*ಯುವವಾಹಿನಿ( ರಿ.)ಬೆಳ್ತಂಗಡಿ ಘಟಕ
ಕನ್ಯಾಡಿ ಸ್ವಾಮೀಜಿಗಳಿಗೆ ಗೌರವಾಭಿನಂದನೆ*
ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಗೆ ಭೇಟಿ ನೀಡಿ ಪೂಜ್ಯ ಸ್ವಾಮೀಜಿಗಳಾದ ಮಹಾಮಂಡಲೇಶ್ವರ ೧೦೦೮ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
ಪೂಜ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಇವರನ್ನು ಪೂಜ್ಯ ಸ್ವಾಮೀಜಿಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಘಟಕದ ಸದಸ್ಯರು ಭಾಗವಹಿಸಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.
AUG 13, 2025 1.19 PM IST


