Yuvavahini

ಪದಗ್ರಹಣ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯದ ಮುಂದಾಗಬೇಕು :- ಮಂಜುನಾಥ್

ಉಡುಪಿ :- ಸಾಮಾಜಿಕ ಕಾಳಜಿಯೊಂದಿಗೆ ಸಮಾಜದ ದುರ್ಬಲರಿಗೆ ನೆರವು ಚಾಚುವ ಯುವವಾಹಿನಿಯ ಸಮಾಜಮುಖಿ ಚಿಂತನೆಯು ನನಗೆ ಇಷ್ಟವಾಗಿದ್ದು ತಮ್ಮ ಬಿಡುವಿನ ಸಮಯದಲ್ಲಿ ನಾನು ಕೂಡ ಯುವವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಭರವಸೆಯ ಬಗ್ಗೆ ಮಾತನಾಡುತ್ತಾ, ನಮ್ಮ ಮನೆಯ ಮಕ್ಕಳನ್ನು ಇತಿಮಿತಿಯಲ್ಲಿ ಬೆಳೆಸಬೇಕು, ಮಾದಕ ವ್ಯಸನದಿಂದ ದೂರವಿರಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಕೈ ಜೋಡಿಸಬೇಕು ಎಂದು ಉಡುಪಿಯ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಮಂಜುನಾಥ್ ರವರು ನುಡಿದರು. ಅವರು ದಿನಾಂಕ 18 ಸೆಪ್ಟೆಂಬರ್ 2022ರ ಭಾನುವಾರ ಯುವವಾಹಿನಿ ಉಡುಪಿ […]

Read More

ಪದಪ್ರಧಾನ ಸಮಾರಂಭ -2022

ಪಡುಬಿದ್ರಿ : ಯುವವಾಹಿನಿ ಸಂಸ್ಥೆ ಹಲವಾರು ಸಮಾಜಮುಖಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತಾ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವುದು ಸಂತಸವಾಗಿದೆ. ಪಡುಬಿದ್ರಿ ಘಟಕದ ಮುಂದಿನ ಕಾರ್ಯಕ್ರಮಗಳು ಶುಭವಾಗಲಿ ಎಂದು ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷರಾದ ಶೀನ ಪೂಜಾರಿ ಹೇಳಿದರು. ಅವರು ದಿನಾಂಕ 18 ಸೆಪ್ಟೆಂಬರ್ 2022 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2022-23 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ […]

Read More

ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು – ಸಂತೋಷ್ ಕಾಮತ್

ಕಂಕನಾಡಿ :- ಯುವಕರು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ, ಸ್ವಾವಲಂಬಿಗಳಾಗಿ ಧನಾತ್ಮಕವಾಗಿ ಚಿಂತನೆಗಳನ್ನು ಮಾಡುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧನೆ ಮಾಡುವಂತಾಗಬೇಕೆಂದು ಎಂದು ಉದ್ಯಮಿ ಹಾಗೂ ಸಮಾಜ ಸೇವಕರೂ ಆಗಿರುವ ಸಂತೋಷ್ ಕಾಮತ್ ರವರು ಯುವಕರಿಗೆ ಕರೆ ನೀಡಿದರು. ಅವರು ದಿನಾಂಕ 4 ಸೆಪ್ಟಂಬರ್ 2022ದಂದು ಕಂಕನಾಡಿ ಗರೋಡಿ ಬಳಿಯ ಸಮೃದ್ಧಿ ಭವನದಲ್ಲಿ ಜರಗಿದ ಯುವವಾಹಿನಿ ಕಂಕನಾಡಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ […]

Read More

ಯುವ ಜನರ ಪರಿರ್ತನೆಗೆ ಯುವವಾಹಿನಿ ಅಗತ್ಯ ಪ್ರಕಾಶ್ ಕುಮಾರ್ ಅಭಿಮತ

  ಸಸಿಹಿತ್ಲು :- ಸಮಾಜದ ಯುವ ಜನತೆಯ ಅಮೂಲಾಗ್ರ ಪರಿವರ್ತನೆ ಪ್ರಸ್ತುತ ದಿನದಲ್ಲಿ ತೀರಾ ಅಗತ್ಯವಾಗಿದೆ, ಇಂತಹ ಪರಿವರ್ತನೆಯು ಯುವವಾಹಿನಿಯಂತಹ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿಎನ್.ತಿಳಿಸಿದರು. ಅವರು ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ (ರಿ.) ಸಸಿಹಿತ್ಲು ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಉದ್ಯೋಗ ಸಂಪರ್ಕ […]

Read More

ಯುವವಾಹಿನಿ(ರಿ.) ಹೆಜಮಾಡಿ ಘಟಕ ಪದಗ್ರಹಣ ಕಾರ್ಯಕ್ರಮ

ಹೆಜಮಾಡಿ :- ಯುವವಾಹಿನಿ ಹೆಜಮಾಡಿ ಘಟಕದ ಪದಗ್ರಹಣ ಸಮಾರಂಭವು ದಿನಾಂಕ 15 ಆಗಸ್ಟ್ 2022 ರಂದು ಹೆಜಮಾಡಿ ಬಿಲ್ಲವರ ಸಂಘದ ಜಯ ಸಿ ಸುವರ್ಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಘಟಕದ ಅಧ್ಯಕ್ಷರಾದ ರಾಜೇಶ್ ಸನಿಲ್ ವಹಿಸಿದ್ದರು. ಉದ್ಘಾಟಕರಾಗಿ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉಪಸ್ಥಿತರಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ಬಜ್ಪೆ ಠಾಣೆಯ ಎ.ಎಸ್. ಐ. ಗೋಪಾಲಕೃಷ್ಣ ಕುಂದರ್, ಉಡುಪಿ ಪ್ರತಿಷ್ಠಿತ ಲೋಯರ್ ಸಂಕಪ್ಪ […]

