01-09-2018, 4:30 PM
ಸಸಿಹಿತ್ಲು : ಕ್ರೀಯಾಶೀಲ ಮನಸುಗಳು ಇದ್ದಾಗ ಕ್ರೀಯಾತ್ಮಕ ಕಲ್ಪನೆಗಳು ಹುಟ್ಟಿಕೊಳ್ಳುತ್ತದೆ, ಮಾಡುವ ಕೆಲಸದಲ್ಲಿ ಬದ್ದತೆ ಇದ್ದಾಗ ಲಭಿಸುವ ಫಲಿತಾಂಶವೂ ಫಲಪ್ರದವಾಗಿರುತ್ತದೆ ಇದಕ್ಕೆ ಯುವವಾಹಿನಿ ಸಸಿಹಿತ್ಲು ಘಟಕ ಹಮ್ಮಿಕೊಂಡಿರುವ ಶ್ರೀಕೃಷ್ಣ ವೇಷ ಸ್ಪರ್ಧೆಯೇ ಸಾಕ್ಷಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು. ಅವರು, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆಶ್ರಯದಲ್ಲಿ ದಿನಾಂಕ 01.09.2018 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಮತ್ತು ಲಯನ್ಸ್-ಲಯನೆಸ್ ಕ್ಲಬ್ […]
Read More
01-09-2018, 3:51 PM
ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ, ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ,ಸೋಮೇಶ್ವರ,ಬಿಲ್ಲವ ಸೇವಾ ಸಮಾಜ(ರಿ) ಕೊಲ್ಯಇದರ ಸಹಭಾಗಿತ್ವದಲ್ಲಿ “ಯಕ್ಷ ಸಂಭ್ರಮ -2018″ಯಕ್ಷಗಾನ ಪ್ರದರ್ಶನ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ 01/09/2018 ನೇ ಶನಿವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ , ಕೊಲ್ಯದಲ್ಲಿ ಜರಗಿತು. ಯಕ್ಷ ಸಂಭ್ರಮ – 2018 ಇದರ ಸಭಾ ಕಾರ್ಯಕ್ರಮವನ್ನು ಬಂಟರ ಸಂಘ ಕಾವೂರು ಇದರ ಅಧ್ಯಕ್ಷರಾದ ರೋ| ಆನಂದಶೆಟ್ಟಿಯವರು ಬೆಳಗಿಸಿ ಉಧ್ಘಾಟಿಸಿ ಶುಭ ಹಾರೖೆಸಿದರು. ಯಕ್ಷಗುರುಗಳಾದ […]
Read More
27-03-2018, 3:53 PM
ಕಥೆಗಾರ,ಕಾದಂಬರಿಗಾರ,ನಾಟಕಗಾರ ದಿ.ವಿಶುಕುಮಾರ್ ಅವರ ಕೋಟಿ ಚೆನ್ನಯ ನಾಟಕಕ್ಕೆ ಮರ ಜೀವ ತುಂಬಿದ ಯುವವಾಹಿನಿ ಕಲಾವಿದರು ಇಂದು ತುಳು ನಾಟಕರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ಯುವವಾಹಿನಿನಿಯ ೫೧ ಮಂದಿ ಕಲಾವಿದರು ವಿಶುಕುಮಾರ್ ಅವರ ಕೋಟಿಚೆನ್ನಯ ನಾಟಕ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಐದು ದಶಕದ ಹಿಂದೆ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದ, ಬಳಿಕ ಸಿನಿಮವಾಗಿ ಪ್ರೇಕ್ಷಕರ ಮನ ಗೆದ್ದ […]
Read More
18-03-2018, 2:58 PM
