05-08-2018, 7:50 AM
ಮಂಗಳೂರು: ಕರಾವಳಿ ಕರ್ನಾಟಕದ ಅವಳಿ ಜಿಲ್ಲೆಗಳಲ್ಲಿ ಮೂವತ್ತು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಪನ್ನಗೊಂಡಿತು. ಸರಕಾರ ಮಾಡುವ ಕಾರ್ಯ ಯುವವಾಹಿನಿ ಮಾಡಿದೆ ಡಾ. ಜಯಮಾಲಾ ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿಯ ಕಾರ್ಯಸಾಧನೆ ಇತರರಿಗೆ […]
Read More
29-07-2018, 4:15 PM
ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ದಿನಾಂಕ 29.07.2018 ರಂದು ಪಡುಬಿದ್ರಿ ಬಿಲ್ಲವ ಸಂಘದ ಪರಿಸರದಲ್ಲಿ ಶ್ರಮದಾನವು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಕಾರ್ಯದರ್ಶಿ ಶೈಲಜಾ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More
12-07-2018, 4:22 PM
ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ದಿನಾಂಕ ೧೨. ೦೭. ೨೦೧೮ ಪಡುಬಿದ್ರಿ ನಾರಾಯಣಗುರು ಮಂದಿರದಲ್ಲಿ ವಾರದ ಭಜನೆಯು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು, ಬಿಲ್ಲವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು.
Read More
10-06-2018, 2:17 AM
ಪಡುಬಿದ್ರಿ : ಸಮಾಜದಲ್ಲಿ ಯುವಜನಾಂಗವು ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯ. ಹಲವಾರು ಸಮಸ್ಯೆಗಳ ನಿವಾರಣೆಗೆ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಲ್ಲವರ ಯೂನಿಯನ್, ಕುದ್ರೊಟ್ಟು, ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳ್ ಬಡಾದ ಕಾರ್ಯದರ್ಶಿ ರಮೇಶ್ ಅಂಚನ್ ತಿಳಿಸಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾ ಭವನದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕದ 2018 ನೇ ಸಾಲಿನ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು […]
Read More
31-05-2018, 8:06 AM
ಪಡುಬಿದ್ರೆ : ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ದೀಪಕ್ ಕೆ.ಬೀರ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ದೀಪಕ್. ಕೆ. ಬೀರ ಉಪಾಧ್ಯಕ್ಷರು : ಯೋಗೀಶ್ ಪೂಜಾರಿ ಕಾರ್ಯದರ್ಶಿ : ಶೈಲಜಾ ಜೊತೆ ಕಾರ್ಯದರ್ಶಿ : ಶಾಶ್ವತ್ ಕೋಶಾಧಿಕಾರಿ : ಅಶ್ವಥ್ ಪಾದೆಬೆಟ್ಟು ಸಂಘಟನಾ ಕಾರ್ಯದರ್ಶಿ : ಸುಧೀರ್ ನಿರ್ದೇಶಕರು: ನಾರಾಯಣ ಗುರು ತತ್ವ ಪ್ರಚಾರ : ನಿಶ್ಮಿತಾ ಪಿ.ಎಚ್ ಸಮಾಜಸೇವೆ : ಅಕ್ಷಯ್ ಕುಮಾರ್ ವ್ಯಕ್ತಿತ್ವ ವಿಕಸನ : ಪ್ರಜ್ವಲ್ ಉದ್ಯೋಗ ಮತ್ತು ಭವಿಷ್ಯ […]
Read More
19-11-2017, 3:14 AM
ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ವೇದಿಕೆಗಳು ಅನಿವಾರ್ಯ. ಇಂತಹ ವೇದಿಕೆಗಳ ಮೂಲಕ ಪ್ರತಿಭೆಯ ಜೊತೆಗೆ, ಆತ್ಮವಿಶ್ವಾಸ ಮೂಡಲು ಸಹಕಾರಿಯಾಗಿದೆ. ಇಂದು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆತ್ತವರು ಮತ್ತು ಶಿಕ್ಷಕರು ಗಮನಹರಿಸುತ್ತಿರುವುದು ಅನಿವಾರ್ಯವಾಗಿದೆ ಎಂದು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೋ ಹೇಳಿದರು. ಅವರು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 19.11.2017 ರಂದು ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ […]
Read More
01-11-2017, 8:58 AM
ಯುವವಾಹಿನಿ ಸಂಸ್ಥೆಯ ಮೂವತ್ತು ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಪ್ರದಾನಿಸಿದರು. ಸಮಾಜದಲ್ಲಿ ತೀರಾ ಹಿಂದುಳಿದಿರುವ ೯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ನೂರಕ್ಕೂ ಅಧಿಕ […]
Read More
30-09-2017, 3:15 AM
ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]
Read More
21-09-2017, 5:02 PM
ಆಧುನೀಕರಣ ಪ್ರಭಾವದಿಂದ ತಂತ್ರಜ್ಞಾನದ ಒಳಿತುಗಳಂತೆ ಕೆಡುಕುಗಳು ಉಂಟಾಗಿ ಯುವ ಸಮುದಾಯದ ಮೇಲೆ ಅದರ ಪರಿಣಾಮ ಪ್ರಖರವಾಗಿದೆ. ಹೆತ್ತವರು ಉತ್ತಮವಾಗಿ ಶಿಶು ಆರೈಕೆಯೊಂದಿಗೆ ಮಕ್ಕಳ ಮೇಲೆ ಯಾವುದೇ ಕೆಟ್ಟ ಪ್ರಭಾವ ಆಗದಂತೆ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ನಾರಾಯಣಗುರುವರ್ಯರಂತ ಮಹನೀಯರ ತತ್ವಾದರ್ಶಗಳನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂಜ, ಕುತ್ಯಾರು ಬ್ರಹ್ಮಬೈದರ್ಕಳ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಉಮೇಶ್ ಕೋಟ್ಯಾನ್ ತಿಳಿಸಿದರು. ಅವರು ಪಡುಬಿದ್ರಿ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ […]
Read More
18-06-2017, 1:03 PM
ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ನಂದಿಕೂರು ಆಯ್ಕೆಯಾಗಿದ್ದಾರೆ. ದಿನಾಂಕ 18.06.2017 ನೇ ಆದಿತ್ಯವಾರ ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಸಂತೋಷ್ ಕುಮಾರ್ ನಂದಿಕೂರು ನೇತ್ರತ್ವದ 13 ಜನರ ತಂಡವು ಪ್ರತಿಜ್ಷಾ ವಿಧಿ ಸ್ವೀಕರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಪ್ರತಿಜ್ಷಾ ವಿಧಿ ಬೋಧಿಸಿದರು.ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಪಡುಬಿದ್ರೆ ನಾರಾಯಣಗುರು ಮಹಿಳಾ ಮಂಡಳಿ […]
Read More