ಉಪ್ಪಿನಂಗಡಿ : ದಿನಾಂಕ 23-12-2018ನೇ ಆದಿತ್ಯವಾರದಂದು ದಿ.ಗುರುಸಾಗರ್ ಇವರ ಸ್ಮರಣಾರ್ಥದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕ ಮತ್ತು ಶ್ರೀ ರಾಮ ಭಜನಾ ಮಂಡಳಿ ಕರುವೇಲು ಮತ್ತು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಹಾಗೂ ಯೆನೊಪೊಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಬಂಟ್ವಾಳ ತಾಲೂಕಿನ ಕರವೇಲು ಶಾಲೆಯಲ್ಲಿ ನಡೆಯಿತು.
ಈ ಶಿಬಿರವನ್ನು ದಿ. ಗುರುಸಾಗರ್ ಇವರ ತಾಯಿ ವಂದನಾ ಶರತ್ ಮುದಲಾಜೆ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಉಪ್ಪಿನಂಗಡಿ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ವಹಿಸಿದ್ದರು. ಅತಿಥಿಗಳಾಗಿ ಶ್ರೀ ರಾಮ ಭಜನಾ ಮಂಡಳಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಧನ್ಯಕುಮಾರ್.ರೈ ಬಿಳಿಯೂರು ಗುತ್ತು ,ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ. ರಾಜರಾಮ್, ಬೆಳ್ತಂಗಡಿ ಎ.ಪಿ.ಎಂ.ಸಿ ಸದಸ್ಯರಾದ ಜಯನಂದ ಕಲ್ಲಾಪು, ಯುವವಾಹಿನಿ ಉಪ್ಪಿನಂಗಡಿ ಘಟಕದ ಉಪಾಧ್ಯಕ್ಷರಾದ ಡಾ. ಆಶಿತ್, ಸಲಹೆಗಾರರಾದ ವರದರಾಜ್.ಎಂ ,ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ತಾರನಾಥ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಜನ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಸಮಾಜಮುಖಿ ಕಾರ್ಯಕ್ರಮ ಅಭಿನಂದನೆಗಳು…