ಹಳೆಯಂಗಡಿ : ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಸದಸ್ಯರಿಗೆ 15 ದಿನಗಳ ಉಚಿತ ನಾಸಿಕ್ ಬ್ಯಾಂಡ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 02.09.2018 ರಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾಣಿಲ್ ರವರು ನಾಸಿಕ್ ಬ್ಯಾಂಡ್ ಬಾರಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಹೇಮನಾಥ ಬಿ ಕರ್ಕೆರ, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್, ಭಾಸ್ಕರ್ ಸಾಲಿಯಾನ, ಮೋಹನ್ ಎಸ್ ಸುವರ್ಣ, ಯಶೋಧರ ಸಾಲಿಯಾನ್, ರಮೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.