23-09-2018, 7:40 AM
ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ […]
Read More
15-09-2018, 2:31 AM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಸೆಪ್ಟೆಂಬರ್ ಮಾಸಿಕ ಪತ್ರಿಕೆಯನ್ನು ದಿನಾಂಕ 15.09.2018 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆದ ಸೋಣ ಸಂಭ್ರಮ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕ ಜಯಂತ್ ನಡುಬೈಲು, ಸಂಪಾದಕ ರಾಜೇಶ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್, ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ, ಜಿತೇಂದ್ರ ಜೆ.ಸುವರ್ಣ. ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮೀ.ಸಿ.ಕರ್ಕೇರ, […]
Read More
15-09-2018, 2:28 AM
ಮಂಗಳೂರು : ಜಾಗತೀಕರಣದ ಪ್ರಭಾವ ಇಂದು ಎಲ್ಲೆಡೆ ವ್ಯಾಪಿಸುತ್ತಿದೆ. ಬದಲಾವಣೆ ಎಂಬುದು ಜೀವಂತ ಸಮಾಜದ ಲಕ್ಷಣ ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಆದರೆ ಈ ಬದಲಾವಣೆಯ ಗತಿ ನಮ್ಮ ದೇಸಿ ನುಡಿ-ಸಂಸ್ಕೃತಿಯ ಬುಡ ಅಲುಗಾಡಿಸುವಂತಾಗಬಾರದು ಹೊಸತನ್ನು ಸ್ವೀಕರಿಸುತ್ತಲೇ ಈ ನೆಲದ ಜೀವನಮೌಲ್ಯ-ಕಲಾಮೌಲ್ಯಗಳು ಉಳಿಯುವಂತಾಗಬೇಕು. ತುಳುನಾಡಿನ ಹಬ್ಬ, ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ತಿಳಿಸಿದರು. ಅವರು ದಿನಾಂಕ 15.09.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ […]
Read More
18-08-2018, 4:39 PM
ಮಂಗಳೂರು : ಭಾರತೀಯ ಸೇನೆಗೆ ಸೇರುವಂತೆ ಇಂದಿನ ಯುವಜನಾಂಗಕ್ಕೆ ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾಗಿದೆ. ಎಂದು ಅಭಿನಂದನೆ ಸ್ವೀಕರಿಸಿದ ಮಹಂತೇಶ್ ಗಡದ್ ತಿಳಿಸಿದರು ಮತ್ತು ಯುವವಾಹಿನಿಗೆ ಕೃತಜ್ಞತೆ ತಿಳಿಸಿದರು. ದಿನಾಂಕ 18.08.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಯುವವಾಹಿನಿ ಸಭಾಂಗಣದಲ್ಲಿ ಭಾರತೀಯ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಭಾರತೀಯ ಭೂಸೇನೆಯಲ್ಲಿ 17 ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿದ ಹವಾಲ್ದಾರ್ ಮಹಂತೇಶ್ ಗಡದ್ ಇವರ […]
Read More
11-08-2018, 4:59 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 11-08-2018 ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿ ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುoಬದ ಕುಮಾರಿ ಪೂಜಾಳ ಮದುವೆಗೆ ರೂ 10,000/- ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ , ಕಾರ್ಯದರ್ಶಿ ರವಿಕಲಾ , ಸಲಹೆಗಾರ ಪರಮೇಶ್ವರ ಪೂಜಾರಿ ಹಾಗು ಸದಸ್ಯರು ಉಪಸ್ಥಿತರಿದ್ದರು.
Read More
05-08-2018, 7:50 AM
ಮಂಗಳೂರು: ಕರಾವಳಿ ಕರ್ನಾಟಕದ ಅವಳಿ ಜಿಲ್ಲೆಗಳಲ್ಲಿ ಮೂವತ್ತು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಪನ್ನಗೊಂಡಿತು. ಸರಕಾರ ಮಾಡುವ ಕಾರ್ಯ ಯುವವಾಹಿನಿ ಮಾಡಿದೆ ಡಾ. ಜಯಮಾಲಾ ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿಯ ಕಾರ್ಯಸಾಧನೆ ಇತರರಿಗೆ […]
Read More
29-07-2018, 2:02 AM
ಮಂಗಳೂರು : ನಗರಕ್ಕೆ ಹಸಿರ ಮೆರುಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ ಹೆಗ್ಡೆ ತಿಳಿಸಿದರು. ಅವರು ದಿನಾಂಕ 29.07.2018 ರಂದು ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರಿನ ಉರ್ವಾಸ್ಟೋರ್ ನಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನಾಗವೇಣಿ ,ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ, […]
Read More
17-06-2018, 4:56 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 17.06.2017 ರಂದು ಭೇಟಿ ನೀಡಿದರು ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಗಳನ್ನು ನೀಡಿ ನೊಂದ ಎಳೆ ಮನಸುಗಳಿಗೆ ಸಾಂತ್ವಾನ ನೀಡಿದರು ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ .ಕರ್ಕೇರ , ಕಾರ್ಯದರ್ಶಿ ರವಿಕಲಾ , ಉಪಾದ್ಯಕ್ಷೆ ಉಮಾ ಶ್ರೀಕಾಂತ್ ,ಕೋಶಾಧಿಕಾರಿ […]
Read More
03-06-2018, 8:42 AM
ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ದಿನಾಂಕ 03.06.2018 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಮರ್ಶಕಿ ಬಿ.ಎಮ್.ರೋಹಿಣಿ ಅವರಿಗೆ 2017 ರ ವಿಶುಕುಮಾರ್ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಪ್ರದಾನಿಸಿದ ಹಿರಿಯ ಸಂಘಟಕಿ ಕೆ.ಎ.ರೋಹಿಣಿಯವರು ಮಾತನಾಡಿ ಬಿ.ಎಮ್.ರೋಹಿಣಿಯವರ ಸಾಧನೆಗೆ ಅರ್ಹವಾಗಿ ವಿಶುಕುಮಾರ್ ಪ್ರಶಸ್ತಿ ದೊರೆತಿದೆ ಎಂದರು. ಛಲವಾದಿಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. 74 […]
Read More
05-05-2018, 4:25 PM
ಮಂಗಳೂರು : ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ ಹಾಗೂ ಆಕೆ ತನ್ನ ಕುಟುಂಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ ಎಂದು ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕರು, ಹಾಗೂ ಸಾಹಿತಿ […]
Read More