Read More

2022-23 ನೇ ಸಾಲಿನ ಪದಗ್ರಹಣ ಸಮಾರಂಭ

ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ 2022-23 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 14 ಆಗಸ್ಟ್ 2022 ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾ ಮಂದಿರ ಕೊಲ್ಯದಲ್ಲಿ ಜರಗಿತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಕೊಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣಾಧಿಕಾರಿ ಮತ್ತು ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ರವಿ ಕೊಂಡಾಣ 2022-23 ನೇ ಸಾಲಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೇರಿಸಿದರು. ಯುವವಾಹಿನಿ (ರಿ.) […]

Read More

ಯುವವಾಹಿನಿ ವ್ಯಕ್ತಿತ್ವ ರೂಪಿಸುವ ಪ್ರೇರಕ ಶಕ್ತಿ : ಉದಯ ಅಮೀನ್ ಮಟ್ಟು

 ನಾಯಕತ್ವ ಬೆಳವಣಿಗೆ, ಪ್ರತಿಭೆಗೆ ವೇದಿಕೆ ನೀಡುವ ಯುವವಾಹಿನಿ ಯುವಕರ ವ್ಯಕ್ತಿತ್ವ ರೂಪಿಸುವ ಪ್ರೇರಕ ಶಕ್ತಿ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು.ಅವರು ದಿನಾಂಕ 10.07.2022 ರಂದು ಬಂಟ್ವಾಳ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ನಡೆದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ 2022-23 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ದೀಪ ಬೆಳಗುವುದರ ಮೂಲಕ […]

Read More

ಅಧ್ಯಕ್ಷರಾಗಿ ಗಣೇಶ್ ಪೂಂಜರೆಕೋಡಿ ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಗಣೇಶ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ. ದಿನಾಂಕ 10.07.2022 ರಂದು ಬೆಂಜನಪದವು ಶುಭಲಕ್ಷೀ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 21 ಸದಸ್ಯರ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ನಾಗೇಶ್ ಪೂಜಾರಿ ನೈಬೇಲು, ಉಪಾಧ್ಯಕ್ಷರಾಗಿ ಹರೀಶ್ ಕೋಟ್ಯಾನ್ ಕುದನೆ, ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿಯಾಗಿ ಧನುಷ್ ಮದ್ವ, ಜತೆ ಕಾರ್ಯದರ್ಶಿಯಾಗಿ ಲೋಹಿತ್ ಕನಪಾದೆ, ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ ನಿರ್ದೇಶಕರಾಗಿ ನಾಗೇಶ್ ಪೂಜಾರಿ ಏಲಾಬೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಮಧುಸೂದನ್ ಮದ್ವ, […]

Read More

ಸಮಾಜಮುಖಿ ಕಾರ್ಯಗಳಿಗೆ ಯುವವಾಹಿನಿ ಮಾದರಿ : ಚಂದ್ರಶೇಖರ ನಾನಿಲ್

ಯುವವಾಹಿನಿ ಸಂಸ್ಥೆಯು ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಧ್ಯೇಯದೊಂದಿಗೆ ಇಂದು ಮಾದರಿಯಾಗಿ ಬೆಳೆದಿದೆ. ಸಮಾಜಮುಖಿ ಚಿಂತನೆಯಿಂದ ತಮ್ಮ ಸೇವೆಯನ್ನು ಎಲ್ಲಾ ಸಮಾಜಕ್ಕೂ ನೀಡುತ್ತಿರುವುದು ಶ್ಲಾಘನೀಯ ಇಂತಹ ಸೇವಾ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಹೇಳಿದರು. ಅವರು ದಿನಾಂಕ 20.03.2022 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಘಟಕದ ನಿರ್ಗಮನ ಅಧ್ಯಕ್ಷರಾದ ಹರೀಶ್ ಆರ್ […]

Read More

ಸಮಾಜಮುಖಿ ಕಾರ್ಯಗಳಿಗೆ ಯುವವಾಹಿನಿ ಕೈಗನ್ನಡಿ:- ಉಮನಾಥ್ ಕೋಟ್ಯಾನ್

ಸಮಾಜಮುಖಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಯನ್ನು ಪಡೆದ ಯುವವಾಹಿನಿ ಬೇರೆ ಸಂಸ್ಥೆಗಳಿಗೆ ಕೈಗನ್ನಡಿಯಾಗಿದೆ, ಸಮಾಜದ ವಿವಿಧ ಅಯಾಮಗಳಲ್ಲಿ ನೊಂದವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಮುಂದೆ ಹೊಸ ತಂಡದೊಂದಿಗೆ ಇನ್ನಷ್ಟು ಕಾರ್ಯಗಳು ಮೂಡಿಬರಲಿ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ತಿಳಿಸಿ ಶುಭ ಹಾರೈಸಿದರು. ಅವರು ದಿನಾಂಕ‌ 13.03.2022 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಬಜ್ಪೆ ಘಟಕದ ನೂತನ ತಂಡದ ಪದಗ್ರಹಣ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸಮಾರಂಭದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!