ಮಂಗಳೂರು : ಯುವವಾಹಿನಿ ಸಂಸ್ಥೆಯು ಯುವಕರ ಆಕರ್ಷಣೆಯ ಮೂಲಕ ಯುವಜನತೆಯಲ್ಲಿ ಹೊಸ ಸ್ಪೂರ್ತಿ ತುಂಬಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ.ಪೂಜಾರಿ ತಿಳಿಸಿದರು.
ಅವರು 2024 ಫೆಬ್ರವರಿ 20 ರಂದು ಮಂಗಳೂರಿನ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ ಮಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಶ್ರೀನಿವಾಸ್ ಬಲ್ಕ್ ಕ್ಯಾರಿಯರ್ ಇದರ ಮಾಲೀಕರಾದ ಲೋಕೇಶ್ ಆರ್ ಅಮೀನ್ ಇವರು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಂಜನ್ ಕೆ ಪಣಂಬೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ ಸುವರ್ಣ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಕುಮಾರಿ ಮೇಘನ, ಆರೋಗ್ಯ ಕ್ಷೇತ್ರದಲ್ಲಿ ಕುಮಾರಿ ಡಾ.ಸಿಂಧೂರಶ್ಮಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕುಮಾರಿ ಚಿನ್ಮಯಿ, ಕ್ರೀಡಾಕ್ಷೇತ್ರದ ಈಜು ಪಟು ನಿಶಾನ್ ಇವರುಗಳ ವಿಶೇಷ ಸಾಧನೆ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು.
ಯುವವಾಹಿನಿ ಮಂಗಳೂರು ಘಟಕದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಸಮಿತಿಯ ಸಂಚಾಲಕರಾದ ಗಣೇಶ್ ವಿ ಕೋಡಿಕಲ್ ರವರು ಸಭೆಗೆ ಪರಿಚಯಿಸಿದರು.
ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ನಾಗೇಶ್ ಅಮೀನ್‌ರವರು ಮಾತನಾಡಿ, ಮಂಗಳೂರು ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಸರ್ವರ ಸಹಕಾರದಿಂದ ನಿಭಾಯಿಸುವ ಆತ್ಮವಿಶ್ವಾಸ ಇದೆ ಎಂದರು.
ಮಂಗಳೂರು ಘಟಕದಿಂದ ಆಯ್ಕೆಯಾದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್ .ವಿ. ಪಚ್ಚನಾಡಿ ಮತ್ತು ಸಮಾವೇಶ ನಿರ್ದೇಶಕರಾದ ಗಣೇಶ್. ವಿ. ಕೋಡಿಕಲ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿವಿಧ ಘಟಕಗಳಿಂದ ಆಗಮಿಸಿದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಅದ್ಯಕ್ಷರು ಯಶಸ್ವಿಗೆ ಅಭಿನಂದನೆ ಸಲ್ಲಿಸಿ, ನೂತನ ಅಧ್ಯಕ್ಷರ ತಂಡಕ್ಕೆ ಶುಭಾಶಯ ಸಲ್ಲಿಸಿದರು.
ಸಭಾಧ್ಯಕ್ಷರಾದ ಗಣೇಶ್ ಸುವರ್ಣ ಮಾತನಾಡಿ ಯುವವಾಹಿನಿಯ ಮೇಲೆ ಇರುವ ಅಪಾರ ಅಭಿಮಾನವನ್ನು ತಿಳಿಸುತ್ತಾ ಈ ಒಂದು ವರ್ಷ ಯುವಾಹಿನಿಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಯುವವಾಹಿನಿ ಮಂಗಳೂರು ಘಟಕವನ್ನು ಕಳೆದ ಒಂದು ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಗಣೇಶ್ ಸುವರ್ಣ ಇವರ ಕುಟುಂಬಿಕರೊಂದಿಗೆ ಅಭಿನಂದಿಸಲಾಯಿತು.
ಭಜನೆ ಹಾಗೂ ಗುರು ಪೂಜೆಯೊಂದಿಗೆ ಸತೀಶ್ ಕೆ ಇವರ ಸಾರಥ್ಯದಲ್ಲಿ ಭಕ್ತಿಗೀತೆ ಭಾವಗೀತೆ ಹಾಗು ಇತರ ವೈವಿಧ್ಯಮಯ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಂಗಳೂರು ಘಟಕದ ಕಾರ್ಯದರ್ಶಿ ಭವಿಷ್ 2023- 24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ಪ್ರಸ್ತಾವನೆ ಮಾಡಿದರು, ಕುಮಾರಿ ಚಿನ್ಮಯಿ ಪ್ರಾರ್ಥಿಸಿದರು, ಸದಸ್ಯರಾದ ಸತೀಶ್ ಕೆ, ಕುಮಾರಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿಯದ ಶ್ರವಣ್ ಕೂಳೂರು ಧನ್ಯವಾದ ಸಮರ್ಪಣೆ ಮಾಡಿದರು.
ಸತೀಶ್ ಕುಮಾರ್ ಎ, ಸಂತೋಷ್, ತಿಲಕ್ ರಾಜ್ ಶ್ರೀಕಾಂತ್, ಕಾವ್ಯಶ್ ರೆಡ್ಡಿ, ಕುಮಾರಿ ಕಾವ್ಯಶ್ರೀ ಟಿ, ಕುಮಾರಿ ತೀಕ್ಷಾ ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.
ಗುರು ಸ್ತುತಿಯೊಂದಿಗೆ ಪ್ರಾರಂಭವಾದ ಸಮಾರಂಭವನ್ನು ಲೋಕ ಕಲ್ಯಾಣ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.