Yuvavahini

ವಿಶುಕುಮಾರ್ ಬಗ್ಗೆ

ವಿಶುಕುಮಾರ್ ಹೀಗೊಂದು ನೆನಪು -ಗುಲ್ವಾಡಿ ಪಾಲಿಗೆ ತುಪ್ಪ ಜಾರಿ ಬಿತ್ತು!

ಉದಯವಾಣಿ ಪತ್ರಿಕೆಯ ಪ್ರಾರಂಭದ ದಿನದಿಂದಲೇ ವಿಶುಕುಮಾರ್ ಅವರು ” ಶ್ರೀಸಾಮಾನ್ಯರು ಮಹಾನುಭಾವರು” ಅಂಕಣ ಬರೆಯುತ್ತಿದ್ದರು. ಅದು ತುಂಬಾ ಜನಪ್ರಿಯ ಕಾಲಂ ಆಗಿತ್ತು. ಅವರ ಬರಹ ತೀಕ್ಷಣತೆಯಿಂದ ಕೂಡಿತ್ತು. ಸೂಕ್ಷ್ಮ ಒಳನೋಟ , ಸಮಗ್ರ ಮಾಹಿತಿ ಹಾಗೂ ನಿರ್ಭೀತಿಯಿಂದ ಕೂಡಿತ್ತು.ಅವರು ಯಾರ ಮೂಲಾಜಿಗೂ ಒಲಿಯುತ್ತಿರಲಿಲ್ಲ. ತಮಗೆ ಅನ್ನಿಸಿದನ್ನು ಬರೆಯುತ್ತಿದ್ದರು. ಎಲ್ಲವೂ ನೇರ. ವಿಶುಕುಮಾರ್ ರ ಆಲೋಚನೆಗಳನ್ನು ಟೀಕಿಸುವವರು ಕೂಡ ಅವರ ಅಂಕಣ ಓದುತ್ತಿದ್ದರು. ಇವರ ಬರವಣಿಗೆಯನ್ನು ” ಪೈ ಫ್ಯಾಮಿಲಿ” ಮೆಚ್ಚಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ವಾರಪತ್ರಿಕೆಯ ಆಲೋಚನೆ ಕೂಡ […]

Read More

ವಿಶುಕುಮಾರ್ ಹೀಗೊಂದು ನೆನಪು -ಆಲನಹಳ್ಳಿ ಶ್ರೀಕೃಷ್ಣ ಚಕ್ರ!!!!

ಸಮಯ ಬೆಳಗ್ಗಿನ ಹೊತ್ತು: ಸ್ಥಳ: ಮದರಾಸ್ ನ ಹೋಟೆಲ್ ಪಾಮ್ ಗ್ರೋನ ಸ್ವಾಗತ ಕಚೇರಿ. ವಿಶುಕುಮಾರ್ ಸೋಫಾದ ಮೇಲೆ ಕುಳಿತು ಪೇಪರು ಓದುತ್ತಿದ್ದರು. ಆಗ ತಾನೇ ಮೈಸೂರಿನಿಂದ ಬಂದ ಆಲನಹಳ್ಳಿ ಶ್ರೀಕೃಷ್ಣ ರೂಂ ಬುಕ್ ಮಾಡಲು ರಿಸೆಪ್ಷನ್ ಕೌಂಟರ್ ಕಡೆ ಹೋದರು.ವಿಶುಕುಮಾರ್ ಪೇಪರ್ ನ ಎಡೆಯಲ್ಲೇ ಶ್ರೀಕೃಷ್ಣನನ್ನು ನೋಡಿದರು. ಮುಖದಲ್ಲಿ ಕುಶಿ ಕಂಡಿತು. ಕೃಷ್ಣ ಅವರು ರಿಜಿಸ್ಟರ್ ಬುಕ್ ನಲ್ಲಿ ಹೆಸರನ್ನು ನಮೂದಿಸಿ – ಕೀ ಹಿಡಿದುಕೊಂಡು ಒಂದು ಸುತ್ತು ಕಣ್ಣಾಡಿಸಿದರು. ವಿಶುಕುಮಾರ್ ಕುಳಿತಿರುವುದು ಅವರಿಗೆ ಕಾಣಿಸಿತು […]

