Yuvavahini

JUL 31, 2016 5.47 AM IST

ಶ್ರೀಮತಿ ಗುಣವತಿ ರಮೇಶ್ - ಸಿಂಚನ ವಿಶೇಷಾಂಕ - 2016

ಚಿಂತನ

ಚಿಂತನ
ಗುಣವತಿ ರಮೇಶ್, ಸುರತ್ಕಲ್

ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿರುವ ಎಲ್ಲರೂ ತಮ್ಮ ಜೀವನ ಸುಖಮಯವಾಗಿರಬೇಕೆಂದು ಹರಸಾಹಸ ಮಾಡುತ್ತಾರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಗಾದೆ ಮಾತಿತ್ತು. ಆದರೆ ಇಂದು ಹುಟ್ಟು ಸಾವಿನ ನಡುವಿನ ಜೀವನದ ಸುಖಕ್ಕಾಗಿ ಪ್ರಪಂಚದಾದ್ಯಂತ ಎಂತೆಂತಹ ಘನಕಾರ್‍ಯಗಳು ನಡೆಯುತ್ತವೆ ಎಂದು ಆಲೋಚಿಸಿದರೆ ಅಬ್ಬಾ ಎಂಥಾ ಕಾಲವಪ್ಪ, ಎಂದೆನಿಸುತ್ತದೆ. ಆದರೆ ನಮ್ಮ ಪೂರ್ವಿಕರು ಹೊಲ, ಗದ್ದೆ, ಗುಡ್ಡ, ತೋಟ ಹೀಗೆ ಬೆವರು ಸುರಿಸಿ ದುಡಿದು, ಇದ್ದದ್ದನ್ನು ತುಂಬು ಕುಟುಂಬದಲ್ಲಿದ್ದ ಎಲ್ಲರೂ ಹಂಚಿಕೊಂಡರು ತಿಂದು ಸುಖವಾಗಿ ಬಾಳುತ್ತಿದ್ದರು. ನೆಮ್ಮದಿಯನ್ನು ಇದ್ದುದ್ದರಲ್ಲಿ ಕಂಡುಕೊಂಡು ಬದುಕುತ್ತಿದ್ದರು.

21 ನೇ ಶತಮಾನದಲ್ಲಿರುವ ನಮಗೆಲ್ಲಾ ತಂತ್ರಜ್ಞಾನದಿಂದ ಎಲ್ಲಾ ವಸ್ತುಗಳು ದೊರಕುವಂತಾಗಿದೆ. ಬೇಕಾದದ್ದು, ಬೇಡವಾದದ್ದು ಎಲ್ಲವನ್ನು ಖರೀದಿಸಿ ಮನೆಯಲ್ಲಿ ರಾಶಿ ಆಗಿ ವೇಸ್ಟ್ ಮಾಡುವ ಸಂಸ್ಕೃತಿ ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಾಗಿದೆ. ತನಗೆ ಬೇಕಾದ್ದದನ್ನೆಲ್ಲಾ ಖರೀದಿಸಿ ಅದರಿಂದ ತಾನು ಸುಖವಾಗಿದ್ದೇನೆ ಎಂದು ಅಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸುಖದ ಮಾಪನ ಯಾವುದು? ಎಲ್ಲವೂ ಇದೆ, ಹಣ ಒಂದಿದ್ದರೆ ಬೇಕಾದ ಎಲ್ಲಾ ಸುಖಗಳನ್ನು ತನ್ನದಾಗಿಸಿಕೊಳ್ಳಬಹುದೆಂಬ ಹುಚ್ಚು ಕಲ್ಪನೆ ಕೆಲವರಿಗಿದೆ. ಆದರೂ ಎಲ್ಲವೂ ಇದ್ದು, ಅದೆಷ್ಟೊ ಜನ ಸುಖವಾಗಿಲ್ಲ. ಯಾಕೆಂದರೆ ಸುಖದ ಮಾಪನ ಮಾನಸಿಕವಾದುದು. ಇದು ನಮ್ಮ ಮನಸ್ಸಿನ ಸ್ಥಿತಿ.

ಇಂದು ಮನೆಯಲ್ಲಿರುವ ಮಹಿಳೆಗೆ ಎಲ್ಲಾ ಸವಲತ್ತುಗಳು ಲಭ್ಯವಾಗಿರುತ್ತವೆ. ಮನೆ ಒಡತಿಯ ಸುಖಕ್ಕಾಗಿ, ಅವನ ನೆಮ್ಮದಿಗಾಗಿ ಒಡತಿಯ ಬೇಕುಗಳನ್ನೆಲ್ಲಾ ದುಬಾರಿ ಬೆಲೆ ತೆತ್ತು ಕೊಡುವ ಪತಿರಾಯನಿಗೆ ಅದರಿಂದ ಆಗುವ ಸಮಸ್ಯೆಗಳೇ ಜಾಸ್ತಿ. ಈ ಸುಖದ ಕಲ್ಪನೆ ವಿಶಾಲವಾಗಿದ್ದರೆ ಮನಸ್ಸಿಗೆ ಹೆಚ್ಚು ಸಂತೋಷ ಆಗಬಹುದು. ಅದಕ್ಕೆ ನಾವು ಹೇಳುವ ಮಾತು – Follow your passion – ನಿಮ್ಮ ಮನದ ಇಚ್ಛೆಯಂತೆ ವರ್ತಿಸಿ, ಉದ್ದೇಶ ನೆರವೇರಿದಾಗ ಅವರಿಂದ ಸಂತೋಷ ಹೆಚ್ಚಾಗುತ್ತದೆ. ಕೇವಲ ಹಣದ ಹಿಂದೆ ಹೋಗದೆ ನಮ್ಮ ಮನದ ಇಚ್ಛೆಯನ್ನು ಪೂರೈಸುವಲ್ಲಿ ಹೆಚ್ಚು ಒತ್ತನ್ನು ಕೊಟ್ಟಾಗ ಮತ್ತು ಅದು ನೆರವೇರಿದಾಗ ಉಂಟಾಗುವ ಆನಂದ ಮನಸ್ಸಿಗೆ ಹಿತವಾಗಿರುತ್ತದೆ. ಅದೆಷ್ಟೋ ಸಂದರ್ಭದಲ್ಲಿ ಮಾಡಬೇಕಾದ್ದದನ್ನು ಮಾಡಲಾರದೆ ಕೊರಗುವ ವ್ಯಕ್ತಿ ಛಲದಿಂದ ಅದನ್ನು ಪೂರ್ತಿಗೊಳಿಸಿದಾಗ ಮನಸ್ಸಿಗೆ ಹಿತವಾದ ಅನುಭವವನ್ನು ಕೊಡುತ್ತದೆ. ಎರಡನೆಯದಾಗಿ ನಾವು ಸುಖವನ್ನು ಬಯಸುವವರು, ನಮ್ಮ ಸುತ್ತಮುತ್ತ ಇರುವವರಲ್ಲಿ ಸಂತೋಷವನ್ನು ಹಂಚಬೇಕು. ನಿಮಗೆ ತಿಳಿದಂತೆ ನಿಮ್ಮ ಮನೆಯ ಅಕ್ಕಪಕ್ಕದವರ ಕಷ್ಟಕ್ಕೆ ನೆರವಾಗಬೇಕು. ನಿಮ್ಮ ಆಪ್ತರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ಸರಿಯಾದ ಮಾರ್ಗದರ್ಶನ ನೀಡಬೇಕು. ನಮಗೆ ಸಂತೋಷವಾಗಬೇಕಾದರೆ ನಮ್ಮ ಕುಟುಂಬ, ನಮ್ಮ ಪರಿಸರ, ನಮ್ಮ ಸಮಾಜ, ನಮ್ಮವರು ಒಳ್ಳೆಯವರಿರಬೇಕು. ಮೂರನೇಯದಾಗಿ ನಮ್ಮಲ್ಲಿ ಧನಾತ್ಮಕ ಚಿಂತನೆ ಇರಬೇಕು. ಧನಾತ್ಮಕ ಚಿಂತನೆ ಇರುವ ವ್ಯಕ್ತಿ, ಕಷ್ಟ-ಸುಖಗಳನ್ನು ಸಮಾನವಾಗಿ ಕಾಣುತ್ತಾನೆ. ಎಲ್ಲದಕ್ಕೂ ಅತಿಯಾದ ಚಿಂತೆ ಮಾಡಿದಾಗ ಧನಾತ್ಮಕವಾಗಿರಲು ಕಷ್ಟವಾಗಬಹುದು. ಅದೆಷ್ಟೋ ಜನರು ತಮ್ಮ ಮನದಲ್ಲಿರುವ ಋಣಾತ್ಮಕ ಭಾವನೆಗಳಿಂದ ಹೊರ ಬರಲಾಗದೆ ಒದ್ದಾಡುತ್ತಿರುತ್ತಾರೆ. ಇದಕ್ಕೆ ಕಾರಣ ನಾನು ಅವನ ಹಾಗೆ ಇಲ್ಲ, ಬೇರೆಯವರಂತೆ ನಾನ್ನಿಲ್ಲ, ಎಂಬ ಕೀಳು ಭಾವನೆ. ಅಂತವರಲ್ಲಿ ಆತ್ಮ-ವಿಶ್ವಾಸದ ಕೊರತೆ ಇರುತ್ತದೆ. ಜೇನುನೊಣಕ್ಕಿರುವ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ತನ್ನ ಜೇನುಗೂಡಿಗೆ ಮನುಷ್ಯ ಬೆಂಕಿಯಿತ್ತರು ಧೈರ್ಯಗೆಡದ ಜೇಣುನೊಣವೊಂದು, ಮೂರ್ಖ ಮನುಷ್ಯನಿಗೆ ಜೇನುಗಳನ್ನು ಕೊಂದು ಜೇನನ್ನು ಪಡೆಯಲು ತಿಳಿದಿದೆ, ಆದರೆ ಜೇನು ಮಾಡುವ ವಿಧಾನ ನಮಗೆ ಮಾತ್ರ ಗೊತ್ತು ಎಂಬ ಆತ್ಮವಿಶ್ವಾಸದ ಮಾತುಗಳು ನೆನಪಾಗಬೇಕು. ನಾಲ್ಕನೆಯದಾಗಿ ಸಂಬಂಧಗಳು ಹಸಿರಾಗಿಲಿ. ಜೀವನ ತುಂಬಾ ಸಣ್ಣದು. ಹೆಚ್ಚಿನ ಸಮಯನ್ನು ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಅದೆಷ್ಟೋ ಜನ ತಮ್ಮ ಹಣ ಸಂಪಾದನೆಯಿಂದ ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ತಮ್ಮ ಮಕ್ಕಳಿಗೆ ನಿಜವಾಗಿ ಸಿಗಬೇಕಾದ ಪ್ರೀತಿ ವಾತ್ಸಲ್ಯ ಸಿಗದಾಗ ಕೇವಲ ಹಣಕ್ಕೆ ಸುಖವನ್ನು ನೀಡಲು ಸಾಧ್ಯವೇ? ಮೊದಲ ಆದ್ಯತೆ ಸಂಸಾರಕ್ಕಿರಬೇಕು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಒಂದಿಷ್ಟು ಸಂತೋಷದಿಂದ ಸಮಯ ಕಳೆಯುವುದು ಕೂಡಾ ಅತೀ ಮುಖ್ಯ.

ಐದನೆಯದಾಗಿ – ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು, ಹಣ ಗಳಿಸುವ ತರಾತುರಿಯಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುವವರು ಬಹಳ ಜನ. ಆರೋಗ್ಯವಿಲ್ಲದೆ ಹಣವಿದ್ದು ಏನು ಪ್ರಯೋಜನ. ಯೋಗಾಸನ ಮಾಡಲು ಟೈಂ ಇಲ್ಲ, ವಾಕಿಂಗ್ ಆಗುವುದಿಲ್ಲ, ಉತ್ತಮ ಆಹಾರ ಪದ್ಧತಿ, ಉತ್ತಮ ಆಲೋಚನೆ, ವಿಚಾರ ವಿನಿಮಯ, ಗೆಳೆಯರೊಂದಿಗೆ ಹರಟೆ ಮುಂತಾದವುಗಳಿಂದ ಮನಸ್ಸು ಆರೋಗ್ಯವಾಗಿದ್ದಾಗ ಸಂತೋಷ, ಸುಖ ಹೆಚ್ಚಾಗುತ್ತದೆ.

ಆರನೆಯದಾಗಿ – ಸಮಾಜದಲ್ಲಿ ನೀವಿಂದು ಉತ್ತಮ ವ್ಯಕ್ತಿಗಳಾಗಿ ಮೂಡಿ ಬರಲು ಹಲವಾರು ಆಪ್ತರು ನಿಮಗೆ ನೆರವಾಗಿದ್ದಾರೆ. ಧನಾತ್ಮಕವಾದ ಕ್ರಿಯಾಶೀಲ ಜನರೊಂದಿಗಿನ ನಿಮ್ಮ ಒಡನಾಟ ಇದ್ದಾಗ ಮುನ್ನಡೆಯಲು ಸಾಧ್ಯವಾಗುತ್ತದೆ. ಅವರೆಲ್ಲರೂ ನಿಮಗೆ ಸ್ಫೂರ್ತಿಯಾಗುತ್ತಾರೆ. ಮನದ ದುಗುಡ, ಆಸೆ, ಆಕಾಂಕ್ಷೆ, ಭಾವನೆಗಳನ್ನು ನಿಮ್ಮವರಲ್ಲಿ ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮೊಳಗಿರುವ ನೋವು ಅಶಾಂತಿಯ ಕಿಡಿಯಾಗಿ ಮುಂದೆ ಹೊತ್ತ್ತಿ ಉರಿಯಬಹುದು.

ಏಳನೇಯದಾಗಿ – ಇಂದಿನ ಆಧುನಿಕ ಯುಗದಲ್ಲಿ ನಾವು ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದೇವೆ. ಮನೆಯವರ ಸುಖಕ್ಕಾಗಿ, ಫ್ರಿಜ್, ಕಂಪ್ಯೂಟರ್, ವಾಶಿಂಗ್ ಮೆಷಿನ್, ಮಿಕ್ಸಿ, ಎ.ಸಿ, ಲ್ಯಾಪ್‌ಟಾಪ್, ದೊಡ್ಡ ಎಲ್‌ಇಡಿ ಟಿ.ವಿ., ಹೋಂ ಥಿಯೇಟರ್, ಮೊಬೈಲ್ ಇನ್ನೂ ಏನೇನು ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತೇವೆ. ಫ್ರಿಜ್ಜಲ್ಲಿ ಇಟ್ಟ ವಸ್ತು ತಿಂದರೆ ನೆಗಡಿ, ಶೀತ, ಆರೋಗ್ಯ ಹಾಳು, ಕಂಪ್ಯೂಟರ್, ಲ್ಯಾಪ್‌ಟಾಪ್‌ನ ವಿಕಿರಣ ಆರೋಗ್ಯಕ್ಕೆ ಹಾಳು, ವಾಷಿಂಗ್ ಮೆಷಿನ್ ಉಪಯೋಗಕ್ಕೆ ನೀರಿನ ಅಭಾವ, ಕರೆಂಟು ಬಿಲ್ಲಂತ್ತು ಸಿಕ್ಕಾಪಟ್ಟೆ. ಮಿಕ್ಸಿಯಲ್ಲಿ ತಯಾರಿಸಿದ ಆಹಾರ ರುಚಿ ಕಡಿಮೆ. ಟಿ.ವಿ., ಎ.ಸಿ. ಮೊಬೈಲ್‌ಗಳಿಂದ ಅದೆಷ್ಟೋ ಮನೆಗಳಲ್ಲಿ ರಣರಂಗವೇ ಆಗಿದೆ. ಪ್ರಾಣನೂ ಹೋದ ಉದಾಹರಣೆ ಇದೆ. ಈಗ ಹೇಳಿ ಈ ದುಬಾರಿ ವಸ್ತುಗಳಿಂದ ಸುಖವಿದೆಯೇ?

