ಕೆಂಜಾರು-ಕರಂಬಾರು : ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶದೊಂದಿಗೆ ಸಮಾಜ ಸಾಧಕರನ್ನು ಗುರುತಿಸುವ, ವಿದ್ಯಾರ್ಜನೆ ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ಯುವವಾಹಿನಿ ಕೆಂಜಾರು-ಕರಂಬಾರು ಘಟಕ ಸಮಾಜ ಮುಖೀಯಾಗಿದೆ. ಕುಟುಂಬ ಹಾಗೂ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು.
ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದಲ್ಲಿ ದಿನಾಂಕ 06.01.2019 ರಂದು ನಡೆದ ಯುವ ವಾಹಿನಿ ಕೆಂಜಾರು-ಕರಂಬಾರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಬಿಲ್ಲವ ಸೇವಾ ಸಂಘ ಪೇಜಾವರದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಿದರು. ವಿಮಾನ ನಿಲ್ದಾಣ ಪ್ರಾಧಿಕಾರ ಪೊಲೀಸ್ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕೆ. ಅವರು ಶುಭ ಹಾರೈಸಿದರು.
ನೂತನ ಪದಾಧಿಕಾರಿಗಳು
2019-20 ನೇ ಸಾಲಿನ ಸಂಘದ ನೂತನ ಅಧ್ಯಕ್ಷರಾಗಿ ಯಶವಂತ ಬಿ., ಉಪಾಧ್ಯಕ್ಷರಾಗಿ ಯಶವಂತ ವಿ. ಮತ್ತು ಸುಜಾತಾ ಶೇಖರ, ಪ್ರಧಾನ ಕಾರ್ಯ ದರ್ಶಿ- ಪ್ರಸಾದ್ ಪಾಲನ್, ಜತೆ ಕಾರ್ಯದರ್ಶಿ- ಲೋಕೇಶ್ ಕುಂದರ್, ಕೋಶಾಧಿಕಾರಿ ಸಂತೋಷ್ ವಿ. ಕರಂಬಾರು, ಜತೆ ಕಾರ್ಯದರ್ಶಿ -ರಾಕೇಶ್ ಕೋಡಿ ಕೆಂಜಾರು, ನಿರ್ದೇಶಕರಾದ ಪ್ರಜ್ಞಾ, ತೃಪ್ತಿ, ರೂಪೇಶ್, ನಯನಾ, ಪ್ರತಿಮಾ ಪಾಲನ್, ರೇಶ್ಮಾ ಲೋಕೇಶ್, ಜೀತೇಶ್ ಸಾಲ್ಯಾನ್, ಸಂದೀಪ್, ಶೇಖರ್, ಭೂಷಣ್ ಕುಮಾರ್, ಪ್ರೀತೇಶ್ ಅರ್ಬಿ, ವಿದ್ಯಾ ಕಿಶೋರ್, ಸಂಚಾಲಕಿ ಪ್ರಭಾವತಿ ಕೇಶವ್, ಸಂಘಟನ ಕಾರ್ಯದರ್ಶಿಯಾಗಿ ಜಿತೇಶ್ ಕೆಂಜಾರು, ವಿನೋದ್ ಅರ್ಬಿ, ಸುದೇಶ್ ಕೆಂಜಾರ್, ಭರತ್ ಕುಮಾರ್, ನಿರಂಜನ್, ಹರೀಶ್ ಕೊಪ್ಪಳ ಅವರು ಆಯ್ಕೆಯಾದ ಪದಾಧಿಕಾರಿಗಳಿಗೆ ಪದವಿ ಪ್ರದಾನ ಬೋಧಿಸಿದರು.
ಸಮ್ಮಾನ, ಗೌರವ
ಕರಂಬಾರು ಸ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ನವೀನಾ ಕುಮಾರಿ, ಕರಾಟೆ ಶಿಕ್ಷಕ ನಿತಿನ್ ಎನ್. ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾಪಟುಗಳಾದ ಶೋಭಿತ್ ರಾಜ್, ಜ್ಯೋತಿಕಾ, ಎಂಜಿನಿಯರ್ ಮಿಥುನ್ ಕುಮಾರ್, ಪ್ರಸೂತಿಗಾರ್ತಿ ಆನಂದಿ, ಕೃಷಿಕ ಮಹಾಬಲ ಪೂಜಾರಿ, ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಯಮುನಾ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಘಟಕದ ಅಧ್ಯಕ್ಷ ಗಣೇಶ್ ಅರ್ಬಿ ಅಧ್ಯಕ್ಷತೆ ವಹಿಸಿದ್ದರು.
ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದ ಅಧ್ಯಕ್ಷ ಸೇಸಪ್ಪ ಅಮೀನ್, ಜಗನ್ನಾಥ ಸಾಲ್ಯಾನ್, ಶಿವಣ್ಣ ವರ್ತೆ ಮುಂಡೂರು, ಪದ್ಮನಾಭ ಮರೋಳಿ, ಶೇಖರ ಪೂಜಾರಿ ಉಪಸ್ಥಿತರಿದ್ದರು. ಸುಜಾತಾ ಶೇಖರ್ ಸ್ವಾಗತಿಸಿದರು. ಜಿತೇಶ್ ಸಾಲ್ಯಾನ್ ವರದಿ ವಾಚಿಸಿದರು. ವಿನೋದ್ ಅರ್ಬಿ ನಿರೂಪಿಸಿದರು. ಪ್ರಸಾದ್ ಪಾಲನ್ ವಂದಿಸಿದರು.
ನೂತನ ಪದಾಧಿಕಾರಿಗಳ ತಂಡಕ್ಕೆ ಶುಭ ಹಾರೈಕೆಗಳು…