Yuvavahini

OCT 07, 2026 4.00 PM IST

1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ  ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ  ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ.

ಬಿಲ್ಲವರ ಎರಡು ಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್‌ನಾಡಿನಲ್ಲಿ ನಾಡಾರ್ ಹೀಗೆ ಬೇರೆ ಬೇರೆ ಹೆಸರುಗಳಿಂದ ಇದೊಂದು ಜನಾಂಗ ಕುಲಕಸುಬಿನ ಆಧಾರದ ಮೇಲೆ ದಕ್ಷಿಣ ಭಾರತದಲ್ಲಿ ಒಟ್ಟಾಗಲು ಪ್ರಯತ್ನಿಸುತ್ತಿದೆ.

ವಿಶುಕುಮಾರ್

ಒಗ್ಗಟ್ಟಿನಿಂದ ಶ್ರೇಯಸ್ಸಿದೆ. ಅನಾದಿ ಕಾಲದಿಂದಲೂ ಮುಂದುವರಿದ ವರ್ಗಗಳವರು ಒಂದೇ ಶಕ್ತಿಯಾಗಿ ಈ ದೇಶವನ್ನು ಆಳುತ್ತಾ ಕಬಳಿಸುತ್ತಾ ಬಂದಿದ್ದಾರೆ. ಈಗ ರಾಜಕೀಯ ಬೆಳವಣಿಗೆಯಿಂದಾಗಿ ದಲಿತರು ಒಗ್ಗಟ್ಟಿನ ರುಚಿಯನ್ನು ಕಂಡಿದ್ದಾರೆ ಹಾಗೂ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಒಗ್ಗಟ್ಟಿನಲ್ಲೇ ಹೋರಾಡುತ್ತಾರೆ. ಯಾವ ಒಗ್ಗಟ್ಟೂ ಇಲ್ಲದೆ ಚೆಲ್ಲಾಪಿಲ್ಲಿಯಾಗಿರುವವರು ಹಿಂದುಳಿದ ವರ್ಗಗಳವರು ಮಾತ್ರ. ಈ ಹಿಂದುಳಿದ ವರ್ಗಗಳಲ್ಲಿ ಬಿಲ್ಲವ ಯಾ ಈಡಿಗ ಜನಾಂಗವೂ ಒಂದು. ಬಿಲ್ಲವರು ಒಟ್ಟಾಗುವುದಿಲ್ಲ ಏಕೆ ಎಂಬ ಪ್ರಶ್ನೆಗೆ ಇಲ್ಲಿನ ಎರಡು ಮುಖಗಳ ಮುಖಾಂತರ ಸಮಾಧಾನ ಗಳಿಸಲು ಪ್ರಯತ್ನಿಸುತ್ತಿದ್ದೇನೆ

ಮುಖ ಒಂದು
ನಮಗೆ ಯಾವ ಚರಿತ್ರೆಯ ದಾಖಲೆಗಳೂ ಇಲ್ಲ. ಆದರೆ ನಮ್ಮ ಚರಿತ್ರೆಯನ್ನು ನಾವು ಊಹಿಸಬಲ್ಲೆವು. ಈ ಜನ ಅಂದರೆ ನಾವು ಮೂಲತಃ ಇದೇ ಜಿಲ್ಲೆಯವರು. ಬ್ರಾಹ್ಮಣರು, ಕ್ಷತ್ರಿಯರು ಇವರನ್ನು ಆಳುತ್ತಿದ್ದ ಕಾಲದಲ್ಲಿ ಈ ಜನಾಂಗದ ಕಸುಬು ಸಾಗುವಳಿ ಮಾಡುವುದು, ಕಳ್ಳು ತೆಗೆಯುವುದು ಮತ್ತು ಆಳುವವರ ಪ್ರಾಣ ಉಳಿಸಲು ರಣರಂಗದಲ್ಲಿ ಹೋರಾಡುವುದು. ಇದರಲ್ಲಿ ಕಳ್ಳು ತೆಗೆಯುವ ಕಸುಬು ಒಂದನ್ನು ಬಿಟ್ಟರೆ ಉಳಿದ ಕಸುಬುಗಳಿಗಾಗಿ ನಾವು ಹೆಮ್ಮೆ ಪಡಬೇಕು. ಇಷ್ಟೇ ಅಲ್ಲ, ಅನಾದಿ ಕಾಲದಿಂದಲೂ ಆಯುರ್ವೇದ ವೈದ್ಯಕೀಯ ವೃತ್ತಿಯಲ್ಲಿ ಬಿಲ್ಲವರದ್ದು ಅವಿಭಾಜ್ಯ ಅಂಗ. ಆದ್ದರಿಂದ ಇವರಿಗೆ ಬೈದ್ಯರು ಎಂಬ ಹೆಸರು. ಭೂತಸ್ಥಾನಗಳಲ್ಲಿ ಪ್ರಧಾನ ಅರ್ಚಕರಾದ್ದರಿಂದ ಇವರು ಪೂಜಾರಿಗಳು, ಬಿಲ್ಲು ವಿದ್ಯೆಯಲ್ಲಿ ನಿಪುಣರಾದ್ದರಿಂದ ಬಿಲ್ಲವರು.
ಬಿಲ್ಲವರು ಒಟ್ಟಾಗುತ್ತಿದ್ದುದು ಯುದ್ಧರಂಗದಲ್ಲಿ ಮಾತ್ರ. ಇದೊಂದು ಸಂದರ್ಭ ಬಿಟ್ಟರೆ ಬೇರೆ ಅವಕಾಶ ಕೋಳಿ ಅಂಕ ಅಥವಾ ಭೂತದ ಕೋಲ ನಡೆದಾಗ ಇವರು ಒಟ್ಟಾಗುತ್ತಿದ್ದರು. ಇವರಿಗೆ ರಾಜಕೀಯ ಪ್ರಜ್ಞೆ ಇಲ್ಲದ್ದರಿಂದ ಇವರು ಧನಿಗಳ ನೌಕರಿ ಮಾಡುವ ಶೂದ್ರರಾಗಿ ಉಳಿದರೇ ಹೊರತು ಬೌದ್ಧಿಕ ಬೆಳವಣಿಗೆ ಎಂದೂ ಉಂಟಾಗಲಿಲ್ಲ.
ಈ ಜನ ಬಹು ಪ್ರಾಮಾಣಿಕರು, ಒಡೆಯನ ಮಾತಿಗೆ ಎಂದೂ ತಪ್ಪುವವರಲ್ಲ. ಕೃತಘ್ನತೆ ಎಂದರೆ ಏನೆಂದೇ ಗೊತ್ತಿಲ್ಲದ ಮುಗ್ಧರು. ಇವರು ಎಷ್ಟು ಮುಗ್ಧರು ಎಂದರೆ ಕಾಮರಾಜ ನಾಡಾರರ ಕಾಲದಲ್ಲಿ ಈ ಜಿಲ್ಲೆಗೆ ರಾಜಕೀಯ ಅಧಿಕಾರದ ಪ್ರಸಾದ ಬಂದಾಗ ಅಧಿಕಾರ ಲಾಲಸೆ ಇಲ್ಲದೆ ತಮಗೆ ಬಂದ ಅವಕಾಶವನ್ನು ಬಂಟ ಜನಾಂಗಕ್ಕೆ ಮತ್ತು ಗೌಡ ಸಾರಸ್ವತರಿಗೆ ಬಿಟ್ಟು ಕೊಟ್ಟ ಮುಗ್ಧ ಬಿಲ್ಲವರು (ಅಥವಾ ಮೂಢ ಬಿಲ್ಲವರು, ಮೂರ್ಖ ಬಿಲ್ಲವರು). ಕಾಮರಾಜ ನಾಡರರು ಪ್ರಸಾದ ಕೊಟ್ಟಾಗ ಅಂದು ಅದನ್ನು ಸ್ವೀಕರಿಸಿದ್ದರೆ ಇಂದು ಕನ್ನಡ ಜಿಲ್ಲೆಯ ರಾಜಕೀಯ ಸ್ವಾಮ್ಯ ಬಿಲ್ಲವರ ಕೈಯಲ್ಲಿರುತ್ತಿತ್ತು.

