ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕ ಇದರ ವತಿಯಿಂದ 27/08/2018 ರಂದು ಪ್ರಜ್ಞಾ ಸಲಹಾ ಆಶ್ರಮ ಬನ್ನೂರು ಪುತ್ತೂರು ಇಲ್ಲಿ ಬ್ರಹ್ಮಶ್ರಿ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಘಟಕದ ವತಿಯಿಂದ ಎರಡು ಟೇಬಲ್ ಮತ್ತು 25 kg ಅಕ್ಕಿಯನ್ನು ಘಟಕದ ಅಧ್ಯಕ್ಷರಾದ ಹರೀಶ ಶಾಂತಿ ಪುತ್ತೂರು ಇವರ ನೇತ್ರತ್ವದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ವಿತರಿಸಿದರು.
ಕಾರ್ಯಕ್ರಮ ನೆರವೇರಿಸಿ ಜಯಂತ ನಡುಬೈಲು ಮಾತನಾಡಿ ಅಸ್ಪ್ರಶ್ಯತೆ ಶೋಷಣೆಯ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ಜನ್ಮದಿನವನ್ನು ಇಂದು ಇಲ್ಲಿ ಆಚರಿಸುತ್ತಿರುವುದು ಸಂತೋಷವಾಗಿದೆ ಎಂದು ತಿಳಿಸಿ ಮುಂದಿನ ದಿನಗಳಲ್ಲಿಯೂ ಯುವವಾಹಿನಿಯ ವತಿಯಿಂದ ಸಹಕಾರ ನೀಡುವ ಭರವಸೆ ನೀಡಿದರು. ಆಶ್ರಮದ ಮೇಲ್ವಿಚಾರಕರಾದ ಅಣ್ಣಪ್ಪ ದಂಪತಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ಪುತ್ತೂರಿನ ಪದಾಧೀಕಾರಿಗಳಾದ ಕೇಶವ ಬೆದ್ರಾಳ, ಆರ್.ಸಿ ನಾರಾಯಣ, ಜಯರಾಮ ಕರ್ಮಲ , ಘಟಕದ ಮಾಜಿ ಅಧ್ಯಕ್ಷರುಗಳಾದ ಜಯಂತ್ ಕೆಂಗುಡೇಲು , ಜಯಂತ್ ಬಾಯರು, ಸಂಚಾಲಕರಾದ ನಾಗೇಶ್ ಬಲ್ನಾಡು, ಪದಾಧೀಕಾರಿಗಳಾದ ಅನುಪ್ ಕುಮಾರ್.ಎಸ್, ನಾರಾಯಣ ಕುರಿಕ್ಕಾರ, ರವೀಂದ್ರ ಸಂಪ್ಯ, ಅಣ್ಣಿ ಪೂಜಾರಿ,ಅವಿನಾಶ್ ಹಾರಾಡಿ, ಗೌರೀಶ್ ನರಿಮೊಗರು, ರಂಜಿತ್ ಅಂಚನ್ ಉಪಸ್ಥಿತರಿದ್ದರು