ಹಳೆಯಂಗಡಿ : ಯುವವಾಹಿನಿ (ರಿ.) ಹಳೆಯಂಗಡಿ ಘಟಕವು ಕಳೆದ 2 ದಶಕಗಳಿಂದ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಳೆಯಂಗಡಿಯ ಪ್ರಗತಿಯೊಂದಿಗೆ ಹಾಗು ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಮುಖಿ ಚಿಂತನೆಯೊಂದಿಗೆ ನಾಯಕತ್ವವನ್ನು ರೂಪಿಸಿ ಬೆಳೆಸುವ ಯುವ ಸಂಘಟನೆಯಾಗಿ ಬೆಳೆಯುತ್ತಿದೆ.
ಕಳೆದ 20 ವರ್ಷಗಳಿಂದ ಸಂಘದ ಜೊತೆ-ಜೊತೆಯಾಗಿ ಹತ್ತು ಹಲವಾರು ಕಾರ್ಯಕ್ರಮಗಳ ಯಶಸ್ಸಿನ ರೂವಾರಿಯಾಗಿ ಈಗಾಗಲೇ ಸಂಘದ ನೂತನ ಕಟ್ಟಡ ನಿಧಿಗೆ ರೂಪಾಯಿ 7.5 ಲಕ್ಷ ಧನಸಹಾಯದ ಭರವಸೆಯನ್ನು ನೀಡಿದೆ. ಮಾತ್ರವಲ್ಲದೆ ಪ್ರಸ್ತುತ ಯುವವಾಹಿನಿ ಘಟಕವು ನೂತನ ಗುರು ಮಂದಿರಕ್ಕೆ ಅತ್ಯಂತ ಅಗತ್ಯವಾಗಿರುವ ಅರ್ಚಕರ ಕೊಠಡಿ, ನೈವೇದ್ಯ ಶಾಲೆ, ಪ್ರಸಾದ ಕೇಂದ್ರವನ್ನು ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ನಮ್ಮ ಸಂಘದ ಅಧ್ಯಕ್ಷರಾಗಿ ಯುವವಾಹಿನಿಯ ಮಾರ್ಗದರ್ಶಕರಾಗಿ, ಯುವಶಕ್ತಿಗೆ ಸ್ಫೂರ್ತಿಯ ಚಿಲುಮೆಯಾಗಿ ಪ್ರೀತಿಯ ಗುರುಗಳಾಗಿ ಆದರ್ಶಪ್ರಾಯರಾಗಿದ್ದ ದಿ. ದಾಮೋದರ್ ಪಿ. ಸುವರ್ಣರ ಸವಿನೆನಪಿಗಾಗಿ ‘ ಶ್ರೀ ಗುರು ಪ್ರಸಾದಾಲಯ’ ಎಂಬ ನಾಮಾಂಕಿತದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164ನೇ ಜನ್ಮದಿನೋತ್ಸವದ ಈ ಶುಭ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಹಳೆಯಂಗಡಿ ಘಟಕದ ಅಧ್ಯಕ್ಷರಾದ ಹೇಮನಾಥ ಬಿ. ಕರ್ಕೇರ , ನಿಕಟ ಪೂರ್ವ ಅಧ್ಯಕ್ಷರಾದ ಶರತ್ ಕುಮಾರ್, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್, ಬೃಜೇಶ್ ಕುಮಾರ್, ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್ ಮತ್ತು ಯುವವಾಹಿನಿ ಮತ್ತು ಸಂಘದ ಸದಸ್ಯರು ಪಾಲ್ಗೊಂಡಿರುತ್ತಾರೆ.