Read More

ವಿಶುಕುಮಾರ್ ಹೀಗೊಂದು ನೆನಪು : ರವಿರಾಜ ಅಜ್ರಿ ಲೇಖನ ಮಾಲೆ 2

” ನೀವು ಬ್ರಾಹ್ಮಣ ಅಲ್ಲ …!”” ವಿಶುಕುಮಾರ್ – ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಹೇಳಿದ್ದೆ.ಅಗಲ ಫ್ರೇಮಿನ ಕನ್ನಡಕದ ಒಳಗಡೆ ತೀಕ್ಷಣ ಕಣ್ಣುಗಳು ನಮ್ಮನ್ನು ಅಳೆಯುವಂತಿದ್ದವು. ” ರೂಂಗೆ ಬಾ ನಿಮ್ಮೊಡನೆ ಸ್ವಲ್ಪ ಮಾತಾಡಬೇಕು” ಎಂದು ನನ್ನನ್ನು ಅವರ ರೂಂಗೆ ಕರೆದೊಯ್ದರು.ನಾನು ಅವರನ್ನು ಹಿಂಬಾಲಿಸಿದೆ . ಆದರೆ ರೂಂನ ಒಳಗಡೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಅವರನ್ನು ವಿಶುಕುಮಾರ್ ಪರಿಚಯಿಸಿದರು. ” ಇವರು ಆರ್. ನರಸಿಂಹ. ನಮ್ಮ ಸ್ನೇಹಿತರು. ನಾವು ” ಚಿತ್ರದೀಪ” ಹೆಸರಿನ ಸಿನಿಮಾ […]

Read More

ವಿಶುಕುಮಾರ್… ಹೀಗೊಂದು ನೆನಪು : 1

ಮದರಾಸಿನ ’ಚಂದಮಾಮ’ ಪಬ್ಲಿಕೇಶನ್‌ರವರು ಕನ್ನಡದಲ್ಲಿ ’ವಿಜಯಚಿತ್ರ’ ಸಿನೀಮ ಮಾಸಿಕ ಮತ್ತು ವನಿತಾ ಮಹಿಳಾ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ರವಿರಾಜ ಅಜ್ರಿಯವರು 1978 ರಲ್ಲಿ ಈ ಪತ್ರಿಕೆಗಳಿಗೆ ಕೆಲಸಕ್ಕೆ ಸೇರಿ 1983 ರ ತನಕ ಅಲ್ಲಿ ಸೇವೆ ಸಲ್ಲಿಸಿದರು. 1983 ರಲ್ಲಿ ಖ್ಯಾತ ಪತ್ರಕರ್ತ ದಿ| ಎಸ್ ವಿಜಯಶೀಲ ರಾವ್ ಅವರ ’ಮುಂಜಾನೆ’ ಕನ್ನಡ ದಿನ ಪತ್ರಿಕೆಗೆ ಸೇರಿದರು. ಇದು ಸಿನೀಮ ಪತ್ರಿಕೆಯಾಗಿದ್ದು ಇಲ್ಲಿ ಸುಮಾರು ಮೂರು ವರ್ಷ ಕೆಲಸ ನಿರ್ವಹಿಸಿದರು. ಚಂದಮಾಮ ಪಬ್ಲಿಕೇಶನ್‌ನ ಮಾಲಕ ವಿಶ್ವನಾಥ ರೆಡ್ಡಿಯವರು ’ವಿಜಯಚಿತ್ರ’ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನ […]

Read More

ವಿಶುಕುಮಾರ್- ತಾತ್ವಿಕ ನಿಲುವುಗಳು

ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ ಕ್ಷೇತ್ರಗಳಲ್ಲೂ […]

Read More

ವಿಶುಕುಮಾರ್ : ಬದುಕು ಸಾಧನೆ

ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು. 1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, […]

Read More

ಬಿಲ್ಲವರ ಎರಡು ಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್‌ನಾಡಿನಲ್ಲಿ ನಾಡಾರ್ ಹೀಗೆ ಬೇರೆ ಬೇರೆ ಹೆಸರುಗಳಿಂದ ಇದೊಂದು ಜನಾಂಗ ಕುಲಕಸುಬಿನ ಆಧಾರದ ಮೇಲೆ ದಕ್ಷಿಣ ಭಾರತದಲ್ಲಿ ಒಟ್ಟಾಗಲು ಪ್ರಯತ್ನಿಸುತ್ತಿದೆ. ಒಗ್ಗಟ್ಟಿನಿಂದ ಶ್ರೇಯಸ್ಸಿದೆ. ಅನಾದಿ ಕಾಲದಿಂದಲೂ ಮುಂದುವರಿದ ವರ್ಗಗಳವರು ಒಂದೇ ಶಕ್ತಿಯಾಗಿ ಈ ದೇಶವನ್ನು ಆಳುತ್ತಾ ಕಬಳಿಸುತ್ತಾ […]

