ಸಂಗೀತ ಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸೇರಿದ್ದ ಜನಸಾಗರವು ಮನರಂಜನೆಯ ರಸದೌತಣವನ್ನು ಸವಿಯುವಂತಾಯಿತು. ಸುಮಾರು […]
Read More