Yuvavahini

DEC 09, 2018 2.53 PM IST

ಯುವವಾಹಿನಿ ಅಂತರ್ ಘಟಕ‌ ರಸಪ್ರಶ್ನೆ ಮತ್ತು ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆ

ರಸಗೀತಾ – 2018

ಬಜಪೆ‌ : ಸಮಾಜ‌ ಕಟ್ಟುವ ದೇಶ ಕಟ್ಟುವ ಕಾರ್ಯ ಇಂದಿನ ಯುವಕರಿಂದ ಇನ್ನೂ ಹೆಚ್ಚು ಹೆಚ್ಚು ಆಗಬೇಕಾಗಿದೆ. ಅಂತಹ ಯುವಕರು ಇಂತಹ ಕಾರ್ಯಕ್ರಮಗಳನ್ನು ನಡೆಸಿ ಸಂಘಟನಾತ್ಮಕಗೊಳಿಸಿ ಸಮಾಜವನ್ನು ಆರೋಗ್ಯಪೂರ್ಣಗೊಳಿಸಬೇಕು. ರಸಗೀತಾ ಕಾರ್ಯಕ್ರಮ ಇಂತಹುದಕ್ಕೆ ವೇದಿಕೆಯಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬಜಪೆ-ಕರಂಬಾರು ಇದರ ‌ಉಪಾಧ್ಯಕ್ಷರಾದ ಶ್ರೀ ಚಂದಪ್ಪ ಕುಂದರ್ ಇವರು ದಿನಾಂಕ 09.12.2018ರಂದು ಶ್ರೀ ನಾರಾಯಣಗುರು ಸಮುದಾಯ ಭವನ ಬಜಪೆ ಇಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ‌ ಆಶ್ರಯದಲ್ಲಿ ಯುವವಾಹಿನಿ (ರಿ.) ಬಜಪೆ‌ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ‌ ರಸಪ್ರಶ್ನೆ ಮತ್ತು ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆ ರಸಗೀತಾ – 2018ನ್ನು ವಿದ್ಯುಕ್ತವಾಗಿ ಉದ್ಘಾಟಿಸುತ್ತಾ ನುಡಿದರು.

ಯುವಕರು ‌ದೈಹಿಕವಾಗಿ ದೃಢವಾಗುವ ಜತೆಗೆ ಬೌದ್ಧಿಕವಾಗಿಯೂ ಬೆಳೆಯಬೇಕು. ರಸಪ್ರಶ್ನೆ ಸ್ಪರ್ಧೆ ಓದುವ ಹವ್ಯಾಸ ಬೆಳೆಸಿದರೆ, ಗೀತಾ ಗಾಯನ ಸ್ಪರ್ಧೆ ಸಂಗೀತದತ್ತ ಒಲವು ಹೆಚ್ಚಿಸಲು ಕಾರಣವಾಗುತ್ತದೆ. ಎಲ್ಲಾ ಸಮಾಜದೊಂದಿಗೆ ಸ್ನೇಹದ ಸಂಬಂಧ ‌ಬೆಸೆಯುವ ಸಮಾಜ ನಮ್ಮದಾಗಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರು ಡಾ. ರಾಜರಾಮ್ ಕೆ. ಬಿ. ಹೇಳಿದರು. ಯುವಕರು ಇಂದಿನ ದಿನಗಳಲ್ಲಿ ತಮ್ಮನ್ನು ಅರಿತುಕೊಳ್ಳಬೇಕು. ತಮ್ಮ ಮನೆ ಬಳಿಕ ತಮ್ಮ ‌ಸಮಾಜ-ದೇಶವನ್ನು ಹೀಗೆ ತಿಳಿದುಕೊಳ್ಳುತ್ತಾ ಸಾಗಬೇಕು, ಆದಾಗ ವ್ಯಷ್ಟಿ ಬದುಕು ಮಾತ್ರವಲ್ಲ ಸಮಷ್ಟಿಯು ಸಮೃದ್ಧವಾಗಲು ಸಾಧ್ಯವೆಂದು ಆದಿಮಾಯೆ ಕನ್ಸ್‌ಟ್ರಕ್ಷನ್ ಬಜಪೆ ಇದರ ಮಾಲಕರಾದ ಶ್ರೀ ಲೋಕೇಶ್ ಪೂಜಾರಿ ಇವರು ಮುಖ್ಯ ಅಭ್ಯಾಗತರ ನೆಲೆಯಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಯುವ ಸಿಂಚನ ಪತ್ರಿಕೆಯ ಕಾರ್ಯ-ನಿರ್ವಾಹಕ ಸಂಪಾದಕ ದಿನಕರ್. ಡಿ. ಬಂಗೇರ ಇವರನ್ನು ಸನ್ಮಾನಿಸಲಾಯಿತು. ಇಂತಹ ಕಾರ್ಯಕ್ರಮ ನಮ್ಮೊಳಗೆ ಭ್ರಾತೃತ್ವ ಮತ್ತಷ್ಟು ಬೆಳೆಯಲು ಕಾರಣವಾಗಿ ನಮ್ಮ ಮನಸ್ಸಿಗೆ ಮುದ ಹಾಗೂ ಮೇವನ್ನು ನೀಡಲು ಪ್ರೇರಣೆಯಾಗಿದೆಯೆಂದು ಸದರಿ ಘಟಕದ ಅಧ್ಯಕ್ಷರಾದ ದೇವರಾಜ್ ಅಮೀನ್ ಇವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಹೇಳಿದರು.

ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು, ಉದ್ಯಮಿಗಳಾದ ಚಂದ್ರಹಾಸ್ ಕೌಡೂರು, ಆನಂದ್ ಬಂಗೇರ, ಬಜಪೆ ಯುವವಾಹಿನಿ ಘಟಕದ ಸಲಹೆಗಾರರಾದ ಜಿ. ಪರಮೇಶ್ವರ ಪೂಜಾರಿ, ಯುವವಾಹಿನಿ ‌ಕೇಂದ್ರ‌ ಸಮಿತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕ ವಿಠ್ಠಲ ಪೂಜಾರಿ, ಬಜಪೆ ಘಟಕದ ನಿರ್ದೇಶಕ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ  ಗೋಪಾಲಕೃಷ್ಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶರಣ್ಯ ಸನ್ಮಾನ ಪತ್ರವನ್ನು ವಾಚಿಸಿದರು, ಕಾರ್ಯದರ್ಶಿ ಸುನೀತಾ ವಂದಿಸಿದರು, ಸತ್ಯಾವತಿ ಕಾರ್ಯಕ್ರಮ‌ ನಿರೂಪಿಸಿದರು.

ಸಂಜೆ ಜರುಗಿದ ಸಮರೋಪ ಭಾಷಣ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಅತಿಥಿ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಯಾದವ ಕೋಟ್ಯಾನ್ ಪೆರ್ಮುದೆ ಸಮಾಪನ ಮನ ನುಡಿಯನ್ನು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ನವೀನ್‌ಚಂದ್ರ ಬಿ. ಪೂಜಾರಿ, ಉಪಾಧ್ಯಕ್ಷರು ಬಿಜೆಪಿ ಓ.ಬಿ.ಸಿ ಮೋರ್ಛಾ ಮಂಗಳೂರು ಉತ್ತರ ಇವರು ಮಾತನಾಡುತ್ತಾ ಸಮಾಜ ನಿರ್ಮಾಣದಲ್ಲಿ ಕಾರ್ಯಕ್ರಮಗಳು ಸಂಘಟನಾತ್ಮಕತೆ ವಿಶೇಷ ಪರಿಣಾಮವನ್ನು ಬೀರಬಹುದಾಗಿದ್ದು, ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡ ಬಜಪೆ ಘಟಕದ ಪ್ರಯತ್ನ ಶ್ಲಾಘನೀಯವೆಂದರು. ಬಜಪೆ ಯುವವಾಹಿನಿ ಘಟಕವು ಸಾಮಾಜಿಕ ಸೇವೆಯಲ್ಲಿ ಮುಂದಿರುವಂತೆಯೇ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿಯೂ ಶ್ರೀಮಂತವಾಗಿದೆಯೆಂದು ಇನ್ನೋರ್ವ ಮುಖ್ಯ ಅತಿಥಿ ಶೇಖರ್ ಅಮೀನ್ ಜೋಕಟ್ಟೆ ಇವರು ಹೇಳಿದರು. ಕುಮಾರ ಪೂಜಾರಿ ಇವರು, ಇಂತಹ ಕಾರ್ಯಕ್ರಮಗಳಿಂದ ಬಜ್ಪೆ ಘಟಕ ಮಾದರಿಯಾಗಿದೆಯೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ್ ಇವರು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಸಂಘಟನೆ ಘಟಕಗಳು ಮಹತ್ತರ ಪಾತ್ರವನ್ನು ವಹಿಸುತ್ತದೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳು ಇಡೀ ಮನುಕುಲಕ್ಕೆ ಪ್ರೇರಣದಾಯಕವಾಗಿದ್ದು, ಇಂತಹ ಸ್ಪರ್ಧಾ ಕಾರ್ಯಕ್ರಮಗಳ ನಮ್ಮನ್ನು ಗಟ್ಟಿಗೊಳಿಸುತ್ತದೆಯೆಂದರು. ಬಜಪೆ ಘಟಕವನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಲತಾ ಕೆ. ಇವರ ಸಂಶೋದನಾ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ದೊರಕಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವವಾಹಿನಿ ಬಜಪೆ ಘಟಕದ ಸಲಹೆಗಾರರಾದ ಶ್ರೀ‌ ಜಿ. ಪರಮೇಶ್ವರ್ ಪೂಜಾರಿ ಇವರು, ಮಾದರಿಯೆನ್ನಬಾಹುದಾದ ಇಂತಹ ಕಾರ್ಯಕ್ರಮಗಳು ನಾವು ಮತ್ತಷ್ಟು ಒಗ್ಗೂಡಲು ಕಾರಣವಾಗಿದೆಯೆಂದು ಹೇಳಿ, ಘಟಕದ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶ್ರೀ ಶರತ್ ಸುವರ್ಣ, ಮಾಲಕರು‌ ಶ್ರೀ ದುರ್ಗಾ ಅರ್ಥ್ ಮೂವರ್ಸ್, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜರಾಮ್ ಕೆ. ಬಿ., ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕ  ವಿಠ್ಠಲ ಪೂಜಾರಿ, ಬಜಪೆ ಘಟಕದ ಸಾಂಸ್ಕೃತಿಕ ನಿರ್ದೇಶಕಿ ಬೇಬಿ, ಕಾರ್ಯದರ್ಶಿ ಸುನೀತಾ, ಸಂಚಾಲಕರಾದ ಶ್ರೀ ವಿಶ್ವನಾಥ ಪೂಜಾರಿ ರೆಂಜಾಳ ಮುಂತಾದವರು ಉಪಸ್ಥಿತರಿದ್ದರು. ಬಜ್ಪೆ ಘಟಕದ ಅಧ್ಯಕ್ಷ  ‌ದೇವರಾಜ್ ಅಮೀನ್ ವೈಯುಕ್ತಿಕ ನೆಲೆಯಲ್ಲಿ ಸರ್ವರಿಗೂ ಅಭಿನಂದನೆ ಹಾಗೂ ವಂದನೆಯನ್ನು ಸಮರ್ಪಿಸಿದರು.

ಸಂಚಾಲಕರಾದ  ಗೋಪಾಲಕೃಷ್ಣ ಕೆ. ಇವರು ಸರ್ವರನ್ನು ಸ್ವಾಗತಿಸಿದರು,  ವಿಶ್ವನಾಥ ಪೂಜಾರಿ ರೆಂಜಾಳ ಸನ್ಮಾನ ಪತ್ರ ವಾಚಿಸಿ, ವಿಜೇತರ ಪಟ್ಟಿ ಪ್ರಕಟಿಸಿ ಕಾರ್ಯಕ್ರಮ ‌ನಿರೂಪಿಸಿದರು. ಶ್ರೀ‌ ಪ್ರದೀಪ್ ಅಮೀನ್ ವಂದಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!