14-03-2018, 3:56 PM
ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಮಕ್ಕಳ ದಂತ ಚಿಕಿತ್ಸೆ ಮತ್ತು ತಪಾಸಣಾ ಶಿಬಿರವು ಯೆನಪೊಯ ಮೆಡಿಕಲ್ ಮತ್ತು ದಂತ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿ.14.03.2018 ರಂದು ಇಳಂತಿಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಸುಬುರವರು ದೀಪ ಬೆಳಗಿಸಿ ನೆರವೇರಿಸಿ ಮಾತನಾಡಿ ಸಮಾಜದ ಜನರಲ್ಲಿ ಉತ್ತಮ ಆರೋಗ್ಯವಿದ್ದಾಗ ಬಲಿಷ್ಠ ಸಮಾಜ ನಿರ್ಮಾಣ ಆಗುತ್ತದೆ ಈ ನಿಟ್ಟಿನಲ್ಲಿ […]
Read More
18-02-2018, 4:24 PM
ಯುವವಾಹಿನಿ (ರಿ.) ಉಪ್ಪಿನ೦ಗಡಿ ಘಟಕ ಮತ್ತು ಸ್ಥಳೀಯ ಸ೦ಘ ಸಂಸ್ಥೆಗಳ ಸ೦ಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದ೦ತ ಚಿಕಿತ್ಸಾ ಶಿಬಿರವು ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಯೆನಪೋಯ ದ೦ತ ಮಹಾ ವಿದ್ಯಾಲಯ ದೇರಳಕಟ್ಟೆ ಇಲ್ಲಿಯ ತಜ್ನ ವೈದ್ಯರ ತ೦ಡದೊ೦ದಿಗೆ ದಿನಾಂಕ 18/02/2018 ರಂದು ಸ.ಹಿ.ಪ್ರಾ. ಶಾಲೆ ಹಿರೇಬ೦ಡಾಡಿಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನ೦ಗಡಿ ಸಹಸ್ರಲಿ೦ಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯರು, ಹಿರೇಬ೦ಡಾಡಿ ಗ್ರಾ. ಪ೦ ಸದಸ್ಯರಾದ ಪ್ರಕಾಶ್ ರೈಯವರು ದೀಪ ಬೆಳಗಸಿ ಉದ್ಘಾಟಿಸಿ […]
Read More
01-11-2017, 8:58 AM
ಯುವವಾಹಿನಿ ಸಂಸ್ಥೆಯ ಮೂವತ್ತು ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಪ್ರದಾನಿಸಿದರು. ಸಮಾಜದಲ್ಲಿ ತೀರಾ ಹಿಂದುಳಿದಿರುವ ೯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ನೂರಕ್ಕೂ ಅಧಿಕ […]
Read More
18-10-2017, 2:22 PM
ಪರಸ್ಪರ ದೀಪಗಳಿಂದ ಬೆಸೆದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಒಂದು ಅಲೌಕಿಕ ಬೆಳಕಿನ ಚಿತ್ತಾರವನ್ನು ಪೂರ್ತಿ ಬಿಡಿಸಿದಂತೆ ಕಾಣುವ ಅಥವಾ ಅದನ್ನು ಅನುಭವಿಸುವ ಅವಕಾಶವಿರುವುದು ದೀಪಗಳ ಹಬ್ಬಕ್ಕೆ ಮಾತ್ರ, ತುಳುನಾಡಿನಲ್ಲಿ ತುಡಾರ ಪರ್ಬಕ್ಕೆ ವಿಶೇಷ ಮಹತ್ವ ಇದೆ. ಕುಟುಂಬದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಶಕ್ತಿ ಹಬ್ಬಗಳಿಗಿದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ.ತಮ್ಮಯ ತಿಳಿಸಿದರು. ಅವರು ದಿನಾಂಕ 18.10.2017 ರಂದು ಉಪ್ಪಿನಂಗಡಿ ರಾಜ್ ಮಹಲ್ ಪೆದಮ್ಮಲೆ ( ವರದ್ರಾಜ್ ನಿವಾಸ) ಇಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಜರುಗಿದ ತುಡಾರ […]
Read More
30-09-2017, 3:15 AM
ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]
Read More
26-08-2017, 9:21 AM
