Yuvavahini

ಪದಗ್ರಹಣ

ಯುವವಾಹಿನಿಯಿಂದ ಯುವಜನತೆಗೆ ಜಾಗೃತಿ : ರಮೇಶ್ ಅಂಚನ್

ಪಡುಬಿದ್ರಿ : ಸಮಾಜದಲ್ಲಿ ಯುವಜನಾಂಗವು ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯ. ಹಲವಾರು ಸಮಸ್ಯೆಗಳ ನಿವಾರಣೆಗೆ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಲ್ಲವರ ಯೂನಿಯನ್, ಕುದ್ರೊಟ್ಟು, ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳ್ ಬಡಾದ ಕಾರ್ಯದರ್ಶಿ ರಮೇಶ್ ಅಂಚನ್ ತಿಳಿಸಿದರು.   ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾ ಭವನದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕದ 2018 ನೇ ಸಾಲಿನ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು […]

Read More

ಮಾನವೀಯ ಮೌಲ್ಯಗಳ ಪ್ರೇರಕ ಶಕ್ತಿ ಯುವವಾಹಿನಿ : ನರೇಶ್

ಹೆಜಮಾಡಿ : ವಿಜ್ಞಾನ ಮುಂದುವರಿದಂತೆ ಮಾನವೀಯ ಮೌಲ್ಯಗಳು ವ್ಯವಹಾರವಾಗಿ ಬದಲಾಗುತ್ತಿದೆ, ಪ್ರೀತಿ, ವಿಶ್ವಾಸ , ನಂಬಿಕೆ, ಗೌರವ, ಸ್ನೇಹ ಇಲ್ಲದಂತಾಗಿದೆ, ಈ ನಿಟ್ಟಿನಲ್ಲಿ ಯುವವಾಹಿನಿ ಮಾನವೀಯ ಮೌಲ್ಯಗಳ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಯುವವಾಹಿನಿ ಕೆಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು. ದಿನಾಂಕ‌10.06.2018 ರಂದು ಯುವವಾಹಿನಿ (ರಿ) ಹೆಜಮಾಡಿ ಘಟಕದ 2018-19 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು. ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷ ಮಹೇಂದ್ರ ಸಾಲ್ಯಾನ್ ಸಮಾರಂಭ […]

Read More

ಯುವವಾಹಿನಿ ಸುಳ್ಯ ಘಟಕದ ಪದಗ್ರಹಣ

ಸುಳ್ಯ: ಯುವವಾಹಿನಿ ಸುಳ್ಯ ಘಟಕದ ಪದಗ್ರಹಣ ಸಮಾರಂಭ ಜೂ.9 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಯುವಸದನದಲ್ಲಿ ನಡೆಯಿತು.  ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಎನ್.ಎಸ್.ಡಿ ವಿಠಲ್‍ದಾಸ್ ಬೆಳ್ಳಾರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಯಂತ ನಡುಬೈಲು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು. ಚಂದ್ರಶೇಖರ್ ಹೈದಂಗೂರು ನೇತೃತ್ವದ ನೂತನ ತಂಡ ಪ್ರತಿಜ್ನಾವಿಧಿ ಸ್ವೀಕರಿಸಿದರು . ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಕೆ.ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ […]

Read More

ಸಮಾಜದ ನೆಮ್ಮದಿ ಯುವವಾಹಿನಿಯ ಗುರಿ : ಯಶವಂತ ಪೂಜಾರಿ

ಪಣಂಬೂರು : ಅವ್ಯವಸ್ಥೆಯನ್ನು ತಿಂದುಂಡು ಹೊದ್ದು ಮಲಗೇಳುವ ನಮ್ಮ ಪರಿಸ್ಥಿತಿಯನ್ನು ಬದಲಾಯುಸೋ ಪ್ರಯತ್ನಕ್ಕೆ ಯುವವಾಹಿನಿ ಸಂಘಟನೆ ಅನಿವಾರ್ಯ ಹಾಗೂ ಆಗ ಮಾತ್ರ ಒಂದು ಸುಭದ್ರ ನಾಳೆ, ಒಂದು ನೆಮ್ಮದಿಯ ನಾಳೆ, ಒಂದು ನಿರಾತಂಕ ನಾಳೆ, ಒಂದು ಸ್ಪಷ್ಟ ನಾಳೆ, ಒಂದು ಸಮೃದ್ಧಿಯ ನಾಳೆ ನಿರ್ಮಾಣಕ್ಕೆ ಸಾಧ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 09.06.2018 ರಂದು ಪಣಂಬೂರು, ನವಮಂಗಳೂರು ಬಂದರು ಮಂಡಳಿಯ ರಿಕ್ರಿಯೇಶನ್ ಕ್ಲಬ್ ಇಲ್ಲಿ ಯುವವಾಹಿನಿ(ರಿ) ಪಣಂಬೂರು ಘಟಕದ […]