ಬಜ್ಪೆ ಯುವವಾಹಿನಿ ಘಟಕದ ವತಿಯಿಂದ ತಾ. 18.03.2018 ಭಾನುವಾರದಂದು ಬಜ್ಪೆ ಬಿಲ್ಲವ ಸಂಘದ ಸಭಾ ಭವನದಲ್ಲಿ ರಂಗ ಕ್ರಿಯೆ – ರಂಗ ಪ್ರಜ್ಞೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಘಟಕದ ಸದಸ್ಯರುಗಳಿಗೆ, ಅವರ ಮಕ್ಕಳಿಗೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಂಗ ತಜ್ಞ ಜಗನ್ಪವಾರ್ ಬೇಕಲ್ ಇವರು ಸಂಗೀತ ನಾಟಕ, ದೃಶ್ಯ, ಬೀದಿ ನಾಟಕ ಮುಂತಾದ ಪ್ರಕಾರಗಳ ವಿಶಿಷ್ಟ ಹೊಲ ಹೊರ ಹೂರಣಗಳನ್ನು ಪ್ರಯೋಗಿಕವಾಗಿ ಉಣಬಡಿಸಿ, ಫಲಾನುಭವಿಗಳನ್ನು ಜೀತೋಹಾರಿಯಾಗಿಸಿದರು. ಸದಸ್ಯರುಗಳಿಗೆ ನಟನಾ ಕೌಶಲ್ಯದ ಸೂಕ್ಷ್ಮತೆಯನ್ನು ತಿಳಿಹೇಳಿ […]
Read More
28-01-2018, 3:52 PM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ 28-01-2018ನೇ ಆದಿತ್ಯವಾರದಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿಯ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿಯ 28 ಘಟಕ ಗಳನ್ನು ಪ್ರತಿನಿಧಿಸುವ 28 ವರ್ಣರಂಜಿತ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದ ಸ್ವಾಗತ ಗೋಪುರವು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಧ್ವಜಾರೋಹಣ ಮಾಡಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ […]
Read More
19-11-2017, 3:14 AM
ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ವೇದಿಕೆಗಳು ಅನಿವಾರ್ಯ. ಇಂತಹ ವೇದಿಕೆಗಳ ಮೂಲಕ ಪ್ರತಿಭೆಯ ಜೊತೆಗೆ, ಆತ್ಮವಿಶ್ವಾಸ ಮೂಡಲು ಸಹಕಾರಿಯಾಗಿದೆ. ಇಂದು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆತ್ತವರು ಮತ್ತು ಶಿಕ್ಷಕರು ಗಮನಹರಿಸುತ್ತಿರುವುದು ಅನಿವಾರ್ಯವಾಗಿದೆ ಎಂದು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೋ ಹೇಳಿದರು. ಅವರು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 19.11.2017 ರಂದು ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ […]
Read More
07-09-2017, 1:27 PM
ಸುದೀರ್ಘ 30 ವರ್ಷಗಳ ಕಾಲ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವ ಯುವವಾಹಿನಿಯ ಅಧ್ಬುತ ಸಾಧನೆ ಶ್ಲಾಘನೀಯವಾದುದು, ಈ ನಿಟ್ಟಿನಲ್ಲಿ ಯುವವಾಹಿನಿ ಎಲ್ಲರಿಗೂ ಪ್ರೇರಕ ಶಕ್ತಿ .ನಮ್ಮ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಎನ್ನುವ ಭಾವನೆ ನಮ್ಮಲ್ಲಿರಬೇಕು, ಪರಸ್ಪರ ಸಹಕಾರದಿಂದ ಸದೃಢ ಸಮಾಜದ ನಿರ್ಮಾಣ ಮಾಡೋಣ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರು ಮಂಗಳಾ ಮ್ಯೂಸಿಕ್ ಕ್ಲಬ್ ಹಾಗೂ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಯುವವಾಹಿನಿ […]
Read More
12-08-2017, 10:30 AM
ಅವಕಾಶಗಳು ಎಳವೆಯಲ್ಲಿಯೇ ಸಿಕ್ಕಾಗ ಮಕ್ಕಳ ಪ್ರತಿಭಾ ವಿಕಸನವು ಅತ್ಯಂತ ವೇಗದಿಂದ ಸಾಗುತ್ತದೆ. ಮಕ್ಕಳ ಪ್ರಾಯಕ್ಕೆಅನುಗುಣವಾದ ಸಾಮಥ್ರ್ಯಗಳು ಪ್ರತಿಯೊಬ್ಬರಲ್ಲೂ ಇದೆ ಅದನ್ನು ಗುರುತಿಸಿಕೊಳ್ಳುವ ಕೆಲಸವನ್ನು ಹೆತ್ತವರು ಮಾಡಬೇಕಿದೆ, ಇಂತಹ ಅವಕಾಶಗಳಲ್ಲಿ ಇಂದಿನ ಕಾರ್ಯಕ್ರಮವೂ ಹೆಚ್ಚು ಪ್ರಸ್ತುತ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ಕುಮಾರ್ ಬಿಎನ್ ತಿಳಿಸಿದರು. ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವವಾಹಿನಿ(ರಿ) ಸಸಿಹಿತ್ಲು ಘಟಕದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು […]
Read More
06-08-2017, 1:19 PM
ಯಕ್ಷಲೋಕದಲ್ಲಿ ಗಾನ ಸುರಭಿ ಎಂದೇ ಕರೆಸಿಕೊಂಡು ತನ್ನ ಕಂಠ ಮಾಧುರ್ಯಕ್ಕೆ ಅಸಂಖ್ಯಾತ ಅಭಿಮಾನಿ ಬಳಗವನ್ನು ಹುಟ್ಟು ಹಾಕಿಕೊಂಡಿರುವ ರವಿಚಂದ್ರ ಕನ್ನಡಿಕಟ್ಟೆ ಈ ನಾಡುಕಂಡ ಅಪ್ರತಿಮ ಭಾಗವತ.ತೆಂಕು ತಿಟ್ಟಿನ ಯಕ್ಷಲೋಕದಲ್ಲಿ ನಕ್ಷತ್ರಪುಂಜದಂತೆ ಮಿನುಗುವ ರವಿಚಂದ್ರ ಕನ್ನಡಿಕಟ್ಟೆ ಮೂಲತಃ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಪಜೆಮಾರು ನಿವಾಸಿ ಧರ್ಮಣ್ಣ ಪೂಜಾರಿ ಮತ್ತು ಸುಶೀಲಾ ದಂಪತಿಗಳ ಪುತ್ರ. 1980ನೇ ಇಸವಿಯ ಅಕ್ಟೋಬರ್ 10ರಂದು ಜನಿಸಿದ ಕನ್ನಡಿಕಟ್ಟೆ ಎಸ್ಎಸ್ಎಲ್ಸಿಗೆ ತನ್ನ ಶಿಕ್ಷಣ ಮೊಟಕುಗೊಳಿಸಿ ಬಳಿಕ ಯಕ್ಷರಂಗದತ್ತ ಮುಖ ಮಾಡಿ ಹೊರಟವರು. ಧರ್ಮಸ್ಥಳ ಮಂಜುನಾಥೇಶ್ವರ […]
Read More
28-05-2017, 12:19 PM
ಮಂಗಳೂರು ತಾಲೂಕು ವ್ಯಾಪ್ತಿಯ ಯುವವಾಹಿನಿ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ ಯುವ ಕಲೋತ್ಸವ ದಿನಾಂಕ 28.05.2017 ನೇ ಆದಿತ್ಯವಾರ ಮಂಗಳೂರು ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಯುವವಾಹಿನಿಯ ನೂತನ ಸಭಾಂಗಣ ಹಾಗೂ ಕಛೇರಿಯ ಉದ್ಘಾಟನೆಯ ಸವಿನೆನಪಿಗಾಗಿ ಯುವ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ ಒಟ್ಟು 8 ಯುವವಾಹಿನಿ ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ರಮೇಶ್ ಕಲ್ಮಾಡಿ,ಜಗನ್ ಪವಾರ್ ಬೇಕಲ್,ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮಲ್ಲಿಕಾ ಸಿದ್ದಕಟ್ಟೆ ತೀರ್ಪುಗಾರರಾಗಿ ಸಹಕಾರ […]
Read More