ಮಂಗಳೂರು ಯುವವಾಹಿನಿಯಿಂದ ವಿದ್ಯಾರ್ಥಿ ದತ್ತು ಸ್ವೀಕಾರ
15-12-2016, 11:26 AM
ಮಂಗಳೂರು ಘಟಕದ ವತಿಯಿಂದ ದತ್ತು ಸ್ವೀಕಾರ ಮಾಡಿರುವ ವಿದ್ಯಾರ್ಥಿಗಳಿಗೆ ಈ ಸಾಲಿನ ಸಂಪೂರ್ಣ ಶೈಕ್ಷಣಿಕ ವೆಚ್ಚದ ಸಹಾಯಧನ ವಿತರಣೆ.
15-12-2016, 11:26 AM
ಮಂಗಳೂರು ಘಟಕದ ವತಿಯಿಂದ ದತ್ತು ಸ್ವೀಕಾರ ಮಾಡಿರುವ ವಿದ್ಯಾರ್ಥಿಗಳಿಗೆ ಈ ಸಾಲಿನ ಸಂಪೂರ್ಣ ಶೈಕ್ಷಣಿಕ ವೆಚ್ಚದ ಸಹಾಯಧನ ವಿತರಣೆ.
14-12-2016, 9:41 AM
ಕೂಳೂರು ಘಟಕದ ವತಿಯಿಂದ ದಿನಾಂಕ 14-12-2016 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಪ್ರಸ್ತುತ ದಿನದಲ್ಲಿ ಯವಜನತೆ’ ಎಂಬ ಕಾರ್ಯಾಗಾರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನರೇಶ್‌ಕುಮಾರ್ ಸಸಿಹಿತ್ಲುರವರು ಪ್ರಸ್ತುತ ಸಮಾಜದಲ್ಲಿ ಬಿಲ್ಲವ ಯುವಜನತೆಗೆ ಆಗುವಂತಹ ತೊಂದರೆಗಳ ಬಗ್ಗೆ ತಿಳಿಸಿದರು. ಬಿಲ್ಲವ ಯುವಜನತೆಯು ಯಾವ ರೀತಿಯಲ್ಲಿ ಅನ್ಯ ಸಮುದಾಯದಿಂದ ದಾರಿ ತಪ್ಪುತ್ತಿದೆ ಎಂಬ ವಿಷಯವನ್ನು ಕೆಲವೊಂದು ಉದಾಹರಣೆಯ ಮೂಲಕ ತಿಳಿಸಿ ಯುವಜನತೆಗೆ ಎಚ್ಚರಿಕೆಯನ್ನು ನೀಡಿದರು ಹಾಗೂ ಆದಷ್ಟು ಯುವಜನತೆಯು ಯುವವಾಹಿನಿಗೆ ಸೇರಿ ಈ ಎಲ್ಲಾ […]
20-11-2016, 5:30 AM
ದಿನಾಂಕ 16-11-2016 ರಂದು ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಕೂಳೂರು ಘಟಕದ ಅಧ್ಯಕ್ಷ ಸುಜಿತ್‌ರಾಜ್ ಐ.ರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಶ್ರೀಮತಿ ಐ. ಸುಶೀಲಾ ಇವರು ಮಾಹಿತಿ ನೀಡಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಭಾವಚಿತ್ರ ಸ್ಪರ್ಧೆಯು ಶ್ರೀಮತಿ ರೇಣುಕಾ ಪ್ರಸಾದ್ ಹಾಗೂ ಶ್ರೀಮತಿ ಪ್ರಿಯಾ ಇವರ ಸಂಚಾಲಕತ್ವದಲ್ಲಿ ಸಾಂಪ್ರದಾಯಿಕ ಸಾಮಾನ್ಯ ಹಾಗೂ ಆಧುನಿಕ ಈ ರೀತಿ ಮೂರು ವಿಭಾಗದಲ್ಲಿ ನೆರವೇರಿತು. ವಿಜೇತರಿಗೆ ಬಹುಮಾನ […]
23-10-2016, 5:54 AM
ದಿನಾಂಕ 23-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಘಟಕದ ಸದಸ್ಯರಿಗಾಗಿ ಒಂದು ದಿನದ ಸಾರ್ವಜನಿಕ ಸಂವಹನ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ 2.30 ರ ತನಕ ಜರಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸೀ ಅಂತಾರಾಷ್ಟ್ರೀಯ ತರಬೇತುದಾರ ರಾಮಚಂದ್ರ ರಾವ್‌ರವರು ಸದಸ್ಯರು ಸಭೆಯಲ್ಲಿ ಮಾತನಾಡುವಾಗ ಯಾವ ರೀತಿ ಪೂರ್ವ ತಯಾರಿ ಮಾಡಬೇಕು, ಯಾವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ವಿಷಯವನ್ನು ತಿಳಿಸಿದರು. ನಂತರ ೨೫ ಮಂದಿಯ ಗುಂಪನ್ನು ಎರಡು ತಂಡಗಳಾಗಿ ವಿಂಗಡಿಸಿ […]
05-09-2016, 5:26 AM
ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆ ಮುಲ್ಕಿ ಹಾಗೂ ಯುವವಾಹಿನಿ (ರಿ) ಮೂಲ್ಕಿ ಘಟಕ ಇವರ ಜಂಟಿ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿತು. ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ನಾರಾಯಣಗುರು ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕರಾದ ಹೇಮರಾಜ್ ಹಾಗೂ ಶ್ರೀಮತಿ ಜಯಶ್ರೀ ಇವರನ್ನು ಶಿಕ್ಷಕ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾಯಣ ಗುರು ವಿದ್ಯಾಸಂಸ್ಥೆಯ ಸಂಚಾಲಕ […]