ವಿಶುಕುಮಾರ್

ಮುಖ ಎರಡು
ಬಿರುವೆ ಕೆರುವೆ ಇದು ಮಾಮೂಲಿ ಉಕ್ತಿ ತುಳು ಭಾಷೆಯಲ್ಲಿ. ಅಂದರೆ ಬಿಲ್ಲವ ಕೊಲ್ಲುವ. ಬಿಲ್ಲವರೆಂದರೆ ಉಳಿದವರ ದೃಷ್ಟಿಯಲ್ಲಿ ಕೊಲೆಗಾರರು. ಅಲ್ಲ ಎಂದು ಹೇಳಲು ನಮಗೂ ಧೈರ್ಯವಿಲ್ಲ. ಪತ್ರಿಕೆಗಳಲ್ಲಿ ಏನಾದರೂ ಕೊಲೆ ಸುದ್ದಿ ಬಂದರೆ ಅದು ಯಾರಾದರೊಬ್ಬ ಪೂಜಾರಿ ಕೊಲೆ ಮಾಡಿದ್ದು ಎಂದು ಕಣ್ಮುಚ್ಚಿ ಹೇಳಬಹುದು. ಬಿಲ್ಲವರು ಕಳವು ಮೋಸ ಮಾಡುವುದಿಲ್ಲ. ಸುಳ್ಳು ಹೇಳುವುದಿಲ್ಲ. ಈ ಎರಡು ಕೆಲಸಗಳನ್ನು ಬೇರೆ ಜಾತಿಗಳವರು ಮಾಡುತ್ತಾರೆ. ಆದ್ದರಿಂದ ಇವರು ಬರೀ ಕೊಲೆ ಕೆಲಸ ಮಾಡುತ್ತಾರೆ.
ಇಲ್ಲಿ ಸಾಮಾಜಿಕ ಮೋಸವಿದೆ. ಯಾವುದೇ ಕೇಸಿನಲ್ಲಿ ಬಿಲ್ಲವ ಕೊಲೆ ಮಾಡಿದರೂ ಅದರಲ್ಲಿ ಕೈವಾಡ ಬೇರೆಯವರದ್ದು ಇರುತ್ತದೆ. ಬಿಲ್ಲವ ಹಿಂದಿನಿಂದಲೂ ಪ್ರಾಮಾಣಿಕ ಮತ್ತು ಹೆಚ್ಚಿನ ಧೀರನಲ್ಲವೇ? ಅದಕ್ಕೆ ನಮ್ಮ ದಕ್ಷಿಣ ಕನ್ನಡದ ಪ್ರತಿಯೊಬ್ಬ ಧನಿಯೂ, ಶ್ರೀಮಂತನೂ ಹೊಡೆದಾಟಕ್ಕೆ ಉಪಯೋಗಿಸಿಕೊಳ್ಳುವುದು ಬಿಲ್ಲವರನ್ನೇ! ಧನಿ ಹೇಳಿದ ಅಂತ ಇವನೇನೋ ಹೊಡೆದು ಕೊಲ್ಲುತ್ತಾನೆ. ಅನಂತರ ಕೋರ್ಟಿನಲ್ಲಿ ಧನಿ ತಪ್ಪಿಸಿಕೊಳ್ಳುತ್ತಾನೆ. ಇವ ಜೇಲಿಗೆ ಹೋಗುತ್ತಾನೆ.

ಹಿಂದೆ ರಣರಂಗದಲ್ಲಿ ಹೋರಾಡುತ್ತಿದ್ದ ಈ ಬಿಲ್ಲವರಿಗೆ ಈಗ ಹೋರಾಡುವುದಕ್ಕೆ ಒಳ್ಳೇ ಯುದ್ಧಗಳೇ ಸಿಗುವುದಿಲ್ಲವಾದ್ದರಿಂದ ಇವರೆಲ್ಲಾ Excise Contractor ಗಳಾಗಿ ಪರಸ್ಪರ ಹೋರಾಡುತ್ತಿದ್ದಾರೆ. ಜಾತಿಗೆ ಜಾತಿ ಹಗೆ! ಈ ಜನಾಂಗದ ಕೆಲವು ಪ್ರಮುಖ ಅಬಕಾರಿ ಕಂಟ್ರಾಕ್ಟರುಗಳ ಅಹಂ ಮತ್ತು ಪರಸ್ಪರ ವೈಮನಸ್ಯದಿಂದಾಗಿ ಇಡೀ ಜಾತಿ ಚೆಲ್ಲಾಪಿಲ್ಲಿಯಾಗಿ ಹೋಗಿದೆ. ಇವರ ಜಗಳದ ಉಪಯೋಗವನ್ನು ಮೂರನೇ ವ್ಯಕ್ತಿಗಳು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಬಿಲ್ಲವರ ಜಗಳದಿಂದಾಗಿ ಈಗ ಬ್ರಾಹ್ಮಣರು, ಕೊಂಕಣಿಗರು, ಬಂಟರು ಎಲ್ಲರೂ ಗಡಂಗು ನಡೆಸುವ ಹಾಗಾಯ್ತು.

