ಯುವವಾಹಿನಿ (ರಿ.) ಕೇಂದ್ರ ಸಮಿತಿ ಇದರ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ದಿನಾಂಕ 30.07.2017ನೇ ರವಿವಾರ ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಇಲ್ಲಿ ನಡೆಯಿತು.
9.30ಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಪೋಟೋ ಎದುರು ಟ್ರಸ್ಟಿಗಳಾದ ಸಂಜೀವ ಪೂಜಾರಿಯವರು ದೀಪ ಬೆಳಗಿಸುವುದರ ಮೂಲಕ ಬೆಳಗ್ಗಿನ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಂತರ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ರವರಿಗೆ ಪುಷ್ಪ ನೀಡಿ ತರಬೇತಿಗೆ ಆಹ್ವಾನ ನೀಡಲಾಯಿತು. ನಂತರ 2.30 ತಾಸುಗಳನ್ನು ರಾಜೇಂದ್ರ ಭಟ್ ರವರು ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ತನ್ನ ಅದ್ಬುತವಾದ ಮಾತುಗಳಿಂದ ಕಾರ್ಯಗಾರವನ್ನು ನಡೆಸಿಕೊಟ್ಟರು. ಮಧ್ಯಾಹ್ನ 12.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮೊದಲಿಗೆ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನೆರವೇರಿಸಿದರು. ನಂತರ ಆಡಳಿತ ಟ್ರಸ್ಟಿಗಳಾದ ಸಂತೋಷ್ ಕುಮಾರ್ ವರು ಬಂದಂತಹ ಅತಿಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ನಂತರ ಮುಖ್ಯ ಅತಿಥಿಗಳಾದ ಶ್ರೀ ಶೇಖರ ಕೆ. ಕರ್ಕೇರ ಮೆನೆಜಿಂಗ್ ಡೈರೆಕ್ಟರ್ ಘಾಟ್ಕೆ ಕರ್ಕೇರ ಪವರ್ ಇಂಡಸ್ಟ್ರೀಸ್ ಇವರು ದೀಪ ಬೆಳಗಿಸಿ ಸಮಾರೋಪ ಸಮಾರಂಭದ ಉದ್ಘಾಟನೆ ಮಾಡಿದರು. ಅವರು ತಮ್ಮ ಮಾತಿನಲ್ಲಿ ಯುವವಾಹಿನಿ ಸುಮಾರು ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರುತ್ತಿದೆ. ಅಲ್ಲದೆ ತರಬೇತಿ ಕಾರ್ಯಗಾರ ಮೂಲಕ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥರ್ಯ ವಿದ್ಯಾರ್ಥಿ ಜೀವನದಲ್ಲಿ ತಾನು ಹೇಗೆ ಮುಂದೆ ಬರಬೇಕು, ಆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುದನ್ನು ತಿಳಿಸುತ್ತಾರೆ. ಯುವವಾಹಿನಿಗೆ ಯಾವಾಗಲೂ ತನ್ನ ನಿರಂತರ ಪ್ರೋತ್ಸಾಹ ಇದೆ ಎಂದರು
ಶೈಕ್ಷಣಿಕ ದತ್ತು ಸ್ವೀಕಾರದ ಟ್ರಸ್ಟಿಗಳಾದ ಅಶೋಕ್ ಕುಮಾರ್ ಇಂಜಿನಿಯರ್ ದತ್ತು ಸ್ವೀಕಾರದ 14 ವಿದ್ಯಾರ್ಥಿಗಳ ಪಟ್ಟಿ ಓದಿದರು. ಶ್ರೀ ಶೇಖರ ಕೆ. ಕರ್ಕೇರ ರವರು ದತ್ತು ಸ್ವೀಕಾರದ ವಿದ್ಯಾರ್ಥಿಗಳಿಗೆ ಈ ಸಾಲಿನ ಸಹಾಯಧನ ವಿತರಿಸಿದರು. ನಂತರ ತರಬೇತಿ ಮತ್ತು ಅಭಿವೃದ್ಧಿ ಪರಿಶೀಲನಾ ಟ್ರಸ್ಟಿಗಳಾದ ತಾರನಾಥ ಎಚ್.ಬಿ ರವರು ವಿದ್ಯಾರ್ಥಿ ವೇತನದ 48 ವಿದ್ಯಾರ್ಥಿಗಳ ಪಟ್ಟಿ ಓದಿದರು. ಸೂರ್ಯ ಪ್ರಕಾಶ್ ಮತ್ತು ಸಚೇತ್ ಸುವರ್ಣರವರು ವಿದ್ಯಾರ್ಥಿ ವೇತನ ವಿತರಿಸಿದರು. ಈ ಸಾಲಿನಲ್ಲಿ 3.05 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶ್ರೀ ಸಚೇತ್ ಸುವರ್ಣ ರವರು ಮಾತನಾಡಿ IAS,IPS,UPSC ಮುಂತಾದ ಸ್ಪರ್ಧಾ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕು. ಯುವವಾಹಿನಿ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಟ್ರಸ್ಟಿಗಳಾದ ಚಂದ್ರಶೇಖರ ರವರು ವಿದ್ಯಾರ್ಥಿಗಳಿಗೆ ಸರಕಾರಿ ಸಂಸ್ಥೆಗಳಿಂದ ಹಾಗೂ ಖಾಸಗಿ ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು. ಈ ವೇದಿಕೆಯಲ್ಲಿ ಟ್ರಸ್ಟಿಗಳಾದ ಸೂರ್ಯ ಪ್ರಕಾಶ್, ಸಂಜೀವಪೂಜಾರಿ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮನಾಭ ಮರೋಳಿಯವರು ವಹಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಟ್ರಸ್ಟ್ ಸದಸ್ಯರಾದ ಸದಸ್ಯರಾದ ರಾಕೇಶ್ ಕುಮಾರ್ ರವರು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೇಮ್‍ನಾಥ್ ಕೆ. ರವರು ವಂದಿಸಿದರು.