ಬೆಳುವಾಯಿ : ಬಿಲ್ಲವ ಸಮಾಜದ ಶ್ರೀಮಂತ ಇತಿಹಾಸದಲ್ಲಿ ಅದೆಷ್ಟೋ ಮಹಿಳೆಯರು ಮತ್ತು ಮಹನೀಯರು ದಳವಾಯಿಗಳಾಗಿ ಯೋಧರಾಗಿ ನಾಡು ಕಟ್ಟಿದವರು ಇದ್ದಾರೆ ಆದರೆ ಇತಿಹಾಸಕಾರರು ಅವರ ಬದುಕಿನ ಮೇಲೆ ಬೆಳಕು ಚೆಲ್ಲದ್ದು ವಿಷಾದನೀಯ. ಬಿಲ್ಲವರಲ್ಲಿ ಏನು ಇದೆ ಎಂದು ಕೇಳುವುದಕ್ಕಿಂತ ಏನು ಇಲ್ಲ ಎಂದು ಕೇಳುವುದೇ ಉತ್ತಮ. ಎಲ್ಲವು ಇದ್ದಂತಹ ಸಮಾಜ ಎಂದರೆ ಅದು ಬಿಲ್ಲವ ಸಮಾಜ ಮಾತ್ರ. ನಾಯಕರಾಗಿ, ಬಿಲ್ವಿದ್ದೆ ಪ್ರವೀಣರಾಗಿ, ದೈವಗಳ ಅರ್ಚಕಾಗಿ, ವೈದ್ಯರಾಗಿ, ಕೃಷಿ ಮಾಡುವ ಪ್ರತಿಷ್ಟಿತ ಮನೆಗಳಾಗಿ, ಯೋಧರಾಗಿ, ಬೇಟಗಾರರಾಗಿ ಜನಾನುರಾಗಿಯಾಗಿದ್ದವರು ಇದೇ ಬಿಲ್ಲವರು. ನಮ್ಮ ಸಮಾಜ ನಮ್ಮವರ ಸಾಹಸ ಕತೆಗಳ ಮೂಲಕ ನಮ್ಮ ಜೀವನವನ್ನು ಮುಂದುವರೆಸಬೇಕು ಮತ್ತು ನಮ್ಮ ಜಾತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಬಿರುವೆರ್ ಕುಡ್ಲ ಇದರ ಅಧ್ಯಕ್ಷ ಶೈಲು ಬಿರ್ವ ಅಗತ್ತಾಡಿ ತಿಳಿಸಿದರು.
ಅವರು ದಿನಾಂಕ 23.09.2018 ರಂದು ಎಸ್.ಬಿ.ಹಾಲ್ ಕಮಲಮ್ಮ ಕಾಂಪ್ಲೆಕ್ಸ್ ಬೆಳುವಾಯಿ ಇಲ್ಲಿ ಜರುಗಿದ ಯುವವಾಹಿನಿ (ರಿ) ಬೆಳುವಾಯಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಿಲ್ಲವ ಸಮಾಜದ ಯುವ ಸಮುದಾಯದ ಮುಂದೆ ಬಹಳಷ್ಟು ಸವಾಲುಗಳಿವೆ ಈ ಬಗ್ಗೆ ನಾವು ಚಿಂತಿಸಬೇಕಾಗಿದೆ. ಯುವಜನತೆಯ ಶಕ್ತಿ ಸಮರ್ಪಕವಾಗಿ ಬಳಕೆಯಾಗಬೇಕು, ಯುವಕರು ಸಂಸ್ಕಾರವಂತರಾಗಿ ಉತ್ತಮ ನಡೆನುಡಿಯೊಂದಿಗೆ ಹರಿಯುವ ನದಿಯಂತೆ ಹೊರಹೊಮ್ಮುಬೇಕು ಎಂದು ಸಮಾರಂಭ ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ (ರಿ) ಬೆಳುವಾಯಿ ಘಟಕದ ಅಧ್ಯಕ್ಷ ರವಿ ಬಂಗೇರ ಕಳೆದೊಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬೆಳುವಾಯಿ ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಅಂಚನ್, ಪಡುಮಾನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಎನ್.ಸುವರ್ಣ, ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಘು ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಘಟಕದ ಸಲಹೆಗಾರ ಸಾಧು ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಮತಾ ಜಯಂತ್ ಸ್ವಾಗತಿಸಿದರು, ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.ನವೀನ್.ಎಸ್.ಸಾಲ್ಯಾನ್ ಕಾಂತಾವರ ಧನ್ಯವಾದ ಸಲ್ಲಿಸಿದರು
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಕಾಲೇಜಿನ ಕನಸು ತಂಡ, ಎಂ.ಜೆ.ಡಾನ್ಸ್ ಗ್ರೂಪ್, ದವಳಾ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.