ಸುಮಾರು ಎಂಟು ಲಕ್ಷ ಜನ ಬಿಲ್ಲವರು ದ.ಕ. ಜಿಲ್ಲೆಯಲ್ಲಿದ್ದಾರೆ ಎಂದು ನಾವು ಹೇಳುತ್ತೇವೆ. ಇಷ್ಟು ಜನಸಂಖ್ಯೆ ಇದ್ದು ನಮಗೇನು ಪ್ರಯೋಜನವಾಯಿತು? ಪ್ರಯೋಜನ ಆದದ್ದು ಬೇರೆ ಜನಾಂಗಕ್ಕೆ. ಓಟು ಹಾಕಿದ್ದು ಬಿಲ್ಲವರು. ಶಾಸಕರೂ, ಮಂತ್ರಿಗಳೂ, ಎಂ.ಪಿ., ಆದದ್ದು ಬೇರೆಯವರು. ನೀವು ಎಂಟು ಲಕ್ಷ ಜನ ಇರುವುದು ಹೌದಾದರೆ ಈ ಜಿಲ್ಲೆಯಲ್ಲಿ ನಿಮ್ಮ ಜನಾಂಗದ ಮೂರು ನಾಲ್ಕು ಶಾಸಕರಾಗಲೀ, ಒಬ್ಬ ಮಂತ್ರಿಯಾಗಲೀ ಆಗಬೇಕಿತ್ತಲ್ಲ? ಈಗ ಯಾರಿದ್ದಾರೆ? ಎಷ್ಟಿದ್ದಾರೆ? ಎಂಟು ಲಕ್ಷ ಜನಕ್ಕೆ ಒಬ್ಬ ಶಾಸಕ, ಒಬ್ಬ ಎಂ.ಪಿ. ಇದ್ದಾರೆ ಸಾಕೇನು?

ಸಂಖ್ಯಾಬಲ ದನಗಳಿಗೂ ಇರುತ್ತದೆ. ಕುರಿಗಳಿಗೂ ಇರುತ್ತದೆ. ನಮ್ಮಲ್ಲಿ ಎಂಟು ಲಕ್ಷ ಸಂಖ್ಯಾ ಬಲ ಇದ್ದು ಯಾರಿಗೇನು ಪ್ರಯೋಜನ?

ಉಪಸಂಹಾರ
ಒಟ್ಟಿನಲ್ಲಿ ನನ್ನ ಉದ್ದೇಶ ಇಷ್ಟು: ಜಾತೀಯ ನಿರ್ಮೂಲನಕ್ಕಾಗಿ ಭಾಷಣ ಬಿಗಿದವರೆಲ್ಲಾ ತಮ್ಮ ಜಾತಿಗಳನ್ನು ಭದ್ರ ಮಾಡಿಕೊಂಡು ನಮಗೆ ಮಾತ್ರ ಉಪದೇಶ ನೀಡಿದ್ದಾರೆ ನೀವೆಲ್ಲಾ ಅಂದರೆ ಹಿಂದುಳಿದ ವರ್ಗಗಳೆಲ್ಲಾ ಒಟ್ಟಾಗಿ, ಒಗ್ಗಟ್ಟಾಗಿ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳದೆ ಇದ್ದರೆ ಮುಂದುವರಿದ ಜನಾಂಗಗಳವರು ನಿಮ್ಮನ್ನು ಗಡಂಗು ನಡೆಸುವುದಕ್ಕೆ, ಡೋಲು ಬಾರಿಸುವುದಕ್ಕೆ, ಮೀನು ಹಿಡಿಯುದಕ್ಕೆ ಮತ್ತು ಗ್ಲಾಸು ತೊಳೆಯುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಾರೆ. ಆದ್ದರಿಂದ ಪರಸ್ಪರ ವೈಮನಸ್ಸು ತೊರೆದು, ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು, ರಾಜಕೀಯ ಪ್ರಜ್ಞೆ ಬೆಳೆಸಿ.

1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ  ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ  ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ…

ರಜತ ರಶ್ಮಿ 2012 ಸ್ಮರಣ ಸಂಚಿಕೆಯಿಂದ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!