ಪಡುಬಿದ್ರಿ : ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ 01.12.2018 ರಂದು ಮಾನಸಿಕ ಅಸಮರ್ಥತೆಯಿಂದ ಬಳಲುವ ಮಕ್ಕಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಜಮಾಡಿ ಬಳಿಯ ನಿವಾಸಿ ಜಯಂತಿಯವರಿಗೆ ಘಟಕದಿಂದ ರೂ 6,000 (ಆರುಸಾವಿರ) ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಉಪಾಧ್ಯಕ್ಷರಾದ ಯೋಗೀಶ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಸುಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್, ದಯಾನಂದ ,ಪ್ರಕಾಶ್ ಉಪಸ್ಥಿತರಿದ್ದರು.