Read More

ಯುವಕರು ನಾಯಕತ್ವ ಗುಣ ಬೆಳೆಸಬೇಕು : ಯಶವಂತ ಪೂಜಾರಿ

ಹಳೆಯಂಗಡಿ : ಯುವ ಸಮುದಾಯ ಉತ್ತಮ‌ ನಾಯಕತ್ವ ಗುಣವನ್ನು ಬೆಳೆಸಬೇಕು ಎಂಬ ಸದುದ್ದೇಶದೊಂದಿಗೆ ಯುವವಾಹಿನಿ ಸಂಸ್ಥೆಯು ಯುವ ಸಮುದಾಯದ ಸಂಘಟನೆಯೊಂದಿಗೆ ಸಮಾಜ ಸೇವೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಹಳೆಯಂಗಡಿ ಹರಿ ಓಂ ಸಭಾಂಗಣದಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಸಭೆಯ […]

Read More

ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ – ಯಶವಂತ ಪೂಜಾರಿ.

ಅಡ್ವೆ : ಒಗ್ಗಟ್ಟಿನಿಂದ ದುಡಿದರೆ ಸಾದನೆಗೆ ಅಸಾಧ್ಯವಾದುದು ಏನಿಲ್ಲ, ನಮ್ಮ ಯುವಕರಲ್ಲಿ ಉತ್ಸಾಹ ಹೆಚ್ಚಿಸಬೇಕು. ಆ ಮೂಲಕ ಆತ್ಮವಿಶ್ವಾಸ ಬೆಳೆಸಬೇಕು ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದು ಇಲ್ಲ. ಹಾಗೆಯೇ ಯುವವಾಹಿನಿ ಸಂಘಟನೆಯ ಮೂಲಕ ನಾವೆಲ್ಲರೂ ಒಗ್ಗಾಟ್ಟಾದರೆ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸಲು ಸಾಧ್ಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 03-06-2018 ನೇ ಭಾನುವಾರ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ […]

Read More

ಸಂಘಟನೆ ಮತ್ತು ಸಮಾನತೆಯಿಂದ ಯುವ ಜನತೆಯ‌ ಯಶಸ್ಸು ಸಾಧ್ಯ : ನರೇಶ್ ಕುಮಾರ್

ಕೂಳೂರು : ನಮ್ಮ ದೃಷ್ಟಿ ಎತ್ತರಕ್ಕೆ ಇದ್ದಾಗ ಮತ್ತು ಧೃಡ ಚಿತ್ತ ಇದ್ದಾಗ ತಲುಪುವ ಗುರಿ ಹತ್ತಿರವಾಗುತ್ತದೆ ಸಂಘಟನೆಯ ಶಕ್ತಿ ಯುವಸಮುದಾಯದಲ್ಲಿದೆ ಮತ್ತು ಸಮಾನತೆಯಲ್ಲಿದೆ ಹಾಗಾದಾಗ ಯಶಸು ಲಭಿಸುತ್ತದೆ . ನಾಯಕತ್ವಕ್ಕೆ ಅಡಿಪಾಯ ಮುಖ್ಯ ಈ ದಿಶೆಯಲ್ಲಿ ಕೂಳೂರು ಘಟಕದ ಪರಿಶ್ರಮ ಅಭಿನಂದನೀಯ ಮಹಿಳೆಯರಿಗೆ ಅವಕಾಶ ಹೆಚ್ಚಾಗಬೇಕು ಎನ್ನುವ ಕೂಗು ಎಲ್ಲ ಕಡೆ ಇದೆ ಕೂಳೂರು ಘಟಕ ಅದನ್ನು ಅನುಸರಿಸಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ‌ತಿಳಿಸಿದರು. ಅವರು ದಿನಾಂಕ […]