27-08-2016, 5:28 AM
ದಿನಾಂಕ 27-8-2016ರಂದು ವೇಣೂರಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರವು ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಅಧ್ಯಕ್ಷತೆಯಲ್ಲಿ ಜರಗಿತು. ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಳದಂಗಡಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಶಾಂತ್ ಕುಮಾರ್ರವರು ಶಿಬಿರವನ್ನು ನಡೆಸಿಕೊಟ್ಟರು. ಮಹಾಮಾನವತವಾದಿ ನಾರಾ ಯಣ ಗುರುಗಳು ಎಂಬ ವಿಷಯದ ಬಗ್ಗೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಕ್ಷಾ ಪ್ರಥಮ ಸ್ಥಾನವನ್ನು ಪಡೆದರು. ಅಂದಿನ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ನಿಶಾ, ನೀರಿಕ್ಷಾ ಎನ್. ನಾವರ, ಆಕೃತಿ […]
27-08-2016, 5:22 AM
ಮಂಗಳೂರು ಘಟಕದ ವತಿಯಿಂದ ದಿನಾಂಕ 27-08-2016 ರಂದು ಗೋಕರ್ಣನಾಥ ಕಾಲೇಜ್ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಿಗೆ ನಾಯಕತ್ವ ತರಬೇತಿ ಶಿಬಿರ ನಡೆಯಿತು. 27 ಈ ತರಬೇತಿ ಶಿಬಿರದಲ್ಲಿ ಸುಮಾರು 10 ಕಾಲೇಜುಗಳಿಂದ 48 ವಿದ್ಯಾರ್ಥಿಗಳು ಭಾಗವಹಿಸಿರುವರು. ಶಿಬಿರದ ಉದ್ಘಾಟನೆಯನ್ನು ಬಿ.ಜಿ.ಎಸ್. ಕಾಲೇಜಿನ ಪ್ರಾಧ್ಯಾಪಕ ಕೇಶವ ಕಟೀಲು ನೆರವೇರಿಸಿದರು. ಅಡ್ಯಾರು ಸಹ್ಯಾದ್ರಿ ಎಂ.ಬಿ.ಎ. ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭರವರು ತರಬೇತಿಯನ್ನು ನಡೆಸಿಕೊಟ್ಟರು. ವಕೀಲರಾದ ನವನೀತ್ ಡಿ. ಹಿಂಗಾಣಿಯವರು ಬಿಲ್ಲವ ಸಂಘಟನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ನರೇಶ್ ಸಸಿಹಿತ್ಲು ಯುವವಾಹಿನಿ […]
20-08-2016, 5:27 AM
ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ತಾ. 20-8-2016 ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
17-07-2016, 8:26 AM
ಯುವವಾಹಿನಿ (ರಿ) ಉಡುಪಿ ಘಟಕದ ಇದರ ನೇತೃತ್ವದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ತಾ. 17-7-2016 ರಂದು ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಉಡುಪಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಯುವವಾಹಿನಿ(ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಯುವ ಉದ್ಯಮಿಗಳಾದ ಜಗನ್ನಾಥ ಪೂಜಾರಿ ಮತ್ತು ಲ|ಶಾಲಿನಿ ಡಿ.ಬಂಗೇರ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 19 ಮಕ್ಕಳಿಗೆ ರೂ. 65000 ದಷ್ಟು ವಿದ್ಯಾನಿಧಿಯನ್ನು ವಿತರಿಸಲಾಯಿತು. ವಿದ್ಯಾನಿಧಿ ಸಂಚಾಲಕರಾದ ರಘುನಾಥ್ […]