ಬೆಳ್ತಂಗಡಿ: ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಗುರು ಜಯಂತಿ ಕಾರ್ಯಕ್ರಮ ಗುರು ನಮನವನ್ನ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದಲ್ಲಿ ಆಚರಿಸಲಾಯಿತು.
ಗುರುಗಳಿಗೆ ಪುಷ್ಪನಮನವನ್ನ ಅರ್ಪಿಸಿ, ಗುರು ಶ್ಲೋಕ ಪಠಿಸಿ ಸರಳವಾಗಿ ಗುರುಗಳ ಜೀವನ ಸಾಧನೆಯ ವಿನಿಮಯ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಊರ, ನಿಕಟ ಪೂರ್ವಾಧ್ಯಕ್ಷ ಅಶ್ವಥ್ ಕುಮಾರ್, ಮಾಜಿ ಅಧ್ಯಕ್ಷರಾದ ಪ್ರಸಾದ್ ಎಮ್ .ಕೆ, ಪ್ರಶಾಂತ್ ಮಚ್ಚಿನ, ಸುಜಾತ ಅಣ್ಣಿ ಪೂಜಾರಿ, ಸಲಹೆಗಾರರಾದ ಶ್ರೀ ಅಣ್ಣಿ ಪೂಜಾರಿ, ಉಪಾಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಮತ್ತು ಸಂತೋಷ್ ಅರಳಿ, ಕಾರ್ಯದರ್ಶಿ ಯಶೋಧರ ಮುಂಡಾಜೆ ಮತ್ತು ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಚಂದ್ರಹಾಸ ಬಳಂಜ ಹಾಗೂ ಸದಸ್ಯರು ಭಾಗವಹಿಸಿದರು.
AUG 20, 2024 11.10 AM IST


