17-06-2018, 1:57 PM
. ಉಡುಪಿ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಹಸಿರು ಉಸಿರು ಕಾರ್ಯಕ್ರಮಕ್ಕೆ ಉಡುಪಿಯ ಬಲಾಯಿಪಾದೆ ಜಂಕ್ಷನ್ ಬಳಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವವಾಹಿನಿ ಉಡುಪಿ ಘಟಕದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಉದ್ಯಾವರ ಮಾತನಾಡಿ ನಮ್ಮ ಪಕೃತಿಯ ಉಳಿವಿಗಾಗಿ ಶ್ರಮಿಸುವುದು ನಮ್ಮ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರವೇ ನಮ್ಮ ಉಸಿರು, ನಮ್ಮ ಪರಿಸರ ಹಸಿರಾಗಿದ್ದಲ್ಲಿ ಉಸಿರು ಸ್ವಚ್ಚ ವಾಗಿರುತ್ತದೆ. ನಮ್ಮ ಪರಿಸರ ಸಮೃದ್ಧ ಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ನಾವೂ ಉತ್ತಮ ಕೊಡುಗೆ ನೀಡೋಣ ಎಂದು ಕರೆ […]
Read More
15-06-2018, 1:27 PM
ಮುಲ್ಕಿ : ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಮುಲ್ಕಿ ಸಮೀಪದ ಕೊಳಚಿಕಂಬ್ಳದ ಕೇಶವ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗಳ ಬಡ ಕುಟುಂಬದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಈ ಮನೆಯಲ್ಲಿ ವಾಸಿಸಲು ಸಾಧ್ಯವಾಗದೆ ಕೇಶವ ಪೂಜಾರಿ ಯವರ ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಮುಲ್ಕಿ ಘಟಕವು ಸುಮಾರು ರೂಪಾಯಿ 60,000/- ವೆಚ್ಚದಲ್ಲಿ ಈ ಮನೆಯನ್ನು ರಿಪೇರಿಗೊಳಿಸಿ ವಾಸಿಸಲು ಯೋಗ್ಯವಾಗುವಂತೆ ಮಾಡಿ ದಿನಾಂಕ 15.06.2018 ರಂದು ಮನೆಯನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ […]
Read More
10-06-2018, 4:09 PM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸದಸ್ಯರು ದಿನಾಂಕ 10/06/2018 ಪಂಜಿಮೊಗರು ಮಂಜೊಟ್ಟಿ ಅಂಗನವಾಡಿ ಕೇಂದ್ರದ ಎದುರಿನ ಪ್ರದೇಶದಲ್ಲಿ ಶ್ರಮದಾನ ಮಾಡಲಾಯಿತು. ಅಂಗನವಾಡಿ ಕೇಂದ್ರದ ಕಾಲುದಾರಿಯು ಅಸ್ತವ್ಯಸ್ತವಾಗಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ಹಾಜರಾಗಲು ಅನಾನುಕೂಲವಾದ್ದರಿಂದ ಘಟಕದ ವತಿಯಿಂದ ಶ್ರಮದಾನ ಮಾಡಲಾಯಿತು. ಒಟ್ಟು 25 ಮಂದಿ ಸದಸ್ಯರು ಶ್ರಮದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಮತ್ತು ಈ ಕಾರ್ಯಕ್ರಮದ ಸಂಚಾಲಕಿ ಹಾಗೂ ಸಂಘಟನಾ ಕಾರ್ಯದರ್ಶಿಯಾದ […]
Read More
10-06-2018, 2:52 AM
ಬಜ್ಪೆ : ತಾ. 10.06.18 ಭಾನುವಾರ ಯುವವಾಹಿನಿ(ರಿ) ಬಜ್ಪೆ ಘಟಕದ ಸದಸ್ಯರಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಜ್ಪೆ ಸಮೀಪದ ಮುಂಡಾರು ಇಲ್ಲಿರುವ ಹಿಂದೂ ರುದ್ರ ಭೂಮಿಯ ಪರಿಸರ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಶ್ರೀಯುತ ರಾಘವೇಂದ್ರ ಆಚಾರ್, ಮಾಲಕರು, ಶಾಂತಿ ಭವನ ಬಜ್ಪೆ ಮತ್ತು ಡಾ|| ಜಯರಾಮ್ ಶೆಟ್ಟಿ, ಖ್ಯಾತ ಮಕ್ಕಳ ತಜ್ಞರು, ಬಜ್ಪೆ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 20 ವಿವಿಧ ಜಾತಿಯ ಸುಮಾರು 100 ಗಿಡಗಳನ್ನು […]
Read More
08-06-2018, 3:52 PM
