Yuvavahini

ಸಾಹಿತ್ಯ

ಹೊಸ ತಲೆಮಾರಿನ ಸವಾಲು, ಸಾಮರ್ಥ್ಯ

ದಿಕ್ಸೂಚಿ ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು? ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ […]

Read More

ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ವರದಿ-2015-16

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕಥೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನೇರ ನಡೆನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಕಳೆದ ಹದಿನಾಲ್ಕು ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ. 2015-16 ನೇ ಸಾಲಿನ ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸಂತೋಷ್ […]

Read More

ಚಿಂತನ

ಚಿಂತನ ಗುಣವತಿ ರಮೇಶ್, ಸುರತ್ಕಲ್ ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿರುವ ಎಲ್ಲರೂ ತಮ್ಮ ಜೀವನ ಸುಖಮಯವಾಗಿರಬೇಕೆಂದು ಹರಸಾಹಸ ಮಾಡುತ್ತಾರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಗಾದೆ ಮಾತಿತ್ತು. ಆದರೆ ಇಂದು ಹುಟ್ಟು ಸಾವಿನ ನಡುವಿನ ಜೀವನದ ಸುಖಕ್ಕಾಗಿ ಪ್ರಪಂಚದಾದ್ಯಂತ ಎಂತೆಂತಹ ಘನಕಾರ್‍ಯಗಳು ನಡೆಯುತ್ತವೆ ಎಂದು ಆಲೋಚಿಸಿದರೆ ಅಬ್ಬಾ ಎಂಥಾ ಕಾಲವಪ್ಪ, ಎಂದೆನಿಸುತ್ತದೆ. ಆದರೆ ನಮ್ಮ ಪೂರ್ವಿಕರು ಹೊಲ, ಗದ್ದೆ, ಗುಡ್ಡ, ತೋಟ ಹೀಗೆ ಬೆವರು ಸುರಿಸಿ ದುಡಿದು, ಇದ್ದದ್ದನ್ನು ತುಂಬು ಕುಟುಂಬದಲ್ಲಿದ್ದ ಎಲ್ಲರೂ ಹಂಚಿಕೊಂಡರು […]

Read More

ಜಾತಿ-ಮತ-ಧರ್ಮದಿಂದಾಚೆ…

ವೈಚಾರಿಕ – ಅಮಿತಾಂಜಲಿ ಕೆ., ಉಡುಪಿ ಬಾಲ್ಯವೆಲ್ಲಾ ಕ್ರಿಶ್ಚಿಯನ್ ಒಡನಾಡಿಗಳೊಂದಿಗೇ ಆಡಿ ಬೆಳೆದವಳು ನಾನು. ಮುಸ್ಲಿಂ ಬಾಂಧವರ ಜೊತೆ ಬಾಂಧವ್ಯದ ಸುಖವನ್ನು ಕಂಡವಳು ನಾನು. ಅಪ್ಪ ಸ್ವಂತ ಮನೆ ಕಟ್ಟುವವರೆಗೂ ಕ್ರಿಶ್ಚಿಯನ್ನರ ಒಕ್ಕಲು ಮನೆಗಳಲ್ಲೇ ಬಾಡಿಗೆಗಿದ್ದೆವು. ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯ ಒಡಹುಟ್ಟಿದಂತಿದ್ದ ನೆರೆಮನೆಯ ನಮ್ಮ ’ಸಣ್ಣಜ್ಜಿ’ ಜಾಕಿಯಾಬಿ ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಹರಿಸುತ್ತಿದ್ದರು. ಯಾವತ್ತೂ ಅವರಲ್ಲಿ ಯಾರೂ ನಮ್ಮನ್ನು ಹಿಂದೂಗಳೆಂದು ಹಂಗಿಸಿದ್ದಿಲ್ಲ. ಅವರು ಬೇರೆ ಧರ್ಮೀಯರೆಂಬ ಕಾರಣಕ್ಕೆ ನಾವವರನ್ನು ದ್ವೇಷಿಸಿದ್ದಿಲ್ಲ. ಆತ್ಮೀಯ ಬಾಂಧವ್ಯ ನಮ್ಮೊಳಗಿತ್ತು. […]

