ಕೆಂಜಾರು: ಪೇಜಾವರ ಮಾಗಣೆ ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನದಲ್ಲಿ ಜೀರ್ಣೋದ್ಧಾರಗೊಂಡ ನೂತನ ಸನ್ನಿಧಿಯಲ್ಲಿ ಜುಮಾದಿ ಬಂಟ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಹಾಗೂ ಕಲಶೋತ್ಸವವು ಏಪ್ರಿಲ್ 10ರಂದು ಭಕ್ತಿಭಾವದಿಂದ ನಡೆಯಿತು.

ಊರ-ಪರವೂರ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಬಜಪೆ ಘಟಕದ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಬಳಿಕ ದೈವಗಳ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾದರು.