ಕಟಪಾಡಿ : ಯುವವಾಹಿನಿ (ರಿ) ಕಟಪಾಡಿ ಘಟಕದ ಆಶ್ರಯದಲ್ಲಿ ಬಡ ಕುಟುಂಬದ ಮನೆಯನ್ನು ವಾಸ ಮಾಡಲು ಯೋಗ್ಯವಾಗುವಂತೆ ಮಾಡಲಾಯಿತು. ಕಟಪಾಡಿ ಮೂಡಬೆಟ್ಟು ಗ್ರಾಮದ ಶ್ಯಾಮಲ ಪುರಾಣಿಕ್ ಎಂಬವರ ಮನೆ ವಾಸಿಸಲು ಅನಾನುಕೂಲತೆಯಿಂದ ಕೂಡಿದ್ದು, , ಯುವವಾಹಿನಿ ಕಟಪಾಡಿ ಘಟಕವು ರೂ 25,000/- ವೆಚ್ಚದಲ್ಲಿ ಶೌಚಾಲಯ ನಿರ್ಮಾಣದೊಂದಿಗೆ ಮನೆಯನ್ನು ವಾಸಿಸಲು ಯೋಗ್ಯವಾಗುವಂತೆ ಮಾಡಲಾಯಿತು. ಕಾಪು ಪೋಲೀಸ್ ಠಾಣಾ ಉಪನಿರೀಕ್ಷಕ ನಿತ್ಯಾನಂದ ಗೌಡ, ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಕಟಪಾಡಿ ಘಟಕದ ಅಧ್ಯಕ್ಷ […]
Read More
02-05-2018, 2:08 PM
ದಿನಾಂಕ : 02/05/2018 ರಂದು ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿಂದ ಕಿಲೆಂಜಾರು ಗ್ರಾಮದ ನಿವಾಸಿಯಾದ,ನಡೆದಾಡಲು ಅಸಾಧ್ಯವಾಗಿ ಹಾಸಿಗೆ ಹಿಡಿದಿರುವ ರವೀಂದ್ರ ಇವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೋಟ್ಟು , ಉಪಾಧ್ಯಕ್ಶರಾದ ಅಜೇಯ್ ಅಮೀನ್ ನಾಗಂದದಿ, ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ಲ್ , ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು
Read More
29-04-2018, 6:13 AM
ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ವತಿಯಿಂದ ಕೆಂಜಾರು ನಿವಾಸಿ ಶ್ರೀ ಮತಿ ಸುಶೀಲರ ಮಗಳು ಅಮಿತ ರವರ ಮದುವೆಗೆ ₹.10,000/- ಸಹಾಯ ಧನ ನೀಡಲಾಯಿತು. ಸುಶೀಲರವರ ಪತಿ 20 ವರ್ಷಗಳ ಹಿಂದೆಯೆ ತೀರಿ ಹೋಗಿರುತ್ತಾರೆ. ಮಗಳು ಅಮಿತಳೊಂದೆಗೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಇವರು ಈಗ ಕ್ಯಾನ್ಸರ್( last stage) ರೋಗ ದಿಂದ ಬಳಲುತ್ತಿದ್ದು ಮಗಳ ಮದುವೆಗೂ ಹೋಗಲಾರದಂತಹ ಸ್ಥಿತಿಯಲ್ಲಿದ್ದಾರೆ. .ಈ ಸಂದರ್ಭದಲ್ಲಿ ಯುವವಾಹಿನಿ ಕೆಂಜಾರು ಕರಂಬಾರು ಘಟಕದ ಉಪಾಧ್ಯಕ್ಷರಾದ ಯಶವಂತ್ , ಕಾರ್ಯದರ್ಶಿ ಜಿತೇಶ್ […]
Read More
22-03-2018, 2:06 AM
ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 22.03.2018 ರಂದು ಮುಲ್ಕಿ ಬಪ್ಪನಾಡು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು
Read More
18-03-2018, 2:42 PM
ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ ಎಂಬ ಘೋಷ ವಾಕ್ಯದ ಮೂಲಕ ಕಳೆದ ವರ್ಷ ಯುವವಾಹಿನಿ ಬಂಟ್ವಾಳ ತಾಲೂಕು ಘಟಕವು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜಕಳ ನಿವಾಸಿ ಅಕ್ಕಮ್ಮ ಎಂಬ ಬಡ ಕುಟುಂಬಕ್ಕೆ ಸುಮಾರು ಐದು ಲಕ್ಷ ವೆಚ್ಚದ ಮನೆ ನಿರ್ಮಿಸಿ ಹಸ್ತಾಂತರ ಮಾಡಿದೆ. ಈ ಸಾಲಿನಲ್ಲಿ ಬಂಟ್ವಾಳ ಮೂಡ ಗ್ರಾಮದ ನಂದಬೆಟ್ಟು ಎಂಬಲ್ಲಿನ ಪ್ರೇಮ ಎಂಬ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ದಿನಾಂಕ 18.03.2018 ರಂದು ನಾಟಿ ಕೇಶವ ಶಾಂತಿ […]
Read More
15-03-2018, 1:37 AM
ದಿನಾಂಕ 15.03.2018 ರಂದು ದಿ. ಸೋಮಪ್ಪ ಸುವರ್ಣ ರವರ ಸ್ಮರಣಾರ್ಥ ವಾಗಿ ಯುವವಾಹಿನಿ (ರಿ ) ಮುಲ್ಕಿ ಘಟಕದದಿಂದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ (ಬೋರ್ಡ್ ಶಾಲೆ) ಗೆ ರೂ 5000/ – ಧನಸಹಾಯ ನೀಡಲಾಯಿತು . ಈ ಸಂದರ್ಭದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಕೋಟ್ಯಾನ್ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಕುಬೆವೂರು , ಹರೀಂದ್ರ ಸುವರ್ಣ, ಉದಯ ಅಮೀನ್ ಮಟ್ಟು . ಪ್ರಕಾಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು
Read More