Read More

ವಿಜ್ಞಾನ ಯುಗದ ಅಜ್ಞಾನಿಗಳು

ಆಶಯ ಕೆ. ರಾಜೀವ ಪೂಜಾರಿ ಈ ಸೃಷ್ಟಿಯ ಸೌಂದರ್ಯವೇ ಬದುಕಿನ ಆಂತರ್ಯ. ತೇಲುವ ಮೋಡಗಳಲ್ಲಿ, ಹರಿಯುವ ನದಿಯ ಜಲದಲ್ಲಿ. ಹಸುರಿನ ಸಿರಿಯಲ್ಲಿ, ಹೂಗಳ ವರ್ಣದಲ್ಲಿ…ಮಂದಹಾಸದಲ್ಲಿರುವುದು ಅನಂತ ಚೈತನ್ಯದ ಒಂದು ರೂಪವೇ ಎನ್ನುವುದು ಸನಾತನೀಯ ಸಚ್ಚಿಂತನೆ. ನಮ್ಮದು ಸನಾತನ ಚಿಂತನೆಯನ್ನು ಗೌರವಿಸುವ ದೇಶ. ಮಾನವೀಯ ಮೌಲ್ಯಗಳನ್ನು ಮಾನ್ಯ ಮಾಡುವ ಮಹನೀಯರುಗಳು ಈಗಲೂ ಈ ನೆಲದಲ್ಲಿರುವರು. ಇಲ್ಲಿನ ಮಣ್ಣಿನ ಗುಣವೇ ದೈವಿಕ ಭಾವದಿಂದ ಕೂಡಿರುವುದು. ಅನೇಕ ಸಂತ ಮಹಂತರುಗಳು ಈ ನೆಲದಲ್ಲಿ ಬಾಳಿ ಹೋಗಿದ್ದಾರೆ. ಅವರ ನುಡಿಗಳು ಮನುಕುಲಕ್ಕೆ ದಾರಿದೀಪಗಳಾಗಿವೆ. […]

Read More

ಬಂಟ್ವಾಳ ಯುವವಾಹಿನಿಯ ವತಿಯಿಂದ ತುಳು ಲಿಪಿ ಕಲಿಕಾ ಕಾರ್ಯಾಗಾರ

ಬಂಟ್ವಾಳ : ತುಳು ಭಾಷೆ ಮತ್ತು ಲಿಪಿಯನ್ನು ಪ್ರಚಾರ ಮಾಡುವ ಕೆಲಸ ಬಹಳ ಮುಖ್ಯ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಇಂತಹಾ ರಚನಾತ್ಮಕ ಕೆಲಸದ ಅಗತ್ಯ ಇದೆ ಎಂದು ತುಳು ಒಕ್ಕೂಟದ ಅಧ್ಯಕ್ಷ ಮಾಜಿ ಜಿ.ಪಂ.ಸದಸ್ಯ ಎ.ಸಿ.ಭಂಡಾರಿ ನುಡಿದರು. ಅವರು ಬಿ.ಸಿ.ರೊಡ್ ಯುವವಾಹಿನಿ ಭವನದಲ್ಲಿ ಜರಗಿದ ತುಳು ಸಾಹಿತ್ಯ ಅಕಾಡಮಿ ಮತ್ತು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ತುಳು ಲಿಪಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ತಮ್ಮಯ್ಯನವರ 6ನೇ ತುಳು ಸಂಚಿಕೆ ’ತುಳುವೆರ್’ […]

Read More

ವಿಶುಕುಮಾರ್ ಬದುಕು ಮತ್ತು ಸಾಹಿತ್ಯ

ಸ್ಮರಣೆ ವಿಶುಕುಮಾರ್ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶ್ರೇಷ್ಠ ಸಾಹಿತಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಡಾ. ಶಿವರಾಮ ಕಾರಂತರು ಒಬ್ಬರು. ಅವರ ನಂತರದ ಸ್ಥಾನ ಮಂಗಳೂರಿನವರೇ ಆದ ವಿಶುಕುಮಾರ್‌ರಿಗೆ ಸಲ್ಲುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇವರು ಸಾಹಿತ್ಯಲೋಕದ ಬಹುಮುಖ ಪ್ರತಿಭಾವಂತ, ನೇರನಡೆ-ನುಡಿಯ ನಿರ್ಭೀತ ವ್ಯಕ್ತಿತ್ವದವರು. ಇವರದು ಹೋರಾಟದ ಬದುಕು. ಇವರಿಗೂ ಸಾಹಿತ್ಯಕ್ಕೂ ಬಾಲ್ಯದಿಂದಲೇ ನಂಟು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯ ಶೈಲಿಯ ವೈಶಿಷ್ಟ್ಯವೆಂದರೆ ತುಳು ಮತ್ತು ಕನ್ನಡ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಅಗಸ್ಟ್ 23
ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!