16-09-2025, 6:50 PM
ಯುವವಾಹಿನಿ ಸಂಚಲನಾ ಸಮಿತಿ ಮುಂಡಾಜೆ ಇದರ ಆತಿಥ್ಯದಲ್ಲಿ ” ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ” ಕಾರ್ಯಕ್ರಮ ದಿನಾಂಕ 14.09.2025 ಆದಿತ್ಯವಾರದಂದು ಮುಂಡಾಜೆಯ ಪಿಲತಡ್ಕದ ಪೂವಪ್ಪ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು. ಕುದ್ರೋಳಿ ದೇವಸ್ಥಾನದ ಅರ್ಚಕರಾದ ರೂಪೇಶ್ ಶಾಂತಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕರಾದ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ […]
Read More
14-09-2025, 3:54 PM
ಶ್ರೀರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯುತ್ತಿರುವ ರಾಮನಾಮ ತಾರಕ ಮಂತ್ರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ದಿನಾಂಕ 02.04.2025ರ ಬುಧವಾರ ಶ್ರೀರಾಮನಾಮ ತಾರಕ ಮಂತ್ರ ಭಜನಾ ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು ಭಜನಾ ಕಾರ್ಯಕ್ರಮದ ನಂತರ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿಗಳಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು…
Read More
13-08-2025, 1:19 PM
*ಯುವವಾಹಿನಿ( ರಿ.)ಬೆಳ್ತಂಗಡಿ ಘಟಕ ಕನ್ಯಾಡಿ ಸ್ವಾಮೀಜಿಗಳಿಗೆ ಗೌರವಾಭಿನಂದನೆ* ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಗೆ ಭೇಟಿ ನೀಡಿ ಪೂಜ್ಯ ಸ್ವಾಮೀಜಿಗಳಾದ ಮಹಾಮಂಡಲೇಶ್ವರ ೧೦೦೮ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಪೂಜ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಇವರನ್ನು ಪೂಜ್ಯ ಸ್ವಾಮೀಜಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಘಟಕದ ಸದಸ್ಯರು ಭಾಗವಹಿಸಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.
Read More
07-08-2025, 4:39 PM
ಯುವವಾಹಿನಿ(ರಿ.) ಬೆಳ್ತಂಗಡಿ ಘಟಕ ಮಹಿಳಾ ದಿನಾಚರಣೆ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ 9.3.2025ನೇ ಆದಿತ್ಯವಾರ ಸ್ಥಳ. ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸ್ವಾಮಿ ಸಭಾಭವನ ಅವಳು ಬದುಕಲು ಕಲಿಸಿದವಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ನಾಟಿವೈದ್ಯ ಶ್ರೀಮತಿ ಡೀಕಮ್ಮ ಅಲ್ಯೊಟ್ಟು ಉಜಿರೆ ಇವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಿಲ್ಲೂರಿನ ವೈದ್ಯರಾದ ಡಾ|| ವಾಣಿ ಸುಗುಣ ಕುಮಾರ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ರಶ್ಮಿ ನಾರಾವಿ ಹಾಗೂ ಹಿರಿಯ […]
Read More
04-11-2024, 2:56 PM
ಬೆಳ್ತಂಗಡಿ : ಯುವವಾಹಿನಿ (ರಿ) ಬೆಳ್ತಂಗಡಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 6ನೇ ವರ್ಷದ ತುಳುನಾಡ ತುಡರ ಪರ್ಬ- 2024 ಸಾಮೂಹಿಕ ದೀಪಾವಳಿ ಹಬ್ಬ ಆಚರಣೆಯನ್ನು 1001 ದೀಪಗಳನ್ನು ಬೆಳಗುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಉಪಾಧ್ಯಕ್ಷರಾದ ಶ್ರೀ ಸುಂದರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಘಟಕದ ಅಧ್ಯಕ್ಷರಾದ ಶ್ರೀ ಸದಾಶಿವ ಊರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಬಿಲ್ಲವ […]
Read More
22-09-2024, 2:48 PM
ದಿನಾಂಕ: 27-10-2024 ಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಬೆಳ್ತಂಗಡಿ
Read More
15-09-2024, 2:28 PM
ಬೆಳ್ತಂಗಡಿ : ಯುವವಾಹಿನಿ (ರಿ) ಬೆಳ್ತಂಗಡಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ “ಮನಸ್ಸು ಅಂತರಾಳದ ಅವಲೋಕನ” ಕಾರ್ಯಕ್ರಮ 15-09-2024 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನ ಬೆಳ್ತಂಗಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಯಾಟಕರು ಉದ್ಯಮಿಗಳು ಅನ್ನಪೂರ್ಣ ಮೆಟಲ್ ಬೆಳ್ತಂಗಡಿ ರಕ್ಷಾ ರಾಫ್ಲೇಶ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ. ಯುವವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಇನ್ನಷ್ಟು ಸಮಾಜಕ್ಕೆ, ಯುವ […]
Read More
20-08-2024, 11:10 AM
ಬೆಳ್ತಂಗಡಿ: ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಗುರು ಜಯಂತಿ ಕಾರ್ಯಕ್ರಮ ಗುರು ನಮನವನ್ನ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದಲ್ಲಿ ಆಚರಿಸಲಾಯಿತು. ಗುರುಗಳಿಗೆ ಪುಷ್ಪನಮನವನ್ನ ಅರ್ಪಿಸಿ, ಗುರು ಶ್ಲೋಕ ಪಠಿಸಿ ಸರಳವಾಗಿ ಗುರುಗಳ ಜೀವನ ಸಾಧನೆಯ ವಿನಿಮಯ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಊರ, ನಿಕಟ ಪೂರ್ವಾಧ್ಯಕ್ಷ ಅಶ್ವಥ್ ಕುಮಾರ್, ಮಾಜಿ ಅಧ್ಯಕ್ಷರಾದ ಪ್ರಸಾದ್ ಎಮ್ .ಕೆ, ಪ್ರಶಾಂತ್ ಮಚ್ಚಿನ, ಸುಜಾತ ಅಣ್ಣಿ […]
Read More
10-08-2024, 10:20 AM
ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ಆಟಿದ ಕಮ್ಮೆನ – 2024 ದಿನಾಂಕ 10-08-2024 ನೇ ಶನಿವಾರ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮೇಲಂತಸ್ತಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸದಾಶಿವ ಊರು ವಹಿಸಿದ್ದರು. ವಾಸ್ತವಿಕವಾಗಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷರು ಎಂ.ಕೆ ಪ್ರಸಾದ್ ಆಟಿಯ ವಿಶೇಷತೆ ಬಗ್ಗೆ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಿದೆ […]
Read More
10-04-2024, 11:29 AM
ಬೆಳ್ತಂಗಡಿ:ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿಯಲ್ಲಿ ದಿನಾಂಕ 10/04/2024 ರಂದು ನಡೆದ ಜಾತ್ರಾ ಮಹೋತ್ಸವ ಹಾಗೂ ಶ್ರೀ ರಾಮ ತಾರಕ ಭಜನೋತ್ಸವ ಕಾರ್ಯಕ್ರಮದಲ್ಲಿ ಸಂಜೆ 4.00 ರಿಂದ 7.00 ಗಂಟೆವರೆಗೆ ನಡೆದ ಭಜನೆಯಲ್ಲಿ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ಸದಸ್ಯರು ಭಾಗಿಯಾಗಿದ್ದರು. ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಸಲಹೆಗಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲ ಸದಸ್ಯರಿಗೆ ಅರ್ಚಕರು ಪ್ರಸಾದ ನೀಡಿ ಗೌರವಿಸಿದರು.
Read More