Read More

ಯುವವಾಹಿನಿ ಅಮಾಯಕರಿಗೆ ಕರುಣಾಮಯಿಯಾಗಿದೆ : ಯಶವಂತ ಪೂಜಾರಿ

ಯುವವಾಹಿನಿಯು ಪ್ರೀತಿ, ವಾತ್ಸಲ್ಯವನ್ನು ಯುವ ಮನಸುಗಳಿಗೆ ರವಾನಿಸುವ ಕಾರ್ಯವನ್ನು ಸಮಾಜದಲ್ಲಿ ಮಾಡುತ್ತುದೆ.  ಯುವ ಪ್ರತಿಭೆಗಳಿಗೆ ವೇದಿಕೆಯಾಗಿ, ರೋಗಿಗಳಿಗೆ ಸಂಜೀವಿನಿಯಾಗಿ, ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ, ಅಮಾಯಕರಿಗೆ ಕರುಣಾಮಯಿಯಾಗಿ ಯುವವಾಹಿನಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 21.04.2018 ರಂದು ಯಡ್ತಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ 2018-19 ನೇ ಸಾಲಿನ ಪದಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಕೋಟ ಹೊಬಳಿಯ ಬಿಲ್ಲವ ಒಕ್ಕೂಟದ […]

Read More

ಯುವವಾಹಿನಿಯ ಸಾಧನೆ ಬಿಳಿ ಹಾಳೆಯಂತಿದೆ : ನಿರ್ಮಲಾ ಸಂಜೀವ್

ಮಂಗಳೂರು : ಪ್ರೀತಿ, ಅಕ್ಕರೆ ಹಾಗೂ ಕೌಟುಂಬಿಕ ಚೌಕಟ್ಟಿನ ಮೂಲಕ ಯುವವಾಹಿನಿ ಯುವಕರಿಗೆ ಪ್ರೇರಣೆ ನೀಡಿದೆ. 30 ವರ್ಷಗಳ ಇತಿಹಾಸವಿರುವ ಯುವವಾಹಿನಿಯ ಸಾಧನೆ ಯಾವುದೇ ಕಲ್ಮಶವಿಲ್ಲದೆ ಬಿಳಿ ಹಾಳೆಯಂತಿದೆ. ಯುವವಾಹಿನಿಯ ಆರಂಭದ ದಿನಗಳಿಂದಲೂ ತೀರಾ ಹತ್ತಿರದಿಂದ ಯುವವಾಹಿನಿಯನ್ನು ಕಂಡ ತನಗೆ ಯುವವಾಹಿನಿಯೇ ತನ್ನ ಮೊದಲ ಮಗು ಎಂದು ಗೋಕರ್ಣನಾಥ ಕೊ ಅಪರೇಟಿವ್ ಬ್ಯಾಂಕ್ ನ ಶಾಖಾ ಪ್ರಬಂಧಕರಾದ ನಿರ್ಮಲಾ ಸಂಜೀವ್ ತಿಳಿಸಿದರು. ಅವರು ದಿನಾಂಕ 11.04.2018 ರಂದು ಮಂಗಳೂರು ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) […]

Read More

ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ : ಜಯಾನಂದ

ಕಂಕನಾಡಿ: ಯುವವಾಹಿನಿ ಸ್ವಾಭಿಮಾನದ ಸ್ಪೂರ್ತಿ, ಸಮಾಜದಲ್ಲಿ ಸಂಘಟನೆಯ ಅರಿವು ಮೂಡಿಸಿದೆ, ಆತ್ಮವಿಶ್ವಾಸವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕಳಕೊಂಡರೂ ಚಿಂತೆ ಇಲ್ಲ ಎಂಬ ಗುರುವರ್ಯರ ಸಂದೇಶದಂತೆ ನಾವು ಕೀಳರಿಮೆ ಬಿಟ್ಟು ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಮುನ್ನಡೆಯೋಣ , ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ ಮುಖ ಮಾಡಿದೆ ಇದು ನಿರಂತರ ಪ್ರಕ್ರಿಯೆಯಾಗಲಿ ಹಾಗೂ ಯುವವಾಹಿನಿ ಕಂಕನಾಡಿ ಘಟಕವು ಶ್ರೇಷ್ಠ ಘಟಕವಾಗಿ ಹೊರಹೊಮ್ಮಲಿ ಎಂದು ಮೆಸ್ಕಾಮ್ ಕಾರ್ಯಪಾಲಕ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 01.04.2018 ರಂದು ಉಜ್ಜೋಡಿ ಶ್ರೀ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!