10-05-2026, 2:00 PM
ಸುರತ್ಕಲ್ : ದಿನಾಂಕ 10-05-2026 ರಂದು ಇಡ್ಯಾ ಕ್ಷೇತ್ರದಲ್ಲಿ ನಡೆದ ಶ್ರೀ ವಿಠೋಭ ರುಕುಮಾಯಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪುನಃಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ರೂ.15,000 ಮೊತ್ತದ ಚೆಕ್ ಅನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಮತ್ತು ಕ್ಷೇತ್ರದ ಶಾಂತಿಯವರು ಘಟಕದ ಅಧ್ಯಕ್ಷರನ್ನು ಸ್ಮರಣಿಕೆ ಹಾಗೂ ಶಾಲು […]
Read More
03-05-2026, 6:00 PM
ಪಡುಬಿದ್ರಿ : ದಿನಾಂಕ 03/05/2026 ರಂದು ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ದ ಸಂದರ್ಭದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸದಸ್ಯರು ಬೆಳಿಗ್ಗೆ ಇಂದ ಸಂಜೆಯ ವರೆಗೆ ಸ್ವಯಂಸೇವೆಯಲ್ಲಿ ಪಾಲ್ಗೊಂಡು, ನೆರೆದಿದ್ದ ಭಕ್ತ ಜನರಿಗೆ ಅನ್ನ ಬಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರ್ಣ ಗೊಳಿಸಲಾಯಿತು.
Read More
29-04-2026, 1:30 PM
ಬಜಪೆ : ದಿನಾಂಕ 29.04.2026 ರಂದು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಬಜಪೆ ಇಲ್ಲಿ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ, ಉರಿಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಈ ಸಮಯದಲ್ಲಿ ದೇವಿಯ ದರ್ಶನಕ್ಕಾಗಿ ಆಗಮಿಸಿದ ಭಕ್ತರಿಗೆ ತಂಪಾದ ಪಾನಕವನ್ನು ವಿತರಿಸುವ ಸೇವೆಯನ್ನು ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ನೆರವೇರಿಸಲಾಯಿತು. ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ನಾರಾಯಣ ಪೂಜಾರಿ ಹಾಗೂ ಜ್ಯೋತಿ ನಾರಾಯಣ ಪೂಜಾರಿ ಅವರು ಪಾನಕ ಸೇವೆಗೆ ಚಾಲನೆ ನೀಡಿದರು. ಯುವವಾಹಿನಿ ಬಜಪೆ ಘಟಕವು […]
Read More
22-04-2026, 9:00 PM
ದಿನಾಂಕ 22/04/2026 ರಂದು ಕುಲಶೇಖರ ಪದವುದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ, ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ಒಂದು ದಿನದ ಸೇವೆಯನ್ನು ಸಲ್ಲಿಸಲಾಯಿತು.ಈ ಸೇವಾ ಕಾರ್ಯದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಭಾಗವಹಿಸಿ, ಭಕ್ತರಿಗೆ ವಿವಿಧ ರೀತಿಯ ಸಹಾಯ ಸಹಕಾರ ನೀಡಿದರು.
