IAS, IPS ಮುಂತಾದ ಉನ್ನತ ಹುದ್ದೆಗಳ ಬಗ್ಗೆ ಆಸಕ್ತಿ ತೋರಿಸಿ, ಕೇವಲ ಡಾಕ್ಟರ್ ,ಇಂಜಿನಿಯರಿಂಗ್ ನಂತಹ ಹುದ್ದೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ, ಈ ದೇಶದ ಉನ್ನತ ಅಧಿಕಾರಿಗಳಾಗಿ ಸಮಾಜದ ಋಣ ತೀರಿಸಿ ಎಂದು ಉದ್ಯಮಿ, ಬಿಲ್ಲವ ಸಮಾಜದ ಮುಖಂಡರಾದ ಶ್ರೀ ಬಿ.ಎನ್.ಶಂಕರ ಪೂಜಾರಿ ತಿಳಿಸಿದರು.
ಅವರು ದಿನಾಂಕ 02.07.2017 ನೇ ಆದಿತ್ಯವಾರ ಉಡುಪಿಯ ಕುತ್ಪಾಡಿ ,ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ಇಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
SSLC ಹಾಗೂ PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.20 ವಿದ್ಯಾರ್ಥಿಗಳಿಗೆ ಸುಮಾರು ರೂ 75,000/- ಮೊತ್ತದ ವಿದ್ಯಾನಿಧಿ ವಿತರಿಸಲಾಯಿತುಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶಿಲ್ಪಾ ರವೀಂದ್ರ ಕೋಟ್ಯಾನ್, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ದಯಾನಂದ ಡಿ. ಹರ್ಷ ಗ್ರೂಪ್ ನಿರ್ದೇಶಕರಾದ ಸೂರ್ಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ (ರಿ) ಉಡುಪಿ ಘಟಕದ ಅಧ್ಯಕ್ಷರಾದ ರಮೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಸಂಚಾಲಕಿ ಶ್ರೀಮತಿ ಸುಶ್ಮಿತಾ ಗಿರಿರಾಜ್ ಹಾಗೂ ವಿದ್ಯಾರ್ಥಿ ಭವಿಷ್ಯ ನಿರ್ಮಾಣ ನಿರ್ದೇಶಕರಾದ ಗಣೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಪ್ರಸ್ತಾವನೆ ಮಾಡಿದರು.ಭಾಸ್ಕರ್ ಸುವರ್ಣ ಪ್ರಾರ್ಥಿಸಿದರುಶ್ರೀಮತಿ ಭಾರತಿ ಭಾಸ್ಕರ್ ಧನ್ಯವಾದ ನೀಡಿದರು.
ಅಶೋಕ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು