Yuvavahini

AUG 09, 2015 4.56 AM IST

ಅನನ್ಯ ಎಸ್ .ಅಗ್ನಿಹೋತ್ರಿ - ಸಿಂಚನ ವಿಶೇಷಾಂಕ -2015

ವಿಶುಕುಮಾರ್ ಬದುಕು ಮತ್ತು ಸಾಹಿತ್ಯ

ಸ್ಮರಣೆ

ವಿಶುಕುಮಾರ್ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶ್ರೇಷ್ಠ ಸಾಹಿತಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಡಾ. ಶಿವರಾಮ ಕಾರಂತರು ಒಬ್ಬರು. ಅವರ ನಂತರದ ಸ್ಥಾನ ಮಂಗಳೂರಿನವರೇ ಆದ ವಿಶುಕುಮಾರ್‌ರಿಗೆ ಸಲ್ಲುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇವರು ಸಾಹಿತ್ಯಲೋಕದ ಬಹುಮುಖ ಪ್ರತಿಭಾವಂತ, ನೇರನಡೆ-ನುಡಿಯ ನಿರ್ಭೀತ ವ್ಯಕ್ತಿತ್ವದವರು. ಇವರದು ಹೋರಾಟದ ಬದುಕು. ಇವರಿಗೂ ಸಾಹಿತ್ಯಕ್ಕೂ ಬಾಲ್ಯದಿಂದಲೇ ನಂಟು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯ ಶೈಲಿಯ ವೈಶಿಷ್ಟ್ಯವೆಂದರೆ ತುಳು ಮತ್ತು ಕನ್ನಡ ಮಿಶ್ರಭಾಷೆಯೊಂದಿಗೆ ವಾಸ್ತವ್ಯವನ್ನು ತೋರಿಸಿಕೊಡುವುದು.

ಇವರ ಪರಿಚಯವನ್ನು ಇವರ ಸಾಹಿತ್ಯದಿಂದಲೇ ಮಾಡಿಕೊಳ್ಳೋಣ. ತಂದೆಯ ಸಾಂಸ್ಕೃತಿಕ ಆಸಕ್ತಿಯಿಂದ ನಾಟಕ ಹಾಗೂ ಯಕ್ಷಗಾನಗಳಲ್ಲಿ ಆಸಕ್ತಿ ಮೂಡಿತು. ಓದುವ ಹವ್ಯಾಸವಿದ್ದುದರಿಂದ ಸಾಹಿತ್ಯದಲ್ಲಿಯೂ ಆಸಕ್ತಿ ಬೆಳೆಯಿತು. ಅನೇಕ ಸರಕಾರಿ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದ ಇವರು ಸ್ವತಂತ್ರ ಜೀವನ ನಡೆಸಿದರು. ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ, ಪತ್ರಿಕೋದ್ಯಮ-ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. ನಿಯತಕಾಲಿಕ ಚಿತ್ರದೀಪ ಹಾಗೂ ಸಂಜೆವಾಣಿ ಪತ್ರಿಕೆಯ ಸಂಪಾದಕರಾಗಿ ದುಡಿದಿದ್ಧಾರೆ. ಇವರು ನಿರ್ದೇಶಿಸಿದ ತುಳು ಚಲನಚಿತ್ರ ’ಕೋಟಿ ಚೆನ್ನಯ’ ರಾಷ್ಟ್ರಪ್ರಶಸ್ತಿ ಪಡೆದಿದೆ. ಸಮಕಾಲೀನ ರಾಜಕೀಯವನ್ನು ವಸ್ತುವಾಗಿಸಿಕೊಂಡು ವಿಡಂಬನೆಯ ಮೂಲಕ ರಚಿಸಿದ ನಾಟಕ ’ಡೊಂಕುಬಾಲದ ನಾಯಕರು’.

ವಿಶಿಷ್ಟ ಕಾದಂಬರಿಕಾರರಾದ ಇವರು ಒಟ್ಟು 25 ಕಾದಂಬರಿಗಳನ್ನು ಬರೆದಿದ್ದಾರೆ. ನೆತ್ತರಗಾನ – ಯಕ್ಷಗಾನ ಕಲಾವಿದರ ಜೀವನವನ್ನು ಚಿತ್ರಿಸುವ ಕಾದಂಬರಿ. ಭಗವಂತನೇ ಡೈರಿ ಬರೆದು ತನ್ನನ್ನು ಸೃಷ್ಟಿಸಿದವರ ಬಯಲಿಗೆಳೆಯುವ ತಂತ್ರ. ಭಗವಂತನ ಆತ್ಮಕಥೆಯಲ್ಲಿದೆ. ಗಗನಗಾಮಿಗಳು ಕನ್ನಡದ ಮೊದಲ ವೈಜ್ಞಾನಿಕ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಜ್ಞಾನದ ದುರುಪಯೋಗವೇ ಇದರ ವಸ್ತು. ಭೂಮಿ ಕಾದಂಬರಿಯಲ್ಲಿ 1974ರಲ್ಲಿ ಬಂದ ಭೂಮಸೂದೆಯಲ್ಲಿ, ಅದರಿಂದಾಗಿ ಧಣಿ ಮತ್ತು ಒಕ್ಕಲುಗಳ ನಡುವೆ ಆದ ಪಲ್ಲಟಗಳು, ಕಷ್ಟ ನಷ್ಟಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಕಳ್ಳಸಾಗಾಣಿಕೆಯ ಹಿನ್ನಲೆಯಲ್ಲಿ ರಚಿಸಿದ ಶುದ್ಧ ಮನರಂಜನೆಯ ರೋಚಕ ಕಾದಂಬರಿ ಕಪ್ಪು ಸಮುದ್ರ. ರಾಜಕೀಯ ಕ್ಷೇತ್ರದ ಹೊಲಸನ್ನು ತೋರಿಸುವ, ನಮ್ಮ ಪ್ರಜಾಪ್ರಭುತ್ವವು ಎಂಥಹ ಅಧೋಗತಿಗೆ ಇಳಿದಿದೆ ಎನ್ನುವುದನ್ನು ತಮ್ಮ ಅನುಭವದಿಂದಲೇ ರಚಿಸಿದ ಕಾದಂಬರಿ ಪ್ರಜೆಗಳು-ಪ್ರಭುಗಳು. ನಾವು ಎಂಥವರನ್ನು ಧುರೀಣರನ್ನಾಗಿ ಆರಿಸುತ್ತೇವೆ ಅಥವಾ ನಮ್ಮನ್ನು ಆಳಲು ಎಂಥವರು ಗದ್ದಿಗೆಗೆ ಏರುತ್ತಾರೆ ಎನ್ನುವುದನ್ನು ತೋರಿಸಲು ಪ್ರಯತ್ನಿಸಿದ್ದಾರೆ.

ಅವರ ಸುಪ್ರಸಿದ್ಧ ’ಕರಾವಳಿ’, ’ಮದರ್’, ’ವಿಪ್ಲವ’ ಯಶಸ್ವೀ ಸಾಹಿತ್ಯ ಕೃತಿಗಳಾಗಿವೆ. ದಕ್ಷಿಣ ಕನ್ನಡದ ತೆಂಗಿನಮರದಿಂದ ಕಾಗೆಗಳವರೆಗೂ, ಮೊಗವೀರರ ಬಗೆಗೂ ತುಂಬಾ ವರ್ಣಿಸಿದ ಕಾದಂಬರಿ ಕರಾವಳಿ. ಇದರಲ್ಲಿ ಮೊಗವೀರರ ವೇಷಭೂಷಣ, ಜೀವನಶೈಲಿ, ವೀರತನ ಮುಂತಾದವನ್ನು ವರ್ಣಿಸಿದ್ದಾರೆ. ಜೊತೆಗೆ ಇದು ಹಿಂದು-ಮುಸ್ಲಿಂ ಪ್ರೇಮ ಪ್ರಕರಣದ ಹಿನ್ನಲೆಯಲ್ಲಿ ರಚಿಸಿದ ಕಾದಂಬರಿಯಾದ್ದರಿಂದ ತುಂಬಾ ವಿವಾದಕ್ಕೆ ಒಳಗಾಗಿತ್ತು. ಇದರಲ್ಲಿ ಹಿಂದು ಧರ್ಮ, ಮತಾಂತರ ಎಂಬ 2 ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮತಾಂತರವನ್ನು ಮದರ್ ಕಾದಂಬರಿಯಲ್ಲಿ, ಹಿಂದೂ ಧರ್ಮದ ಲೋಪದೋಷಗಳನ್ನು, ಆಗಬೇಕಾದ ಸುಧಾರಣೆಗಳನ್ನು ವಿಪ್ಲವ ಕಾದಂಬರಿಯಲ್ಲಿ ತುಂಬಾ ಗಂಭೀರವಾಗಿ ಚರ್ಚಿಸಿದ್ದಾರೆ. ಇಲ್ಲಿ ಹಿಂದೂ ಧರ್ಮದಲ್ಲಿರುವ ಜಾತಿ ಆಧಾರಿತ ವರ್ಣಪದ್ಧತಿ, ಧರ್ಮ ಬಾಹಿರ ಚಟುವಟಿಕೆಗಳನ್ನು ಖಂಡಿಸಿದ್ದಾರೆ. ಮಿಯಾಂ ಕಾಮತ್, ಹೇಮಾದೇವಿ, ಕಾಮುಕರು, ಭಟ್ಕಳದಿಂದ ಬೆಂಗಳೂರಿಗೆ…. ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ’ಕರಾವಳಿ’, ’ಮದರ್’ ಹಾಗೂ ’ಅಖಂಡ ಬ್ರಹ್ಮಚಾರಿ’ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದ್ದಾರೆ.

ಇವರ ಈ ಎಲ್ಲಾ ಕೃತಿಗಳನ್ನು ಅವಲೋಕಿಸಿದಾಗ ೮೦ರ ದಶಕದಲ್ಲಿಯೇ ಅವರು ಸಾಮಾಜಿಕ ಸಮಸ್ಯೆಗಳು, ಅವುಗಳಿಂದಾಗುವ ಕೆಡುಕುಗಳು, ಹೇಗೆ ಪರಿಹರಿಸಬಹುದು ಎನ್ನುವುದನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಅವರೊಬ್ಬ ಸಾಮಾಜಿಕ ಕಳಕಳಿಯಿರುವ ಸಾಮಾಜಿಕ ಚಿಂತಕನೆನ್ನಬಹುದು.

1935ರಲ್ಲಿ ಇಂಥ ಪುತ್ರರತ್ನವನ್ನು ಕೊಡುಗೆಯಾಗಿ ನೀಡಿದವರು ದೋಗ್ರ ಪೂಜಾರಿ-ಚಂದ್ರಾವತಿ ದಂಪತಿಗಳು. ಸೃಜನಶೀಲ ಸಾಹಿತಿ ವಿಶುಕುಮಾರ್‌ರು 1986ರಲ್ಲಿ ಕ್ಯಾನ್ಸರಿಗೆ ಬಲಿಯಾದದ್ದು ನಮ್ಮೆಲ್ಲರ ದುರಾದೃಷ್ಟ. ಆದರೂ ಅವರು ತಮ್ಮ ಅದ್ಭುತ ಕೃತಿಗಳ ಮೂಲಕ ನಮ್ಮೊಂದಿಗೆ ಇದ್ದಾರೆ. ಅವರ ಗೌರವಾರ್ಥ ಯುವವಾಹಿನಿ ಪ್ರಾಯೋಜಿತ ’ವಿಶುಕುಮಾರ್ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!