Read More

ಕುಂದಾಪುರ ಬಸ್‌ಸ್ಟಾಂಡ್ ಬಿಕ್ಷುಕ ಮತ್ತು ಬೊಬ್ಬರ್ಯ ಕಟ್ಟೆ

ದಿವಂಗತ ವಿಶುಕುಮಾರ್‌ರವರನ್ನು ಆಳವಾಗಿ ಅಭ್ಯಸಿಸಿದರೆ ಅವರ ಸಾಹಿತ್ಯಿಕ ಸಂಬಂಧ ಹೆಚ್ಚು ಪ್ರಸಿದ್ಧಿ ಪಡೆದದ್ದು ಅವರು ಕುಂದಾಪುರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಇನ್ಸ್‌ಪೆಕ್ಟರ್ ಆಗಿದ್ದಾಗ ಎನ್ನಬಹುದು. ಆಗ ನಾನು ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಅವರ ಲೇಖನಗಳು ಉದಯವಾಣಿಯಲ್ಲಿ ಬರುತ್ತಿರುವುದನ್ನು ಓದುವವರಲ್ಲಿ ನಾನೂ ಒಬ್ಬನಾಗಿದ್ದೆ. ಹೆಚ್ಚಾಗಿ ಚಿತ್ರ- ಲೇಖನ (Feature Articles) ಗಳನ್ನು ಬರೆಯಲು ಇಚ್ಚಿಸುತ್ತಿದ್ದ ಇವರು, ನಾವು ದಿನನಿತ್ಯ ನೋಡುವ ವಿಷಯಗಳನ್ನು ಆಯ್ದು ಬರೆಯುತ್ತಿದ್ದರು. ಆಗಿನ ಕಾಲದಲ್ಲಿ ಈಗಿನಂತೆ ಸಂಪೂರ್ಣ ಆಟೋಮ್ಯಾಟಿಕ್, ಮೊಬೈಲ್ ಕ್ಯಾಮರ ಇಲ್ಲದಿರುವುದರಿಂದ ಇದಕ್ಕಾಗಿ […]

Read More

ವಿಶುಕುಮಾರ್ ಮತ್ತು ತುಕಾರಾಮ್ ಪೂಜಾರಿ

ನಮಗೆಲ್ಲರಿಗೂ ತಿಳಿದಿರುವಂತೆ ವಿಶುಕುಮಾರ್ ಓರ್ವ ಧೀಮಂತ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ. ವಿಶುಕುಮಾರ್ ಕೈಯಾಡಿಸದ ಕ್ಷೇತ್ರವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿ ಛಾಪನ್ನು ಒತ್ತಿದವರು. ಕೋಟಿ ಚೆನ್ನಯ, ಕರಾವಳಿ ಯಂತಹ ಅದ್ಭುತ ಸಿನೆಮಾ ನಿರ್ಮಾಣ ಮಾಡಿದವರು. ಒಂದರ್ಥದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟವರು. ಅವರ ನಾಟಕ ಡೊಂಕು ಬಾಲದ ನಾಯಕರು ಭ್ರಷ್ಟರಿಗೆ ನುಂಗಲಾರದ ತುತ್ತಾಗಿ ಮೈಪರಚಿಕೊಂಡದ್ದು ಇಂದು ಇತಿಹಾಸ. ನನ್ನ ಅಭಿಪ್ರಾಯದಂತೆ ನಮ್ಮ ಸಮಾಜದಲ್ಲಿ ಕತೆ, ಕವನ, ಕಾದಂಬರಿಗಳು ಮಾತ್ರ ಸಾಹಿತ್ಯದ ಪ್ರಕಾರಗಳು ಎನ್ನುವ ತಪ್ಪು […]

Read More

ವಿಶುಕುಮಾರ್ 4 ಕಾದಂಬರಿಗಳನ್ನು ಮರುಮುದ್ರಣಗೊಳಿಸಿದ ಯುವವಾಹಿನಿ

ಮಂಗಳೂರು : ಹಿರಿಯ ಸಾಹಿತಿ, ನಟ, ನಿರ್ದೇಶಕ ದಿ.ವಿಶುಕುಮಾರ್ ಅವರ 16 ಕಾದಂಬರಿಗಳು ಹಾಗೂ 12 ನಾಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನಮಾನಸದಿಂದ ದೂರವಾಗುತ್ತಿರುವ ಅವುಗಳನ್ನು ಮತ್ತೆ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಮೊದಲ ಹಂತದಲ್ಲಿ 4 ಕಾದಂಬರಿಗಳನ್ನು ಮರುಮುದ್ರಣ ಗೊಳಿಸಿ ದಿನಾಂಕ17.02.2019 ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳಿಸಿದೆ. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!