Read More
21-04-2026, 6:00 PM
ಮಂಗಳೂರು: ದಿನಾಂಕ 21/04/2026 ರಂದು ನಡೆದ ಯುವವಾಹಿನಿಯ ಕಟ್ಟಡ ಸಮಿತಿಯ ಸಭೆಯಲ್ಲಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಸಂಗ್ರಹಿಸಿದ ರೂ. 76,500/- ದೇಣಿಗೆಯನ್ನು ಮಂಗಳೂರು ಘಟಕದ ವತಿಯಿಂದ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಘಟಕದ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಕಟ್ಟಡ ಸಮಿತಿಯ ಸಂಚಾಲಕರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Read More
13-04-2026, 2:00 PM
ಮೂಲ್ಕಿ : ಯುವವಾಹಿನಿ (ರಿ.) ಮೂಲ್ಕಿ ಘಟಕ, ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ, ಬಿರುವೆರ್ ಕುಡ್ಲ (ರಿ.) ಮೂಲ್ಕಿ ಘಟಕ, ಪ್ರೆಸ್ ಕ್ಲಬ್ ಮೂಲ್ಕಿ ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ, ಟೀಮ್ ಈಶ್ವರ್ ಮಲ್ಪೆ ಅವರ ಸಹಯೋಗದೊಂದಿಗೆ ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮವು ಏಪ್ರಿಲ್ 13, 2026 ರಂದು ಮೂಲ್ಕಿ ಬಿಲ್ಲವ ಸಂಘದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ […]
Read More
12-04-2026, 1:00 AM
ಪುತ್ತೂರು : ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗವಾದ ಮಜಲುಮಾರು ದೇವಸ್ಥಾನದಿಂದ ಮುಖ್ಯ ದ್ವಾರವರೆಗೆ ಎಪ್ರಿಲ್ 12 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ವಿಶ್ವನಾಥ್ ಪೂಜಾರಿ ಹಾಗೂ ಉಮಾಮಹೇಶ್ವರಿ ದೇವಸ್ಥಾನದ ಸಮಿತಿ ಸದಸ್ಯರಾದ ಪದ್ಮನಾಭ ಪೂಜಾರಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಯೋಧ ವಿಶ್ವನಾಥ್ ಪೂಜಾರಿ ಅವರು, ಯುವವಾಹಿನಿ ಘಟಕವು ಕೈಗೊಂಡಿರುವ ಈ ಸೇವಾ ಕಾರ್ಯ […]
Read More
10-04-2026, 9:00 PM
ಕೆಂಜಾರು: ಪೇಜಾವರ ಮಾಗಣೆ ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನದಲ್ಲಿ ಜೀರ್ಣೋದ್ಧಾರಗೊಂಡ ನೂತನ ಸನ್ನಿಧಿಯಲ್ಲಿ ಜುಮಾದಿ ಬಂಟ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಹಾಗೂ ಕಲಶೋತ್ಸವವು ಏಪ್ರಿಲ್ 10ರಂದು ಭಕ್ತಿಭಾವದಿಂದ ನಡೆಯಿತು. ಊರ-ಪರವೂರ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಬಜಪೆ ಘಟಕದ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಬಳಿಕ ದೈವಗಳ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾದರು.
Read More
08-03-2026, 11:00 AM
ಪುತ್ತೂರು: ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಭಾನುವಾರ, ದಿನಾಂಕ 08-03-2026 ರಂದು ಬಿರಮಲೆ ಪ್ರಜ್ಞಾ ಆಶ್ರಮದ ನಿವಾಸಿಗಳ ಸೌಕರ್ಯಕ್ಕಾಗಿ ಅಗತ್ಯವಿರುವ ಬಿಸಿ ನೀರಿನ ಗೀಸರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಘಟಕದ ವತಿಯಿಂದ ಈ ಉಪಕರಣವನ್ನು ಹಸ್ತಾಂತರಿಸಲಾಯಿತು.ಸಮಾಜದ ದೀನದಲಿತರ ಮತ್ತು ಅಶಕ್ತರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಯುವವಾಹಿನಿ ಸಂಸ್ಥೆಯು, ಆಶ್ರಮದ ನಿವಾಸಿಗಳಿಗೆ ದೈನಂದಿನ ಬಳಕೆಗೆ ಅನುಕೂಲವಾಗುವಂತೆ ಈ ಗೀಸರ್ ಅನ್ನು ಅಳವಡಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.ಈ ಸಂದರ್ಭದಲ್ಲಿ […]
Read More
06-03-2026, 9:00 PM
ಸುರತ್ಕಲ್: ಸಸಿಹಿತ್ಲುವಿನ ಪವಿತ್ರ ಕ್ಷೇತ್ರವಾದ ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪುಣ್ಯ ಸಂದರ್ಭದಲ್ಲಿ, ಯುವವಾಹಿನಿ (ರಿ.) ಸುರತ್ಕಲ್ ಘಟಕದ ಸದಸ್ಯರು ದಿನಾಂಕ 06-03-2026 ರಂದು ಸಕ್ರಿಯವಾಗಿ ಸ್ವಯಂಸೇವಕರಾಗಿ ಪಾಲ್ಗೊಂಡು ಭಕ್ತಿಪೂರ್ವಕ ಸೇವೆ ಸಲ್ಲಿಸಿದರು.
Read More