29-08-2022, 3:30 PM
ಸಸಿಹಿತ್ಲು :- ಸಮಾಜದ ಯುವ ಜನತೆಯ ಅಮೂಲಾಗ್ರ ಪರಿವರ್ತನೆ ಪ್ರಸ್ತುತ ದಿನದಲ್ಲಿ ತೀರಾ ಅಗತ್ಯವಾಗಿದೆ, ಇಂತಹ ಪರಿವರ್ತನೆಯು ಯುವವಾಹಿನಿಯಂತಹ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿಎನ್.ತಿಳಿಸಿದರು. ಅವರು ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಉದ್ಯೋಗ ಸಂಪರ್ಕ […]
Read More
15-08-2022, 3:30 PM
ಹೆಜಮಾಡಿ :- ಯುವವಾಹಿನಿ ಹೆಜಮಾಡಿ ಘಟಕದ ಪದಗ್ರಹಣ ಸಮಾರಂಭವು ದಿನಾಂಕ 15 ಆಗಸ್ಟ್ 2022 ರಂದು ಹೆಜಮಾಡಿ ಬಿಲ್ಲವರ ಸಂಘದ ಜಯ ಸಿ ಸುವರ್ಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಘಟಕದ ಅಧ್ಯಕ್ಷರಾದ ರಾಜೇಶ್ ಸನಿಲ್ ವಹಿಸಿದ್ದರು. ಉದ್ಘಾಟಕರಾಗಿ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉಪಸ್ಥಿತರಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ಬಜ್ಪೆ ಠಾಣೆಯ ಎ.ಎಸ್. ಐ. ಗೋಪಾಲಕೃಷ್ಣ ಕುಂದರ್, ಉಡುಪಿ ಪ್ರತಿಷ್ಠಿತ ಲೋಯರ್ ಸಂಕಪ್ಪ […]
Read More
14-08-2022, 4:58 PM
ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ 2022-23 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 14 ಆಗಸ್ಟ್ 2022 ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾ ಮಂದಿರ ಕೊಲ್ಯದಲ್ಲಿ ಜರಗಿತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಕೊಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣಾಧಿಕಾರಿ ಮತ್ತು ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ರವಿ ಕೊಂಡಾಣ 2022-23 ನೇ ಸಾಲಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೇರಿಸಿದರು. ಯುವವಾಹಿನಿ (ರಿ.) […]
Read More
10-07-2022, 8:54 AM
ನಾಯಕತ್ವ ಬೆಳವಣಿಗೆ, ಪ್ರತಿಭೆಗೆ ವೇದಿಕೆ ನೀಡುವ ಯುವವಾಹಿನಿ ಯುವಕರ ವ್ಯಕ್ತಿತ್ವ ರೂಪಿಸುವ ಪ್ರೇರಕ ಶಕ್ತಿ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು.ಅವರು ದಿನಾಂಕ 10.07.2022 ರಂದು ಬಂಟ್ವಾಳ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ನಡೆದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ 2022-23 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ದೀಪ ಬೆಳಗುವುದರ ಮೂಲಕ […]
Read More
10-07-2022, 8:49 AM
ಬಂಟ್ವಾಳ : ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಗಣೇಶ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ. ದಿನಾಂಕ 10.07.2022 ರಂದು ಬೆಂಜನಪದವು ಶುಭಲಕ್ಷೀ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 21 ಸದಸ್ಯರ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ನಾಗೇಶ್ ಪೂಜಾರಿ ನೈಬೇಲು, ಉಪಾಧ್ಯಕ್ಷರಾಗಿ ಹರೀಶ್ ಕೋಟ್ಯಾನ್ ಕುದನೆ, ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿಯಾಗಿ ಧನುಷ್ ಮದ್ವ, ಜತೆ ಕಾರ್ಯದರ್ಶಿಯಾಗಿ ಲೋಹಿತ್ ಕನಪಾದೆ, ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ ನಿರ್ದೇಶಕರಾಗಿ ನಾಗೇಶ್ ಪೂಜಾರಿ ಏಲಾಬೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಮಧುಸೂದನ್ ಮದ್ವ, […]
Read More
20-03-2022, 5:41 AM
ಯುವವಾಹಿನಿ ಸಂಸ್ಥೆಯು ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಧ್ಯೇಯದೊಂದಿಗೆ ಇಂದು ಮಾದರಿಯಾಗಿ ಬೆಳೆದಿದೆ. ಸಮಾಜಮುಖಿ ಚಿಂತನೆಯಿಂದ ತಮ್ಮ ಸೇವೆಯನ್ನು ಎಲ್ಲಾ ಸಮಾಜಕ್ಕೂ ನೀಡುತ್ತಿರುವುದು ಶ್ಲಾಘನೀಯ ಇಂತಹ ಸೇವಾ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಹೇಳಿದರು. ಅವರು ದಿನಾಂಕ 20.03.2022 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಘಟಕದ ನಿರ್ಗಮನ ಅಧ್ಯಕ್ಷರಾದ ಹರೀಶ್ ಆರ್ […]
Read More
13-03-2022, 11:00 AM
ಸಮಾಜಮುಖಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಯನ್ನು ಪಡೆದ ಯುವವಾಹಿನಿ ಬೇರೆ ಸಂಸ್ಥೆಗಳಿಗೆ ಕೈಗನ್ನಡಿಯಾಗಿದೆ, ಸಮಾಜದ ವಿವಿಧ ಅಯಾಮಗಳಲ್ಲಿ ನೊಂದವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಮುಂದೆ ಹೊಸ ತಂಡದೊಂದಿಗೆ ಇನ್ನಷ್ಟು ಕಾರ್ಯಗಳು ಮೂಡಿಬರಲಿ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ತಿಳಿಸಿ ಶುಭ ಹಾರೈಸಿದರು. ಅವರು ದಿನಾಂಕ 13.03.2022 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಬಜ್ಪೆ ಘಟಕದ ನೂತನ ತಂಡದ ಪದಗ್ರಹಣ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸಮಾರಂಭದ […]
Read More
27-02-2022, 8:12 AM
ಮಂಗಳೂರು ದಿ.27.02.2022 ಯುವವಾಹಿನಿ (ರಿ.) ಕೆಂಜಾರು – ಕರಂಬಾರು ಘಟಕದ ಪದಗ್ರಹಣ ಸಮಾರಂಭವು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು ಇಲ್ಲಿ ಜರುಗಿತು. ಶ್ರೀ ರಾಮಾಂಜನೆಯ ಮಂದಿರ ಕೆಂಜಾರು ಇದರ ಅಧ್ಯಕ್ಷರಾದ ಶ್ರೀ ಮಹಾಬಲ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಆರತಿಗೈದು ದೀಪ ಪ್ರಜ್ವಲನೆ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಶೇಖರ್ ಬಂಗೇರ ಅವರು ಸಮಾರಂಭವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜೀತೇಶ್ ಸಾಲ್ಯಾನ್ ವಹಿಸಿದ್ದರು. ಮಾಜಿ ಅಧ್ಯಕ್ಷರಾದ […]
Read More
20-02-2022, 2:26 PM
ಕೋಟ: ಸಂಘಟನೆಗಳು ಸಮಾಜದ ಶ್ರೇಯಸ್ಸಿಗಾಗಿ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನೊಂದವರ, ಅಶಕ್ತರ ಬಾಳಿಗೆ ಬೆಳಕಾಗಿ ಹೊಸ ಮುನ್ನುಡಿ ಬರೆಯುತ್ತಿದೆ. ಈ ನಿಟ್ಟಿನಲ್ಲಿ ಯುವವಾಹಿನಿ(ರಿ) ಯಡ್ತಾಡಿ ಘಟಕ ಹಲವಾರು ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನೆಯ ಸ್ಥಾಪನೆಯ ಉದ್ದೇಶದಂತೆ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಯಡ್ತಾಡಿ ಶ್ರೀಕೃಷ್ಣ ನಿಲಯದ ವಠಾರದಲ್ಲಿ ಯುವವಾಹಿನಿ (ರಿ) ಯಡ್ತಾಡಿ […]
Read More
13-02-2022, 8:29 AM
ಬೆಂಗಳೂರು : ಫೆಬ್ರವರಿ 13, 2022ರ ಭಾನುವಾರ ಬೆಂಗಳೂರಿನ ಜಯನಗರದ ಯುವಕ ಸಂಘದ ವಿವೇಕ ಸಭಾಂಗಣದಲ್ಲಿ ಸಂಭ್ರಮವೋ ಸಂಭ್ರಮ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಗಳಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು ಸೇರಿರುವ ಬಿಲ್ಲವ ಸಮಾಜದ ಯುವಕ-ಯುವತಿಯರು ಯುವವಾಹಿನಿ (ರಿ) ಬೆಂಗಳೂರು ಘಟಕದ ನಾಲ್ಕನೆಯ ವಾರ್ಷಿಕ ಸಮಾವೇಶವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಬೆಳಿಗ್ಗೆ ಗಂಟೆ ಹತ್ತರಿಂದ ಆರಂಭವಾದ ಕಾರ್ಯಕ್ರಮವನ್ನು ಸಕೇಶ್ ಬುನ್ನನ್ ನಡೆಸಿಕೊಟ್ಟರು. ವಿವಿಧ ನೃತ್ಯ-ಸಂಗೀತ ಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸೇರಿದ್ದ ಜನಸಾಗರವು ಮನರಂಜನೆಯ ರಸದೌತಣವನ್ನು ಸವಿಯುವಂತಾಯಿತು. ಸುಮಾರು […]
Read More