ಸುರತ್ಕಲ್ : ದಿನಾಂಕ 10-05-2026 ರಂದು ಇಡ್ಯಾ ಕ್ಷೇತ್ರದಲ್ಲಿ ನಡೆದ ಶ್ರೀ ವಿಠೋಭ ರುಕುಮಾಯಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪುನಃಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ರೂ.15,000 ಮೊತ್ತದ ಚೆಕ್ ಅನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಮತ್ತು ಕ್ಷೇತ್ರದ ಶಾಂತಿಯವರು ಘಟಕದ ಅಧ್ಯಕ್ಷರನ್ನು ಸ್ಮರಣಿಕೆ ಹಾಗೂ ಶಾಲು ನೀಡಿ ಗೌರವಿಸಿದರು. ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಮನೋಭಾವದೊಂದಿಗೆ ನಡೆದ ಈ ಕಾರ್ಯಕ್ಕೆ ಸಹಕರಿಸಿದ ಘಟಕದ ಎಲ್ಲಾ ಸದಸ್ಯರಿಗೂ ಕ್ಷೇತ್ರದ ಶ್ರೀ ವಿಠೋಭ ರುಕುಮಾಯಿ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಆಶೀರ್ವಾದ ಸದಾ ಇರಲಿ, ಆಯುರಾರೋಗ್ಯ, ಸಕಲ ಸೌಭಾಗ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.