ಮಂಗಳೂರಿನ ಸೋಮೇಶ್ವರ ಗ್ರಾಮದ ದಿವಂಗತ ಪುರುಷೋತ್ತಮ ಮತ್ತು ಪ್ರಮೀಳಾ ದಂಪತಿಯ ದ್ವಿತೀಯ ಪುತ್ರ ವೇಗದ ಓಟದ ಸರದಾರನಾಗಿ ಮೂಡಿಬರುತ್ತಿರುವ ಪ್ರತಿಭೆ ಸ್ವಸ್ತಿಕ್ ಕೆ. ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಸಂದೀಪ್ರವರ ಮಾರ್ಗದರ್ಶನದಲ್ಲಿ ಸಾಧನೆಯ ಸರದಾರ. ಸ್ವಸ್ತಿಕ್ ಕೆ. ಅವರು ಯುವ ಜಿಲ್ಲಾಮಟ್ಟದ 100 ಮೀಟರ್ ಓಟದಲ್ಲಿ ಪ್ರಥಮ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 16 ವರ್ಷ ವಯೋಮಾನದ 100 ಮೀಟರ್ ಸ್ಪರ್ಧೆಯಲ್ಲಿ 10.8 ಸೆಕೆಂಡಿನ ದಾಖಲೆಯೊಂದಿಗೆ ಪ್ರಥಮ ಸ್ಥಾನ, 2016-17ನೇ ಸಾಲಿನಲ್ಲಿ 19ರ ವಯೋಮಿತಿಯ ಸ್ಪರ್ಧೆಯಲ್ಲಿ […]
Read More
26-08-2017, 9:14 AM
ಮಂಗಳೂರಿನ ನಿವಾಸಿ ಶ್ರೀ ಡಿ. ಭಾಸ್ಕರ ಸನಿಲ್ ಮತ್ತು ಶ್ರೀಮತಿ ವಜ್ರ ಬಿ. ಸನಿಲ್ ದಂಪತಿಗಳ ಸುಪುತ್ರಿ ಕುಮಾರಿ ವಿಭಾ ಬಿ. ಇವರು ಕಲಿಕೆಯಲ್ಲಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ಇವರು 2017ರ ಪಿ.ಯು.ಸಿ ಪರೀಕ್ಷೆಯಲ್ಲಿ 600ರಲ್ಲಿ 583 ಅಂಕ ಗಳಿಸುವುದರೊಂದಿಗೆ PCMB ಯಲ್ಲಿ 97.16% ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮಂಗಳೂರಿನ ಮಹೇಶ್ ಪಿ.ಯು. ಕಾಲೇಜು ವಿದ್ಯಾರ್ಥಿನಿಯಾಗಿರುವ ಇವರು ಉತ್ತಮ ನಾಯಕತ್ವದ ಗುಣಗಳನ್ನು ಈಗಾಗಲೇ ಮೈಗೂಡಿಸಿಕೊಂಡಿದ್ದು, 2016-17ರಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ […]
Read More
26-08-2017, 9:06 AM
ಬೆಳ್ತಂಗಡಿ ತಾಲೂಕಿನ ಹಳೇಕೋಟೆ ಬಾರ್ಯ ನಿವಾಸಿ ಶ್ರೀಮತಿ ರತ್ನ ಹಾಗೂ ಶ್ರೀ ಸುಂದರ ಬಂಗೇರ ದಂಪತಿಗಳ ಹೆಮ್ಮೆಯ ಸುಪುತ್ರರಾದ ಸ್ಮಿತೇಶ್ ಎಸ್. ಬಾರ್ಯ ಇವರು ನಾಟಕರಂಗ ಮತ್ತು ಸಾಂಸ್ಕ್ರತಿಕ ರಂಗದಲ್ಲಿ ಸಾಧನೆಗೈದು ಎಲ್ಲರ ಗಮನ ಸೆಳೆದವರು.Msc. In Psychology ಪದವಿ ಗಳಿಸಿರುವ ಇವರು ಪ್ರಸ್ತುತ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮನಃಶಾಸ್ತ್ರ ಉಪನ್ಯಾಸಕರಾಗಿದ್ದಾರೆ. 500ರಕ್ಕೂ ಮಿಕ್ಕಿ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. 25ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯ ಹಾಗೂ 20ಕ್ಕೂ ಮಿಕ್ಕಿ ನಾಟಕಗಳ ನಿರ್ದೇಶನ ಮಾಡಿರುವ ಇವರು […]
Read More
15-08-2017, 9:24 AM
ಉಡುಪಿಯ ಶ್ರೀ ಕಿಶೋರ್ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಸುಪುತ್ರಿ. ಕಲ್ಯಾಣಪುರ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಪ್ರತೀಕ್ಷಾ ಕೆ. ಇವರು ವಾಲಿಬಾಲ್ ಕ್ರೀಡೆಯಲ್ಲಿ ಮಿಂಚುತ್ತಿರುವ ಧ್ರುವತಾರೆ. ಓರ್ವ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡಿರುವ ಸಾಧಕಿ ಇವರು 2014ರಲ್ಲಿ ನಡೆದ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ, 2015 ರಲ್ಲಿ ಬೆಂಗಳೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ, 2016ರಲ್ಲಿ ಮಂಗಳೂರಿನಲ್ಲಿ […]
Read More