Yuvavahini

SEP 14, 2025 4.40 PM IST

ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025-ಯುವವಾಹಿನಿ (ರಿ.) ಬೆಂಗಳೂರು ಘಟಕ

ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು
ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು.

ಬೆಳಿಗ್ಗೆ 9.30ಕ್ಕೆ
ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು.

ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ ಎಲ್ಲಾ ಸದಸ್ಯರನ್ನು ತುಳು ಸಿರಿ ಚಾವಡಿಗೆ ತುಳುನಾಡ ಸಂಪ್ರದಾಯಬದ್ಧವಾಗಿ ಸ್ವಾಗತಿಸಲಾಯಿತು.

ತುಳುನಾಡ ತೆನಸ್ – ತುಳುನಾಡಿನ ಖಾದ್ಯ
ಮೊದಲ ಕಾರ್ಯಕ್ರಮವಾಗಿ “ತುಳುನಾಡ ತೆನಸ್” ಎಂಬ ಆಹಾರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಶೆಫ್ ಶ್ರೀ ಭರತನ್ ವೇಣು (ಎಕ್ಸಿಕ್ಯೂಟಿವ್ ಶೆಫ್ ಡೈರೆಕ್ಟರ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಅವರ ನೇತೃತ್ವದಲ್ಲಿ ತೀರ್ಪುಗಾರಿಕೆ ನಡೆಯಿತು. ಎಲ್ಲ ನಾಲ್ಕು ತಂಡಗಳಿಂದಲೂ ಸಿದ್ಧಪಡಿಸಿದ 120ಕ್ಕೂ ಹೆಚ್ಚಿನ ತಿನಿಸುಗಳ ರುಚಿ, ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಅವರು ಮೆಚ್ಚಿದರು.

ತುಳು ಸಭಿ ಸವಾಲ್ – ರಸಪ್ರಶ್ನೆ ಸ್ಪರ್ಧೆ
ಶ್ರೀ ಚಂದ್ರಹಾಸ ಬಳಂಜ ಅವರ ನೇತೃತ್ವದಲ್ಲಿ “ತುಳು ಸಭಿ ಸವಾಲ್” ಎಂಬ ರಸಪ್ರಶ್ನೆ ಸ್ಪರ್ಧೆ ನಡೆಯಿತು. ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ವಿಸ್ತರಿಸುವ ಅರ್ಥಪೂರ್ಣ ಸ್ಪರ್ಧೆಯಾಗಿತ್ತು.

ತುಳು ಗೀತೆ ನೃತ್ಯ ಮತ್ತು ತುಳುನಾಡ ತುತ್ತೈತ
ಮಧ್ಯಾಹ್ನದ ಊಟದ ನಂತರ, ತುಳು ಗೀತೆ ನೃತ್ಯ ಮತ್ತು ತುಳುನಾಡ ತುತ್ತೈತ (ಫ್ಯಾಷನ್ ಶೋ) ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳು ತುಳುನಾಡ ಸಂಸ್ಕೃತಿಯ ವೈವಿಧ್ಯತೆ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸಿದವು. ಈ ಸ್ಪರ್ಧೆಗಳ ತೀರ್ಪುಗಾರಿಕೆಯನ್ನು ರಾಷ್ಟ್ರೀಯ ಖ್ಯಾತಿಯ ನೃತ್ಯ ಪಟು ಕು. ರಚನಾ ಅಮೀನ್ ಮುನ್ನಡೆಸಿದರು.

ಪ್ರಶಸ್ತಿ ವಿತರಣೆ ಮತ್ತು ಸಭಾ ಕಾರ್ಯಕ್ರಮ
ಸಂಜೆ 5 ಗಂಟೆಗೆ ಪ್ರಶಸ್ತಿ ವಿತರಣೆ ಸಮಾರಂಭವನ್ನು ಘಟಕದ ಅಧ್ಯಕ್ಷರಾದ ಶ್ರೀ ಶಶಿಧರ ಕೋಟ್ಯಾನ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ದಯಾನಂದ ಬಂಗೇರ, ಡಾ. ಯೋಗೀಶ್ ಕೈರೋಡಿ (ಪ್ರಧಾನ ಭಾಷಣಕಾರರು) ಮತ್ತು ಶ್ರೀ ಚಂದ್ರಹಾಸ ಬಳಂಜ ಹಾಜರಿದ್ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀ ಸಂತೋಷ್ ಪೂಜಾರಿ ಪಣಪಿಲ, ವ್ಯಕ್ತಿತ್ವ ವಿಕಸನ ನಿರ್ದೇಶಕ ರಾದ ಶ್ರೀ ಸಚೀಂದ್ರ ಕೋಟ್ಯಾನ್ ಮತ್ತು ಶ್ರೀ ಕಿರಣ್ ಪೂಜಾರಿ, ಶ್ರೀ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಶ್ರೀ ಪುನೀತ್ ಮತ್ತು ಕು. ಧನ್ಯಶ್ರೀ ಉಪಸ್ಥಿತರಿದ್ದರು.
ಶ್ರೀ ಸಚೀಂದ್ರ ಕೋಟ್ಯಾನ್ ಅವರು ಸ್ವಾಗತ ಭಾಷಣ ಮಾಡಿದರು, ಶ್ರೀ ಸಂತೋಷ್ ಪೂಜಾರಿ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ವಿವರಗಳನ್ನು ವಿವರಿಸಿದರು. ಶ್ರೀ ದಯಾನಂದ ಬಂಗೇರ ಅವರು ಯುವವಾಹಿನಿ ತಂಡವು ನಡೆಸಿದ ಈ ಯಶಸ್ವಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷರಾದ ಶ್ರೀ ಶಶಿಧರ ಕೋಟ್ಯಾನ್ ಅವರು ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಯುವವಾಹಿನಿ ವತಿಯಿಂದ ವರ್ಷಪೂರ್ತಿ ನಡೆಯಲಿರುವ ಹಲವು ಕಾರ್ಯಕ್ರಮಗಳ ಕುರಿತು ವಿವರ ನೀಡಿದರು.
ಸಾಧಕರಾದ ಡಾ. ಯೋಗೀಶ್ ಕೈರೋಡಿ ಹಾಗೂ ಶ್ರೀ ಚಂದ್ರಹಾಸ ಬಳಂಜ ಅವರನ್ನು ಸನ್ಮಾನಿಸಲಾಯಿತು.
ಪ್ರಧಾನ ಭಾಷಣಕಾರರಾದ ಡಾ. ಯೋಗೀಶ್ ಕೈರೋಡಿ ಅವರು ತುಳು ಸಂಸ್ಕೃತಿ, ಪರಂಪರೆ ಹಾಗೂ ನಾರಾಯಣಗುರು ಸ್ವಾಮಿಗಳ ದೃಷ್ಟಿಕೋನ ಕುರಿತು ವಿಸ್ತಾರವಾಗಿ ಮಾತನಾಡಿ ಯುವಕರಿಗೆ ಪ್ರೇರಣಾದಾಯಕ ಚಿಂತನೆಗಳನ್ನು ಹಂಚಿಕೊಂಡರು.
ನಂತರ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಶ್ರೀ ಸಕೇಶ್ ಧನ್ಯವಾದ ಪ್ರಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಶ್ರುತಿ ಮತ್ತು ಶ್ರೀ ಶಿವಪ್ರಸಾದ್ ನಿರೂಪಣೆ ಮಾಡಿದರು.

ಅಂತಿಮವಾಗಿ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!