ಕೊನೆಯದಾಗಿ ಎಲ್ಲವನ್ನೂ ಇನ್ನೊಬ್ಬರ ಜೊತೆ ಹೋಲಿಕೆ ಮಾಡಬೇಡಿ. ನಿಮ್ಮಲ್ಲಿರುವ ವಸ್ತುಗಳನ್ನು ಇಲ್ಲದವರ ಜೊತೆ ಹಂಚಿಕೊಂಡು ನಿಮ್ಮ ಸಂತೋಷವನ್ನು ಕಳೆದುಕೊಳ್ಳಬೇಡಿ. ನಿಮ್ಮ ಯೋಗ್ಯತೆಯ ಬಗ್ಗೆ ನಿಮಗಿರುವ ತಿಳುವಳಿಕೆ ಇನ್ನೊಬ್ಬರಿಗಿರಲು ಸಾಧ್ಯವಿಲ್ಲ. ನೀವು ನೀವೇ ಆಗಿರಿ. ಅವನೆಷ್ಟು ಶ್ರೀಮಂತ, ಅಂದ/ಚಂದ/ಹಣ/ಯಾಕಿಲ್ಲ, ಅಂದುಕೊಳ್ಳಬೇಡಿ. ನೀವು ಹೇಗಿದ್ದಿರೋ ಅದರಂತೆ ನಿಮ್ಮನ್ನು ನೀವು ಒಪ್ಪಿಕೊಳ್ಳಿ. ನೀವು ಏನಾಗಬೇಕೆಂದು ಬಯಸುತ್ತೀರೋ ಅದಕ್ಕಾಗಿ ಪ್ರಯತ್ನಿಸಿ ಗುರಿ ತಲುಪುವಲ್ಲಿ ನೀವು ಸಫಲರಾದಾಗ ಸಿಗುವ ಸುಖ, ಸಂತೃಪ್ತಿ, ನಿಮ್ಮದೇ ಆಗಿರಲಿ. ನಾವು ಮೊದಲು ಒಳ್ಳೆಯ ಸಂಗತಿಗಳನ್ನು ಹುಡುಕುವಂತಾಗಬೇಕು. ಯಾವುದೇ ವ್ಯಕ್ತಿಯಲ್ಲಿ ಅಥವಾ ಸನ್ನಿವೇಶದಲ್ಲಿ ಕೆಟ್ಟದ್ದನ್ನು ಹುಡುಕುವ ಬದಲು ಒಳ್ಳೆಯದನ್ನು ನೋಡುವ ಸ್ವಭಾವ ಬೆಳೆಸಿಕೊಳ್ಳಬೇಕು. ಕೇವಲ ಸುಖವಾಗಿ ಚಂದ್ರನಡಿ, ಸೂರ್ಯನಡಿ ಮಲಗಿದರೆ ಸಾಲದು, ಜೀವನವಿಡೀ ವರ್ತಮಾನಕ್ಕಾಗಿ ದುಡಿಯಬೇಕು. ಅದುವೇ ಉತ್ತಮ ಭವಿಷ್ಯಕ್ಕಾಗಿ ಬೀಜ ಬಿತ್ತಿದಂತೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!